Walking Tips: ಒಂದು ಕೆಜಿ ತೂಕ ಕಡಿಮೆ ಮಾಡಲು ಎಷ್ಟು ಹೆಜ್ಜೆ ನಡೆಯಬೇಕು? ಈಗಲೇ ತಿಳಿದು, ಇಂದಿನಿಂದಲೇ ವಾಕ್ ಶುರುಮಾಡಿ

Walking Tips: ಪುರುಷರಾಗಲಿ ಅಥವಾ ಮಹಿಳೆಯರಾಗಲಿ ಅವರೆಲ್ಲರಿಗೂ ಕೂಡ ತಾವು ಚಂದವಾಗಿ ಕಾಣಬೇಕು, ಸ್ಮಾರ್ಟ್ ಆಗಿ ಕಾಣಬೇಕು ಎಂಬ ಆಸೆ. ಆದರೆ ಏನು ಮಾಡೋದು, ಅವರಿರುವ ಎತ್ತರ, ವಿಪರೀತವಾಗಿ ಬೆಳೆದ ಬೊಜ್ಜು, ದಡೂತಿ ದೇಹ ಇದೆಲ್ಲದಕ್ಕೂ ಅಡ್ಡಿ ಬರುತ್ತದೆ. ಹೀಗಾಗಿ ಸಣ್ಣಗಾಗಲು ಅನೇಕರು ಹಲವು ವಿಧಧ ಪ್ರಯೋಗ ಮಾಡುತ್ತಾರೆ. ಆದರೆ ಯಾವುದೂ ಫಲ ಕೊಡುವುದಿಲ್ಲ.
ಇತ್ತೀಚಿನ ದಿನಗಳಲ್ಲಿ ಜಿಮ್, ಯೋಗ ಜೊತೆಗೆ ಹೆಚ್ಚಿನ ಜನರು ವಾಕಿಂಗ್ ಗೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ನಗರ ಪ್ರದೇಶಗಳಲ್ಲಿ ಇದು ಹೆಚ್ಚು. ಬೆಳಗ್ಗೆ, ಸಂಜೆ ಇದನ್ನು ನಾವು ಕಾಣಬಹುದು. ಇದರಿಂದಲೂ ಸಾಕಷ್ಟು ಪ್ರಯೋಜನ ಇದೆ. ಇಡೀ ದೇಹ ಸದಾ ಆಕ್ಟೀವ್ ಆಗಿರುತ್ತದೆ. ದೇಹದ ಬೊಜ್ಜು ಕರಗಿಸಿ ನಮ್ಮನ್ನು ಸಣ್ಣಗೂ ಮಾಡುತ್ತದೆ. ಒಟ್ಟಿನಲ್ಲಿ ಮ ತೂಕ ಇಳಿಸುವಲ್ಲಿ ವಾಕಿಂಗ್ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಒಂದು ಕಿಲೋ ತೂಕವನ್ನು ಕಳೆದುಕೊಳ್ಳಲು ನೀವು ದಿನಕ್ಕೆ ಎಷ್ಟು ಹೆಜ್ಜೆಗಳನ್ನು ನಡೆಯಬೇಕು ಎಂದು ನಿಮಗೆ ತಿಳಿದಿದೆಯೇ?
ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ವೆಸ್ಟ್ ಝೋನ್ ನ ಇನ್ನೋವೇಶನ್ ಕಮಿಟಿಯ ಡಾ.ಐಜಾಜ್ ಆಶಯ್ ಅವರು ಈ ವಿಷಯದ ಕುರಿತು ಮಾತನಾಡಿದ್ದು ವಿವರವಾಗಿ ವಿವರಿಸಿದ್ದಾರೆ. ಅವರು ಹೇಳುವಂತೆ ‘ಸಾಮಾನ್ಯವಾಗಿ ಒಂದು ಕೆಜಿ ದೇಹದ ತೂಕವನ್ನು ಕಳೆದುಕೊಳ್ಳಲು, ಒಬ್ಬರು ಸುಮಾರು 7,700 ಕ್ಯಾಲೊರಿಗಳನ್ನು ಬರ್ನ್ ಮಾಡಬೇಕಾಗುತ್ತದೆ. ಆ ಲೆಕ್ಕಾಚಾರದ ಪ್ರಕಾರ, ಒಂದು ಕಿಲೋ ದೇಹದ ಕೊಬ್ಬು ಸುಮಾರು 7,700 ಕ್ಯಾಲೊರಿಗಳಿಗೆ ಸಮನಾಗಿರುತ್ತದೆ. 70 ಕೆಜಿ ತೂಕದ ವ್ಯಕ್ತಿ ಸರಾಸರಿ 1,000 ಹೆಜ್ಜೆ ನಡೆದರೆ, ದೇಹವು 40 ರಿಂದ 50 ಕ್ಯಾಲೊರಿಗಳನ್ನು ಸುಡುತ್ತದೆ. ಆದಾಗ್ಯೂ, ಇದು ತೂಕ, ವಾಕಿಂಗ್ ವೇಗ ಮತ್ತು ಭೂಪ್ರದೇಶವನ್ನು ಅವಲಂಬಿಸಿ ಬದಲಾಗಬಹುದು’
10,000 ಹೆಜ್ಜೆ ನಡೆದರೆ ದೇಹವು 400 ರಿಂದ 500 ಕ್ಯಾಲೊರಿಗಳನ್ನು ಸುಡುತ್ತದೆ. ಆ ಲೆಕ್ಕಾಚಾರದ ಪ್ರಕಾರ, ಒಂದು ಕಿಲೋ ತೂಕ ನಷ್ಟದ ಭಾಗವಾಗಿ 7,700 ಕ್ಯಾಲೊರಿಗಳನ್ನು ಬರ್ನ್ ಮಾಡಲು 1,92,500 ರಿಂದ 3,85,000 ಹೆಜ್ಜೆಗಳನ್ನು ತೆಗೆದುಕೊಳ್ಳಬೇಕು. ವಾಕಿಂಗ್ ತೂಕವನ್ನು ಕಳೆದುಕೊಳ್ಳುವ ನಿಮ್ಮ ಪ್ರಾಥಮಿಕ ವಿಧಾನವಾಗಿದೆ, ಆದರೆ ದಿನಕ್ಕೆ 15,000 ರಿಂದ 30,000 ಹೆಜ್ಜೆಗಳ ನಡಿಗೆ ನಿಮ್ಮ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ದಿನಕ್ಕೆ 15,000 ರಿಂದ 30,000 ಹೆಜ್ಜೆಗಳನ್ನು ನಡೆಯುವುದು ಎಲ್ಲರಿಗೂ ಸಾಧ್ಯವಲ್ಲ. ಅದಕ್ಕಾಗಿಯೇ ನೀವು ದಿನಕ್ಕೆ 10,000 ಅಡಿಗಳ ಗುರಿಯೊಂದಿಗೆ ನಡೆಯಲು ಪ್ರಾರಂಭಿಸಬೇಕು. ನಂತರ ಹೆಜ್ಜೆಗಳನ್ನು ಹಂತ ಹಂತವಾಗಿ ಹೆಚ್ಚಿಸಬೇಕು ಎನ್ನುತ್ತಾರೆ.