Kannaiah Naidu: ತುಂಗಾಭದ್ರಾ ಸೇರಿ 170ಕ್ಕೂ ಹೆಚ್ಚು ಡ್ಯಾಂ ಗಳ ದುರಸ್ತಿ ಮಾಡಿರೋ ಡ್ಯಾಂ ತಜ್ಞ ಕನ್ನಯ್ಯ ನಾಯ್ಡು ಯಾರು? ಅವರ ಸಾಧನೆ ಕೇಳಿದ್ರೆ ಅಚ್ಚರಿ ಪಡ್ತೀರಾ

Kannaiah Naidu: ತುಂಗಭದ್ರಾ ಜಲಾಶಯದಲ್ಲಿ (Tungabhadra Dam) ಮುರಿದಿದ್ದ 19ನೇ ಗೇಟ್‍ನಲ್ಲಿ ಎಲ್ಲಾ 5 ಸ್ಟಾಪ್ ಲಾಗ್ (Stop Log Gate) ಅಳವಡಿಕೆ ಯಶಸ್ವಿಯಾಗಿದೆ. ಈ ಮೂಲಕ ಪೋಲಾಗುತ್ತಿದ್ದ ನೀರನ್ನು ಸಂಪೂರ್ಣವಾಗಿ ನಿಲ್ಲಿಸುವಲ್ಲಿ ತಜ್ಞರ ತಂಡ ಯಶಸ್ವಿಯಾಗಿದ್ದು ತುಂಗಭದ್ರೆಯನ್ನ ಅವಲಂಭಿಸಿರೋ ರೈತರು ನಿಟ್ಟುಸಿರು ಬಿಟ್ಟಿದ್ದಾರೆ. ಕನ್ನಯ್ಯ ನಾಯ್ಡು ಅವರ ಈ ಕಾರ್ಯಕ್ಕೆ ಕೋಟ್ಯಂತರ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಮಹಾನ್ ಕಾರ್ಯದ ಹಿಂದಿರುವ ಮಾಸ್ಟರ್ ಮೈಂಡ್ ಅಂದ್ರೆ ಅದು ಡ್ಯಾಂ ತಜ್ಞ ಕನ್ನಯ್ಯ(Damn expert Kannaiah Naidu) ಅವರು. ಹೌದು, ತಜ್ಞ ಕನ್ನಯ್ಯ ನಾಯ್ಡು ತಂಡ ಮೂರು ದಿನಗಳಿಂದ ಸ್ಟಾಪ್ ಲಾಗ್ ಗೇಟ್ ಅಳವಡಿಸುವ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿತ್ತು. ಇದೀಗ ಕೊನೆಗೂ ತಮ್ಮ ಮಹಾನ್ ಕಾರ್ಯದಲ್ಲಿ ಕನ್ನಯ್ಯ ತಂಡ ಯಶಸ್ಸು ಕಂಡಿದೆ. ಸದ್ಯ ಅವರನ್ನು ಕಲ್ಯಾಣ ಕರ್ನಾಟಕಕ್ಕೆ ಭಗೀರಥ ಎಂದು ಕರೆದಿದ್ದಾರೆ. ಹಾಗಿದ್ರೆ ಯಾರು ಈ ಕನ್ನಯ್ಯ? ಇವರ ಸಾಧನೆ ಏನು? ಇವರೆಷ್ಟು ಸಿಂಪಲ್ ಗೊತ್ತಾ? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಮಾಹಿತಿ.
ಜಲಾಶಯ ತಜ್ಞ ಕನ್ನಯ್ಯ ನಾಯ್ಡು ಯಾರು?
ಜಲಾಶಯ ತಜ್ಞ ಕನ್ನಯ್ಯ ನಾಯ್ಡು (77) ಅವರ ಪೂರ್ತಿ ಹೆಸರು ನಾಗಿಂಡಯ್ಯ ಕನ್ನಯ್ಯ ನಾಯ್ಡು. ಇವರು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಗುಡಿಪಾಲ ಮಂಡಲ್ನ ದಾಸನಪಲ್ಲಿ ಗ್ರಾಮದವರು. ಇವರು ಕುಟುಂಬ ಮೂಲತಃ ಕೃಷಿ ಕುಟುಂಬವಾಗಿತ್ತು. ಬಡತನದಲ್ಲೇ ಓದು ಮುಂದುವರೆಸಿದ ಇವರು ಪ್ರಾಥಮಿಕ, ಪ್ರೌಢ ಶಾಲಾ ವಿದ್ಯಾಭ್ಯಾಸ ಮುಗಿಸಿದರು. ಬಳಿಕ ಕಾಲೇಜಿಗೆ ಸೇರಿಕೊಂಡರು. ತಿರುಪತಿಯಲ್ಲಿನ ವೆಂಕಟೇಶ್ವರ ಇಂಜಿನಿಯರಿಂಗ್ ಕಾಲೇಜಿನಲ್ಲಿ ತಮ್ಮ ಮೆಕ್ಯಾನಿಕಲ್ ಇಂಜಿನಿಯರಿಂಗ್ ಅನ್ನು ಕಂಪ್ಲೀಟ್ ಮಾಡಿದರು. ಆಗಿನ ಕಾಲದಲ್ಲೇ ಇಂಜಿನಿಯರಿಂಗ್ ಮುಗಿಸಿದರು. ಇವರಿಗೆ ಉದ್ಯೋಗ ಸಿಗಲಿಲ್ಲ. ಕಾರಣ ಇವರು ಬೆಲೆಟೇರಿಯಲ್ ಪ್ರದೇಶದಲ್ಲಿ ಇದ್ದಿದ್ದರಿಂದ ಇವರಿಗೆ ಆಗಿನ ಸರ್ಕಾರಗಳು ಕೆಲಸ ಕೊಡಲಿಲ್ಲ.
ದಿವಾನ್ ಸಿ. ರಂಗಚಾರಿ ಅವರು ತಿರುವಂಗಳರ್ ಜೊತೆ ಕೆಲಸ ಮಾಡಿದ್ದಾರೆ. ಈಗಿರುವ ವಿಶ್ವೇಶ್ವರಯ್ಯ ಮ್ಯೂಸಿಯಂನಲ್ಲಿ ಸಿ. ರಂಗಚಾರಿ ಹೆಸರು ಕೂಡ ಇದೆ. ಇವರ ಬಳಿ 5 ವರ್ಷ ತರಬೇತಿ ಪಡೆದಿದ್ದರು. ಈ ತರಬೇತಿ ಪಡೆಯುವ ವೇಳೆಯೇ ನೀವು ರೈತರಿಗೆ ಸಹಾಯ ಮಾಡಬೇಕೆಂದರೆ ತುಂಗಭದ್ರಾ ಸ್ಟೇಟ್ ಫಾರೆಸ್ಟ್ನಲ್ಲಿ ಕೆಲಸ ಪಡೆಯಬೇಕು. ರಾಷ್ಟ್ರಾದ್ಯಾಂತ ನೀವು ಕೆಲಸ ಮಾಡಬಹುದು ಎಂದು ಸಿ. ರಂಗಚಾರಿ ಹೇಳಿದ್ದರು. ಅದರಂತೆ ಡ್ಯಾಂ ತಜ್ಞ ಕನ್ನಯ್ಯ ನಾಯ್ಡುಗೆ ತುಂಗಭದ್ರಾ ಸ್ಟೇಟ್ ಫಾರೆಸ್ಟ್ನಿಂದ ಇಂಟರ್ವ್ಯೂವ್ಗೆ ಕರೆ ಬಂತು. ಆ ಸಂದರ್ಶನದಲ್ಲಿ ಕನ್ನಯ್ಯ ನಾಯ್ಡು ಅವರು ಆಯ್ಕೆಯಾದರು
ಬಳಿಕ ತುಂಗಭದ್ರಾ ಅಣೆಕಟ್ಟು ಯೋಜನೆಯಲ್ಲಿ 1976 ಜನವರಿ 16ರಂದು ಕೆಲಸಕ್ಕೆ ಸೇರಿದರು. ಅಂದಿನಿಂದ ಇಂಜಿನಿಯರಿಂಗ್ ಕೆಲಸ ಮಾಡಿ 2002 ರಲ್ಲಿ ಸ್ವಯಂ ನಿವೃತ್ತಿ ಪಡೆದರು. ಜಲಾಶಯಗಳಿಗೆ ಬೇಕಾದ ಕ್ರಸ್ಟ್ ಗೇಟ್, ಪವರ್ ಜನರೇಷನ್ ಗೇಟ್, ರೈತರಿಗೆ ಬೇಕಾಗಿದ್ದ ರೆಗುಲೇಟರ್ಸ್ ಎಲ್ಲವನ್ನು ಕನ್ನಯ್ಯ ಅವರ ನಿರ್ದೇಶನದಲ್ಲಿ ಮಾಡಲಾಗುತ್ತಿದೆ. ಕನ್ನಯ್ಯ ಅವರು ಆಂಧ್ರಪ್ರದೇಶದಲ್ಲಿ ಹುಟ್ಟಿದರೂ ತಮಿಳುನಾಡಿನಲ್ಲಿ ಕೆಲ ವರ್ಷ ಕಾರ್ಯನಿರ್ವಹಿಸಿದರು. ಆದರೆ ಅವರ ಜೀವನದ ಅತಿ ಹೆಚ್ಚು ಕಾಲ ಕರ್ನಾಟಕದಲ್ಲಿ ಕೆಲಸ ಮಾಡಿದ್ದು ಅವರಿಗೆ ಈಗಲೂ ಹೆಮ್ಮೆ ಇದೆ ಎಂದು ಹೇಳಿಕೊಳ್ಳುತ್ತಾರೆ. 2002ರಿಂದ ಒಟ್ಟು 170 ಜಲಾಶಯಗಳ ದುರಸ್ತಿ ಮಾಡಿದ್ದಾರೆ. 500 ಜಲಾಶಯಗಳಿಗೆ ತಂತ್ರಜ್ಞರಾಗಿ ದುಡಿದಿದ್ದಾರೆ.