Gurentee : ರಾಜ್ಯ ಸರ್ಕಾರದಿಂದ ಸದ್ಯದಲ್ಲೇ ಮತ್ತೊಂದು ಗ್ಯಾರಂಟಿ ಘೋಷಣೆ?

Gurentee : ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಕಾಂಗ್ರೆಸ್ ಸರ್ಕಾರವು ಚುನಾವಣಾ ಪೂರ್ವದಲ್ಲಿ ಪಂಚ ಗ್ಯಾರಂಟಿಗಳನ್ನು ಘೋಷಣೆ ಮಾಡಿ ಜನರ ವಿಶ್ವಾಸ ಪಡೆದು ಅಧಿಕಾರಕ್ಕೆ ಬಂದಿತ್ತು. ಅಂತಯೇ ಅಧಿಕಾರದ ಬಳಿಕ ಅಷ್ಟು ಗ್ಯಾರೆಂಟಿಗಳನ್ನು ಜಾರಿಗೊಳಿಸಿ ತನ್ನ ಮಾತನ್ನು ಸರ್ಕಾರ ಉಳಿಸಿಕೊಂಡಿದೆ. ಗ್ಯಾರೆಂಟಿಗಳ ವಿಷಯವಾಗಿ ರಾಜ್ಯದಲ್ಲಿ ಪರ ವಿರೋಧಗಳ ಚರ್ಚೆಗಳು ಆಗುತ್ತವೆ. ಈ ಬೆನ್ನಲ್ಲೇ ರಾಜ್ಯ ಸರ್ಕಾರಕ್ಕೆ ಮತ್ತೊಂದು ಗ್ಯಾರಂಟಿಯನ್ನು ಘೋಷಿಸುವಂತೆ ಬಿಜೆಪಿ ಶಾಸಕರು ಒಬ್ಬರು ಆಗ್ರಹಿಸಿದ್ದಾರೆ.
ಹೌದು, ವಿಧಾನಸಭೆಯಲ್ಲಿ ಇಂದು ಬಿಜೆಪಿ ಶಾಸಕ ಕಾಂಗ್ರೆಸ್‌ಗೆ ಸೀರೆ ಗ್ಯಾರಂಟಿ ಘೋಷಣೆ ಮಾಡುವಂತೆ ಆಗ್ರಹಿಸಿದ್ದಾರೆ. ವಿಧಾನಸಭೆಯಲ್ಲಿ ಸೀರೆ ಗ್ಯಾರಂಟಿ ಘೋಷಣೆಗೆ ಬಿಜೆಪಿ ಶಾಸಕ ಸಿದ್ದು ಸವದಿ ಆಗ್ರಹಿಸಿದ್ದು, ಸರ್ಕಾರಿ ನೌಕರರು ವರ್ಷಕ್ಕೆ ಎರಡು ಸೀರೆ ಖರೀದಿಸಲಿ, ರೇಷನ್ ಕಾರ್ಡ್ ಇದ್ದವರಿಗೆ ಎರಡು ಸೀರೆಯನ್ನು ಸರ್ಕಾರ ಗಿಫ್ಟ್ ಕೊಡಲಿ ಎಂದು ಹೇಳಿದ್ದಾರೆ. ಈ ಮೂಲಕ ಸರ್ಕಾರಕ್ಕೆ ಶಾಸಕ ಸಿದ್ದು ಸವದಿ ಹೊಸ ಬೇಡಿಕೆ ಇಟ್ಟಿದ್ದಾರೆ.
ನೇಕಾರರು ಬಹಳ ಸಮಸ್ಯೆಯಲ್ಲಿದ್ದಾರೆ. ನೇಕಾರರು ಉತ್ಪಾದಿಸುವ ಸೀರೆ ಖರೀದಿ ಮಾಡುವವರಿಲ್ಲ. ಹೀಗಾಗಿ ಸರ್ಕಾರಿ ನೌಕರರು ಕಡ್ಡಾಯವಾಗಿ ಎರಡು ಸೀರೆ ಖರೀದಿ ಮಾಡಲಿ, ರೇಷನ್ ಕಾರ್ಡ್ ಇರುವವರಿಗೆ ವರ್ಷಕ್ಕೆ ಎರಡು ಸೀರೆಗಳನ್ನು ಸರ್ಕಾರ ಗಿಪ್ಟ್ ಕೊಡಲಿ. ಐದು ಗ್ಯಾರಂಟಿ ಗಳನ್ನು ಕೊಟ್ಟ ಸರ್ಕಾರ, ಸೀರೆ ಗ್ಯಾರಂಟಿ ಕೊಡಲಿ ಎಂದು ಆಗ್ರಹಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಶಿವಾನಂದ ಪಾಟೀಲ್, ಇದು ಸಿಎಂ ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದ ವಿಷಯ. ಅವರ ಗಮನಕ್ಕೆ ತರುತ್ತೇನೆ ಎಂದು ಹೇಳಿದರು.
Comments are closed.