Muda Scam: ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿ ನೀಡಿದ್ದೇಕೆ? ರಾಜ್ಯಪಾಲರು ನೀಡಿದ ಸಮರ್ಥನೆ ಹೀಗಿದೆ

Share the Article

Muda Scam: ರಾಜ್ಯದಲ್ಲಿ ಮೂಡಾ ಹಗರಣ ಭಾರೀ ಸದ್ದುಮಾಡುತ್ತಿದ್ದು, ಈ ಮುಡಾ ಹಗರಣದ(Muda Scam) ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್(Thavar Chand Gehlot) ಪ್ರಾಸಿಕ್ಯೂಶನ್ ನಿರ್ಣಯವನ್ನು ಹೊರಡಿಸಿದ್ದಾರೆ. ಇದನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ. ಅಲ್ಲದೆ ರಾಜ್ಯಾದ್ಯಂತ ರಾಜ್ಯಪಾಲರ ನಡೆಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಕಾಂಗ್ರೆಸ್ ನಾಯಕರು ಪ್ರತಿಭಟಿಸುತ್ತಿದ್ದಾರೆ.

ಸಿದ್ದರಾಮಯ್ಯ(CM Siddaramaiah) ವಿರುದ್ದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪ್ರಾಸಿಕ್ಯೂಶನ್ ನಿರ್ಣಯವನ್ನು ಹೊರಡಿಸುತ್ತಿದ್ದಂತೆ ಇತ್ತ ಸಚಿವ ಸಂಪುಟ ಸಭೆ ನಡೆಸಿದ ಕಾಂಗ್ರಸ್ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಸಭೆ ಬಳಿಕ ಸುದ್ದಿಗೋಷ್ಠಿ ಮೂಲಕ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್(D K Shivkumar), ಸಿದ್ದರಾಮಯ್ಯ ರಾಜೀನಾಮೆ ನೀಡುವ ಪ್ರಶ್ನಯೇ ಇಲ್ಲ ಎಂದು ಮಹತ್ವದ ಹೇಳಿಕೆ ನೀಡಿದ್ದಾರೆ. ಈ ಬೆನ್ನಲ್ಲೇ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿ ನೀಡುವ ಅವಶ್ಯಕತೆ ಏನು ಎಂಬ ಬಗ್ಗೆ ಸಮರ್ಥನೆ ನೀಡಿದ್ದಾರೆ. ಅವು ಈ ಕೆಳಗಿನಂತಿವೆ.

* ಮುಡಾದಲ್ಲಿ ನಡೆದಿರುವ ಅಕ್ರಮಗಳ ಕುರಿತು ತನಿಖೆಗೆ ಐಎಎಸ್ ಅಧಿಕಾರಿ ವೆಂಕಟಾಚಲಪತಿ ನೇತೃತ್ತದಲ್ಲಿ ಸಮಿತಿ ನೇಮಿಸುವ ತೀರ್ಮಾನವನ್ನು ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿತ್ತು. ಹಗರಣದ ಕುರಿತು ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾಗುತ್ತಿದ್ದಂತೆಯೇ ಏಕಸದಸ್ಯ ವಿಚಾರಣಾ ಆಯೋಗ ನೇಮಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಬದಲಿ ನಿವೇಶನಗಳ ಹಂಚಿಕೆ, ಜಮೀನು ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂಬುದನ್ನು ಏಕಸದಸ್ಯ ಆಯೋಗದ ಕಾರ್ಯವ್ಯಾಪ್ತಿ ನಿಗದಿಪಡಿಸಿರುವ ಆದೇಶವೇ ದೃಢಪಡಿಸುತ್ತದೆ. ಐಎಎಸ್ ಅಧಿಕಾರಿಯ ನೇತೃತ್ವದಲ್ಲಿ ತನಿಖೆಗೆ ಆದೇಶಿಸಿ, ದಿಢೀರನೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಏಕಸದಸ್ಯ ಆಯೋಗ ರಚಿಸುವ ಮೂಲಕ ಸರ್ಕಾರವು ಮುಡಾದಲ್ಲಿ ಪ್ರಭಾವಿ ವ್ಯಕ್ತಿಗಳಿಂದ ಹಗರಣ ನಡೆದಿರುವುದನ್ನು ಒಪ್ಪಿಕೊಂಡಿದೆ. ಈ ವಿಚಾರದಲ್ಲಿ ಸಂಪುಟದ ನಿರ್ಧಾರವು ವಿಶ್ವಾಸ ಮೂಡಿಸುವಂತಿಲ್ಲ.

• ಯಾರ ವಿರುದ್ಧ ಆರೋಪಗಳು ಕೇಳಿಬಂದಿವೆಯೋ ಅದೇ ವ್ಯಕ್ತಿ ತನಿಖೆಯ ಕುರಿತು ನಿರ್ಧಾರ ಕೈಗೊಳ್ಳುವ ಅಧಿಕಾರ ಚಲಾಯಿಸಬಾರದು ಎಂಬುದು ಕಾನೂನಿನ ಅಡಿಯಲ್ಲಿ ಸ್ಪಷ್ಟವಾಗಿ ತೀರ್ಮಾನವಾಗಿದೆ. ಈ ಪ್ರಕರಣದಲ್ಲಿ ಗಂಭೀರ ಅರೋಪಗಳು ಕೇಳಿಬಂದಿದ್ದು, ದೂರಿನಲ್ಲಿರುವ ದಾಖಲೆಗಳು ಆರೋಪವನ್ನು ಮೇಲ್ನೋಟಕ್ಕೆ ದೃಢಪಡಿಸುವಂತಿದ್ದರೂ ತನಿಖೆಗೆ ಅನುಮತಿ ಕೋರಿರುವ ಅರ್ಜಿ ತಿರಸ್ಕರಿಸುವಂತೆ ಸಲಹೆ ನೀಡಲು ಸಂಪುಟ ಸಭೆಯು ಕೈಗೊಂಡಿರುವ ನಿರ್ಣಯವು ವಿವೇಕರಹಿತವಾದುದು.

• ಸಿದ್ದರಾಮಯ್ಯ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ದೂರುಗಳು, ಜತೆಗಿರುವ ದಾಖಲೆಗಳು, ಸಂಪುಟದ ಸಲಹೆ ಮತ್ತು ಕಾನೂನು ತಜ್ಞರ ಅಭಿಪ್ರಾಯಗಳನ್ನು ಪರಿಶೀಲಿಸಲಾ- ಗಿದೆ. ಈ ವಿಷಯದಲ್ಲಿ ಎರಡು ಬಗೆಯ ಅಭಿಪ್ರಾಯಗಳಿವೆ. ಆರೋಪಗಳು ಮತ್ತು ಅವುಗಳ ಜತೆಗಿರುವ ದಾಖಲೆಗಳು ಅಪರಾಧ ನಡೆದಿರುವುದನ್ನು ದೃಢಪಡಿಸುವಂತಿವೆ ಎಂಬುದು ನನಗೆ ಮನವರಿಕೆಯಾಗಿದೆ. ಈ ಕುರಿತು ತಟಸ್ಥ, ವಸ್ತುನಿಷ್ಠ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸುವುದು ಅತ್ಯಂತ ಅಗತ್ಯವಾಗಿದೆ.

Leave A Reply