CM Siddaramaiah: ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಟ್ರೆ ಯಾರಿಗೆ ಲಾಭ – ನಷ್ಟ ಏನು ಅನ್ನೋ ಕುತೂಹಲಕ್ಕೆ ಇಲ್ಲಿದೆ ಉತ್ತರ!
CM Siddaramaiah: ಈಗಾಗಲೇ ಮುಡಾ ಪ್ರಕರಣದಲ್ಲಿ ರಾಜಕೀಯದ ಪಕ್ಷದ ಒಳ ಒಳಗೆ ಯಾವ ರೀತಿಯ ನಾಟಕಗಳು ನಡೆಯುತ್ತವೆ ಅನ್ನೋದು ಒಂದೊಂದೇ ಹೊರ ಬರುತ್ತಿದೆ. ಒಬ್ಬರಿಗೊಬ್ಬರು ಬೆರಳು ತೋರಿಸಿ ದೂರು ಕೊಟ್ಟು ಕೊನೆಗೆ ಮುಖ್ಯಮಂತ್ರಿಗಳೇ ಮುಡಾ ಜಾಲದಲ್ಲಿ ಸಿಕ್ಕಿಕೊಂಡು ಪರದಾಡುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆ ನಡುವೆ ಒಂದು ವೇಳೆ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ (CM Siddaramaiah) ರಾಜೀನಾಮೆ ಕೊಟ್ಟರೆ ಏನೇನು ಆಗುತ್ತೆ, ಯಾರಿಗೆ ಯಾವ ರೀತಿಯ ಲಾಭ ನಷ್ಟಗಳು ಆಗುತ್ತೆ ಅನ್ನೋದು ಹಲವರಿಗೆ ಕುತೂಹಲ ಇದ್ದೇ ಇದೆ. ಬನ್ನಿ ಆ ಬಗ್ಗೆ ಇಲ್ಲಿದೆ ಉತ್ತರ.
ಈಗಾಗಲೇ ಮುಡಾ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಅದರಲ್ಲೂ ರಾಜ್ಯಪಾಲರಾದ ಥಾವರಚಂದ ಗೆಹ್ಲೋಟ್ ಅವರು ಈ ಪ್ರಕರಣದ ಕುರಿತಂತೆ ತನಿಖೆಗೆ ಅನುಮತಿ ನೀಡಿರುವುದು ಸಿದ್ದರಾಮಯ್ಯ ಅವರು ಮತ್ತಷ್ಟು ಸಮಸ್ಯೆಗೆ ಸಿಲುಕಿದ್ದು ರಾಜೀನಾಮೆ ಕೊಡುವಂತೆ ವಿರೋಧ ಪಕ್ಷದವರು ಪ್ರೇರೇಪಿಸುತ್ತಿರುವುದು ಗೊತ್ತಿರುವ ವಿಚಾರ.
ಇನ್ನು ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಒಕ್ಕೊರಲಿನಿಂದ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬೀದಿಗಿಳಿದು ಹೋರಾಟ ನಡೆಸಿದರೂ, ಸಿದ್ದರಾಮಯ್ಯ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ ಎಂದು ಪಟ್ಟು ಹಿಡಿದು ಕೂತಿದ್ದಾರೆ.
ಒಂದು ವೇಳೆ ಸಿದ್ದರಾಮಯ್ಯ ಅವರು ಸಿಎಂ ಸ್ಥಾನದಿಂದ ಕೆಳಗಿಳಿದರೇ ಬಿಜೆಪಿಗೆ ಏನು ಲಾಭ? ವಿ
ಜಯೇಂದ್ರ ನಾಯಕತ್ವಕ್ಕೆ ದೊಡ್ಡ ಬಲ ಮತ್ತು ಹೋರಾಟಕ್ಕೆ ಜಯ. ಅಹಿಂದ ಮತಗಳು ಕಾಂಗ್ರೆಸ್ ನಿಂದ ದೂರವಾಗಿ ಬಿಜೆಪಿಯತ್ತ ವಾಲುವ ಸಾಧ್ಯತೆ. ಭ್ರಷ್ಟಾಚಾರ ವಿಚಾರದಲ್ಲಿ ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ನ್ನು ಟೀಕಿಸಲು ಬಿಜೆಪಿಗೆ ದೊಡ್ಡ ಅಸ್ತ್ರ. ಉಪಚುನಾವಣೆಗೆ ಮೊದಲ ಹಿನ್ನಡೆ ವಿಷಯವಾಗಲಿರುವ ಮುಡಾ ವಿಚಾರ.
ಬಿಜೆಪಿಗೆ ನಷ್ಟವೇನು ಎಂದು ನೋಡಿದಾಗ ಇತ್ತ ಬಿಜೆಪಿ ನಾಯಕರ ಮೇಲಿನ ಕೇಸ್ಗಳು ಬಿಗಿಯಾಗುವ ಸಾಧ್ಯತೆಗಳೇ ಹೆಚ್ಚು. ಇನ್ನು ಹೆಸರು ಪಡೆಯುವ ವಿಚಾರದಲ್ಲಿ ನಾಯಕರ ಮಧ್ಯೆ ಪೈಪೋಟಿ ಇದರ ಜೊತೆಗೆ ಕುರುಬ ಸಮುದಾಯದ ಕೆಂಗಣ್ಣಿಗೆ ಗುರಿಯಾಗಬೇಕಾದೀತು.
ಅದೇ ರೀತಿ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ರೆ ಕಾಂಗ್ರೆಸ್‌ಗೆ ಲಾಭ ಏನು..?ಇದರಿಂದ ಹೊಸ ವ್ಯಕ್ತಿ , ಹೊಸ ಸಮುದಾಯಕ್ಕೆ ಅವಕಾಶ ಸಿಕ್ಕಿ ಹೊಸ ನಾಯಕನ ಮೂಲಕ ಪಕ್ಷ ಕಟ್ಟಲು ಅವಕಾಶ ಸಿಕ್ಕಂತೆ ಆಗುತ್ತೆ. ಪ್ರಬಲ ನಾಯಕನಿಗೆ ಸಿಎಂ ಸ್ಥಾನ ಅನ್ನೋ ಬೇಡಿಕೆಗೆ ಮನ್ನಣೆ ಇರುತ್ತೆ. ರಾಷ್ಟ್ರ ಮಟ್ಟದಲ್ಲಿ ಪಕ್ಷದ ಇಮೇಜ್ ಕಾಪಾಡಿಕೊಳ್ಳಲು ಸಾಧ್ಯ. ಜೊತೆಗೆ ಕೇಂದ್ರದ ವಿರುದ್ಧ ಭ್ರಷ್ಟಾಚಾರ ಹೋರಾಟದಲ್ಲಿ ಹಿನ್ನಡೆ ತಪ್ಪಲಿದೆ
ಕಾಂಗ್ರೆಸ್‌ಗೆ ನಷ್ಟ ಏನು ಎಂದು ನೋಡಿದಾಗ, ಆ ಸ್ಥಾನಕ್ಕಾಗಿ ರಾಜಕೀಯ ಪೈಪೋಟಿ ನಡೆಯುತ್ತೆ, ಪಕ್ಷದ ಒಳಗಡೆ ದ್ವೇಷ, ಮಾತಿನ ಚಕಮಕಿ ಅಲ್ಲದೆ ಗುಂಪುಗಾರಿಕೆ ಸಾಧ್ಯತೆ ಇದೆ. ಇದೆಲ್ಲದರ ನಡುವೆ ರಾಜಕೀಯವಾಗಿ ಕಾಂಗ್ರೆಸ್‌ಗೆ ದೊಡ್ಡಮಟ್ಟದ ನಷ್ಟ ಸಾಧ್ಯತೆ. ಇನ್ನು ಸಿದ್ದರಾಮಯ್ಯರನ್ನ ಕೆಳಗಿಳಿಸಿದ ಅಪಕೀರ್ತಿ ಕಾಂಗ್ರೆಸ್‌ಗೆ ಕಟ್ಟಿಟ್ಟ ಬುತ್ತಿ. ಇದೆಲ್ಲದರ ಹೊರತು ಕುರುಬ ಸಮುದಾಯದ ಮತಗಳಿಕೆ ನಷ್ಟ ಆಗುವುದು ಖಚಿತವಾಗಿದೆ.