Sakaleshpura: ಸಕಲೇಶಪುರ ರೈಲ್ವೇ ಹಳಿಯಲ್ಲಿ ಮತ್ತೆ ಭೂಕುಸಿತ: ರೈಲು ಸಂಚಾರ ಸ್ಥಗಿತ

Sakaleshpura: ಮಳೆಗಾಲ ಮುಗಿಯುವವರೆಗೆ ಬೆಂಗಳೂರು-ಮಂಗಳೂರು(Bengaluru-Mangaluru) ರೈಲು ಸಂಚಾರದಲ್ಲಿ ವ್ಯತ್ಯಯ ಆಗುವ ಲಕ್ಷಣಗಳು ಗೋಚರಿಸುತ್ತಿದೆ. ಕಳೆದ 15 ದಿನಗಳಿಂತ ಸುಬ್ರಹ್ಮಣ್ಯ-ಸಕಲೇಶಪುರ(Subramanya- Sakaleshapura) ರಸ್ತೆಯಲ್ಲಿ ನಿರಂತರ ಭೂ ಕುಸಿತ ಸಂಭವಿಸುತ್ತಲೇ ಇದೆ.

ಇದೀಗ ಸಕಲೇಶಪುರ ತಾಲ್ಲೂಕಿನ ಆಚಂಗಿ-ದೊಡ್ಡಸಾಗರ ಬಳಿ ಮತ್ತೆ ರೈಲ್ವೆ ಹಳಿ ಮೇಲೆ ಗುಡ್ಡ ಕುಸಿದು ಬಿದ್ದಿದೆ. ಹಾಗಾಗಿ ಈ ಮಾರ್ಗವಾಗಿ ಸಾಗುವ ಎಲ್ಲಾ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಕಳೆದ ಕೆಲವು ದಿಗಳ ಹಿಂದಷ್ಟೇ ಈ ಮಾರ್ಗದಲ್ಲಿ ಮಣ್ಣು ಕುಸಿತ ಉಂಟಾಗಿ ಮಣ್ಣು ತೆರವು ಮಾಡಲಾಗಿತ್ತು. ಅದಾಗಿ ಎರಡು ದಿನ ರೈಲು ಸಂಚಾರ ಮಾಡಿದೆ. ಇದೀಗ ಮತ್ತೆ ಅದೇ ಸ್ಥಳದಲ್ಲಿ ಭೂ ಕುಸಿತ ಆಗಿ ಸಂಚಾರ ಸ್ಥಗಿತಗೊಂಡಿದೆ.

ಕಳೆದ 15 ದಿನಗಳಿಂದ ರ ರೈಲು ಸ್ಥಗಿತವಾಗಿ ಪ್ರಯಾಣಿಕರಿಗೆ ಬಹಳ ತೊಂದರೆ ಉಂಟಾಗಿತ್ತು. ಇದೀಗ ಇಂದು ಸಕಲೇಶಪುರ ತಾಲ್ಲೂಕಿನ, ಬಾಳ್ಳುಪೇಟೆ ಬಳಿ ಯಶವಂತಪುರ-ಕಾರವಾರ ಎಕ್ಸ್ಪ್ರೆಸ್ ರೈಲು ಮಣ್ಣು ಬಿದ್ದ ಪರಿಣಾಮ ಅರ್ಧ ಮಾರ್ಗದಲ್ಲೇ ನಿಂತಿದ್ದು ಪ್ರಯಾಣಿಕರ ಪಾಡು ಹೇಳ ತೀರದಾಗಿದೆ. ರೈಲ್ವೇ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದು, ತಕ್ಷಣ ಕಾರ್ಯ ಪವೃತ್ತರಾಗಿದ್ದಾರೆ. ಸುಮಾರು ದಿನಗಳಿಂದ ನಿರಂತರ ಸಮಸ್ಯೆ ಈ ರೈಲು ಮಾರ್ಗದಲ್ಲಿ ಕಾಣಿಸಿಕೊಳ್ಳುತ್ತಿದೆ. ಯೆಡಕುಮೇರಿ ಹಾಗೂ ಕಡಗರವಳ್ಳಿ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಭೂಕುಸಿತ ಉಂಟಾಗಿ ಈ ಮಾರ್ಗದ ಎಲ್ಲಾ ರೈಲುಗಳ ಸಂಚಾರ ಸ್ಥಗಿತಗೊಂಡಿತ್ತು.

ಹಗಲು ರಾತ್ರಿ ನಿರಂತರ 400ಕ್ಕೂ ಅಧಿಕ ಕಾರ್ಮಿಕರು ಕೆಲಸ ಮಾಡಿ ಮಣ್ಣು ತೆರವು ಕಾರ್ಯ ಮಾಡಿದ್ದರು. ಮತ್ತೆ ರೈಲು ಸಂಚಾರ ಆ.8ರಿಂದ ಆರಂಭಗೊಂಡಿತ್ತು. ಇದಾಗಿ 2 ದಿನಕ್ಕೆ ಮತ್ತೆ ಬಾಳುಪೇಟೆ ಸಮೀಪ ಭೂ ಕುಸಿತ ಉಂಟಾಗಿ ಸಂಚಾರ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಅದೇ ಸಮಸ್ಯೆ ಉಂಟಾಗಿ ರೈಲು ಸಂಚಾರದಲ್ಲಿ ಸಮಸ್ಯೆ ಉಂಟಾಗಿದೆ.

1 Comment
  1. tlover tonet says

    Well I definitely liked reading it. This post provided by you is very useful for proper planning.

Leave A Reply

Your email address will not be published.