Keshav Maharaj: ಬರೋಬ್ಬರಿ 64 ವರ್ಷಗಳ ಹಿಂದಿನ ದಾಖಲೆ ಮುರಿದ ಕೇಶವ್ ಮಹಾರಾಜ್!
Keshav Maharaj: ಟೆಸ್ಟ್ ಕ್ರಿಕೆಟ್ನಲ್ಲಿ ಹೊಸ ಇತಿಹಾಸ ನಿರ್ಮಿಸುವ ಮೂಲಕ ಭಾರತೀಯ ಮೂಲದ ಕೇಶವ್ ಮಹಾರಾಜ್ ಸಂಚಲನ ಸೃಷ್ಟಿಸಿದ್ದಾರೆ.
ಕೇಶವ್ ಮಹಾರಾಜ್ 2016 ರಿಂದ ಸೌತ್ ಆಫ್ರಿಕಾ ಪರ ಆಡುತ್ತಿದ್ದು, ಐಪಿಎಲ್ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದರು. ಇದಕ್ಕೂ ಮುನ್ನ ಈ ದಾಖಲೆ ಹಗ್ ಟೇಫೀಲ್ಡ್ ಹೆಸರಲ್ಲಿತ್ತು. ಇದೀಗ ಗಯಾನಾದ ಪ್ರಾವಿಡೆನ್ ಸ್ಟೇಡಿಯಂನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೂಲಕ ಸೌತ್ ಆಫ್ರಿಕಾ ಸ್ಪಿನ್ನರ್ ಕೇಶವ್ ಮಹಾರಾಜ್ (Keshav Maharaj) ಹೊಸ ದಾಖಲೆ ನಿರ್ಮಿಸಿದ್ದಾರೆ.
ಬರೋಬ್ಬರಿ 64 ವರ್ಷಗಳ ಹಿಂದೆ ಹಗ್ ಟೇಫೀಲ್ಡ್ ಎಂಬಾತ 1949 ರಿಂದ 1960 ರವರೆಗೆ ಸೌತ್ ಆಫ್ರಿಕಾ ಪರ 37 ಟೆಸ್ಟ್ ಪಂದ್ಯಗಳನ್ನಾಡಿ 11116 ಎಸೆತಗಳಲ್ಲಿ 4405 ರನ್ ನೀಡಿ 170 ವಿಕೆಟ್ಗಳನ್ನು ಕಬಳಿಸಿದ್ದರು. ಇದೀಗ 64 ವರ್ಷಗಳ ಈ ದಾಖಲೆಯನ್ನು ಮುರಿಯುವಲ್ಲಿ ಕೇಶವ್ ಮಹಾರಾಜ್ ಯಶಸ್ವಿಯಾಗಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟೆಸ್ಟ್ ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಕೇವಲ 8 ರನ್ ನೀಡಿ 2 ವಿಕೆಟ್ ಕಬಳಿಸಿದ್ದ ಕೇಶವ್ ಮಹಾರಾಜ್ ದ್ವಿತೀಯ ಇನಿಂಗ್ಸ್ನಲ್ಲಿ 3 ವಿಕೆಟ್ ಉರುಳಿಸಿದರು. ಈ ಐದು ವಿಕೆಟ್ಗಳೊಂದಿಗೆ ಸೌತ್ ಆಫ್ರಿಕಾ ಪರ ಟೆಸ್ಟ್ ಕ್ರಿಕೆಟ್ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಸ್ಪಿನ್ನರ್ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡರು.
ಈಗಾಗಲೇ ಸೌತ್ ಆಫ್ರಿಕಾ ಪರ 52 ಟೆಸ್ಟ್ ಪಂದ್ಯಗಳನ್ನಾಡಿರುವ ಕೇಶವ್ ಮಹಾರಾಜ್ ಈವರೆಗೆ 10075 ಎಸೆತಗಳನ್ನು ಎಸೆದಿದ್ದಾರೆ. ಇದೇ ವೇಳೆ 5264 ರನ್ಗಳನ್ನು ನೀಡಿ 171 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಸೌತ್ ಆಫ್ರಿಕಾ ಪರ ಟೆಸ್ಟ್ನಲ್ಲಿ ಅತೀ ಹೆಚ್ಚು ವಿಕೆಟ್ ಕಬಳಿಸಿದ ಸ್ಪಿನ್ನರ್ ಎಂಬ ದಾಖಲೆ ಬರೆದಿದ್ದಾರೆ.