Religious Education: ಮದರಸಾಗಳಲ್ಲಿ ಮುಸ್ಲಿಂ ಅಲ್ಲದ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀತಿ; ಸರ್ಕಾರ ಕಠಿಣ ಕ್ರಮ
Religious Education: ಮುಸ್ಲಿಂ ಅಲ್ಲದ ಮಕ್ಕಳಿಗೆ ಮದರಸಾಗಳಲ್ಲಿ (Madrasa) ಧಾರ್ಮಿಕ ಶಿಕ್ಷಣ ನೀಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮೋಹನ್ ಯಾದವ್ (Mohan Yadav) ನೇತೃತ್ವದ ಮಧ್ಯಪ್ರದೇಶ (Madhya Pradesh) ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಈ ಸಂಬಂಧ ಶಾಲಾ ಶಿಕ್ಷಣ ಇಲಾಖೆ ಶುಕ್ರವಾರ ಆದೇಶ ಹೊರಡಿಸಿದೆ. ಮುಸ್ಲಿಮೇತರ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುವುದು ಕಾನೂನುಬಾಹಿರ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಮದರಸಾಗಳಲ್ಲಿ ಮುಸ್ಲಿಮೇತರ ಮಕ್ಕಳಿಗೆ ಧಾರ್ಮಿಕ ಶಿಕ್ಷಣ (Religious Education) ನೀಡಲಾಗುತ್ತಿದೆ ಎಂದು ಸರ್ಕಾರಕ್ಕೆ ನಿರಂತರ ದೂರುಗಳು ಬರುತ್ತಿವೆ. ಈ ಹಿನ್ನಲೆ ಶಾಲಾ ಶಿಕ್ಷಣ ಇಲಾಖೆಯೂ ಮದರಸಾಗಳ ಭೌತಿಕ ಪರಿಶೀಲನೆಗೆ ಸೂಚನೆಗಳನ್ನು ನೀಡಿದೆ.
ಭಾರತೀಯ ಸಂವಿಧಾನದ 28 (3) ರ ಪ್ರಕಾರ, “ರಾಜ್ಯದಿಂದ ಗುರುತಿಸಲ್ಪಟ್ಟ ಯಾವುದೇ ಶಿಕ್ಷಣ ಸಂಸ್ಥೆಗೆ ಹಾಜರಾಗುವ ವ್ಯಕ್ತಿ ಅಪ್ರಾಪ್ತ ವಯಸ್ಕನಾಗಿದ್ದರೆ, ಅವರ ಪೋಷಕರು ಅದಕ್ಕೆ ಒಪ್ಪಿಗೆಯನ್ನು ನೀಡದ ಹೊರತು ಅಂತಹ ಸಂಸ್ಥೆಯಲ್ಲಿ ಅಥವಾ ಅದಕ್ಕೆ ಸಂಬಂಧಪಟ್ಟ ಸ್ಥಳದಲ್ಲಿ ನಡೆಸುವ ಯಾವುದೇ ಧಾರ್ಮಿಕ ಕಾರ್ಯದಲ್ಲಿ ಭಾಗವಹಿಸುವಂತಿಲ್ಲ.
ಮೇಲಿನ ಸಾಂವಿಧಾನಿಕ ನಿಬಂಧನೆಯ ಪ್ರಕಾರ, ಸರ್ಕಾರದಿಂದ ಮಾನ್ಯತೆ ಪಡೆದ ಅಥವಾ ರಾಜ್ಯ ನಿಧಿಯಿಂದ ನೆರವು ಪಡೆದ ಮದರಸಾಗಳಲ್ಲಿ ಓದುತ್ತಿರುವ ಮಕ್ಕಳಿಗೆ ಅವರ ಸ್ಪಷ್ಟ ಒಪ್ಪಿಗೆಯಿಲ್ಲದೆ, ಅವರು ಅಪ್ರಾಪ್ತರಾಗಿದ್ದರೆ ಮಾನ್ಯತೆ ರದ್ದು ಹಾಗೂ ಇತರೆ ಸೂಕ್ತ ಕಾನೂನು ಕ್ರಮಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಲಾಗಿದೆ.