Viral video: ಹಕ್ಕಿಯಿಂದ ಧ್ವಜರೋಹಣ ವಿಡಿಯೋ ವೈರಲ್; ಬಯಲಾಯ್ತು ಅಸಲಿ ಸತ್ಯ!

Viral video: ಆಗಸ್ಟ್ 15 ಸ್ವಾತಂತ್ರ ದಿನಾಚರಣೆಯ ದಿನದಂದು ಕೇರಳದ ತಿರುವನಂತಪುರದಲ್ಲಿ ಧ್ವಜ ಹಾರಿಸುವಾಗ ಕಂಬದ ಮೇಲೆ ಧ್ವಜ ಸಿಲುಕಿಕೊಂಡಾಗ ಇದೇ ಸಮಯದಲ್ಲಿ, ಒಂದು ಹಕ್ಕಿ ಆಕಾಶದಿಂದ ಬಂದು, ತ್ರಿವರ್ಣ ಧ್ವಜವನ್ನು ಹಾರಿಸಿದ ವಿಡಿಯೋ ಎಲ್ಲೆಡೆ ವೈರಲ್ (Viral video) ಆಗಿತ್ತು. ಆದ್ರೆ ಈ ವಿಡಿಯೋದ ಅಸಲಿ ಸತ್ಯ ಬಯಲಾಗಿದೆ.
ಹೌದು, ಸಾಮಾಜಿಕ ಜಾಲತಾಣದಲ್ಲಿ ಹಕ್ಕಿ ಧ್ವಜರೋಹಣ ಮಾಡಿದ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಇದೊಂದು ಪವಾಡ, ಹಕ್ಕಿ ಸ್ವರ್ಗದಿಂದ ಬಂದಂತೆ ತೋರುತ್ತದೆ, ಹಕ್ಕಿಯು ದೇಶಭಕ್ತ ಯೋಧನ ಪುನರ್ಜನ್ಮವಾಗಿದೆ ಹೀಗೆ ನಾನಾ ರೀತಿಯಲ್ಲಿ ತಮ್ಮ ಅಭಿಪ್ರಾಯವನ್ನೂ ಹಂಚಿಕೊಂಡಿದ್ದರು. ಆದರೆ, ಇದರ ಹಿಂದೆ ಅಸಲಿಯತ್ತೆ ಬೇರೆಯಿದೆ. ಯಾಕೆಂದರೆ ಸತ್ಯ ಕಂಡರೂ ಪ್ರಮಾಣಿಸಿ ನೋಡು ಎಂಬ ಗಾದೆ ಇದೆ.
ಹೌದು, ತಿರುವನಂತಪುರದಲ್ಲಿ ನಡೆದ ಧ್ವಜರೋಹಣದ ವೇಳೆ ಧ್ವಜ ಕಂಬದ ಮೇಲೆ ಸಿಕ್ಕಿಕೊಂಡಿದ್ದು ನಿಜ ಅದರೆ ಹಕ್ಕಿ ಬಂದು ಅದನ್ನು ಬಿಡಿಸಿದಲ್ಲ. ಅಚಾನಕ್ ಆಗಿ ಧ್ವಜ ಸಿಕ್ಕಿಕೊಳ್ಳುವ ಸಮಯದಲ್ಲೇ ಅಲ್ಲೇ ಪಕ್ಕದ ಮರದ ಮೇಲೆ ಹಕ್ಕಿ ಕುಳಿತುಕೊಳ್ಳಲು ಬಂದಿದ್ದು, ಧ್ವಜ ಬಿಚ್ಚಿಕೊಳ್ಳುತ್ತಲೇ ವಿದ್ಯಾರ್ಥಿಗಳು ಚಪ್ಪಾಳೆ ಶಬ್ದಕ್ಕೆ ಹಕ್ಕಿ ಹಾರಿಹೋಗಿದೆ.
ಸದ್ಯ ಈ ಅಸಲಿ ವಿಚಾರ ಗೊತ್ತಾಗಲು ನೀವು ಈ ವಿಡಿಯೋವನ್ನು ಇನ್ನೊಂದು ದಿಕ್ಕಿನಿಂದ ನೋಡಿದಾಗ ಸತ್ಯ ಅರಿವಾಗಲಿದೆ. ಯಾಕೆಂದರೆ ಧ್ವಜರೋಹಣ ಮಾಡುತ್ತಿದ್ದಾಗ ವ್ಯಕ್ತಿಯೊಬ್ಬರು ಬೇರೆಡೆಯಿಂದ ವಿಡಿಯೋ ಮಾಡಿದಾಗ ಈ ಅಸಲಿ ಸತ್ಯ ಬೆಳಕಿಗೆ ಬಂದಿದೆ.
ಇಲ್ಲಿದೆ ವಿಡಿಯೋ ಲಿಂಕ್
https://x.com/shilpa_cn/status/1824525863079026989https://x.com/shilpa_cn/status/1824525863079026989