Forest Encroachment: ಅರಣ್ಯ ಒತ್ತುವರಿ ತೆರವು ಪ್ರಹಸನ: ಕಾಡಂಚಿನ ಕೃಷಿಕರ ಸಾಗುವಳಿ ಪ್ರಕೃತಿ ವಿಕೋಪಕ್ಕೆ ಕಾರಣವೇ ?
Forest Encroachment: ಮಲೆನಾಡಿನ ಜನ ಮತ್ತೊಮ್ಮೆ ಮೈಕೊಡವಿ ಎದ್ದು ಬೀದಿಗೆ ಬಂದು ಪ್ರತಿಭಟನೆ ಮಾಡಲು ತಯಾರಾಗಿದ್ದಾರೆ. ಒತ್ತುವರಿ ಮತ್ತು ಅದರ ತೆರವು(Forest Encroachment) ವಿಷಯ ಜನರಲ್ಲಿ ಆತಂಕ ಮೂಡಿಸಿದೆ. ವರ್ಷ ಗಟ್ಟಲೆ ಬೆವರುಸುರಿಸಿ ನೆಟ್ಟ ಗಿಡಗಳು ಪಸಲುಕೊಡುವ ಹೊತ್ತಿಗೆ ತೆರವು ಅನ್ನೋ ಭೂತ ಎದುರಾಗಿದೆ.
ಮಲೆನಾಡಿನ ಸಣ್ಣ ಮತ್ತು ಮಧ್ಯಮ ರೈತರು ಜೀವನಕ್ಕೆ ಎಷ್ಟು ಅವವಶ್ಯಕತೆ ಇದೆಯೋ ಅಷ್ಟು ಭೂಮಿಯನ್ನ ಸಾಗುವಳಿ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಆದರೆ ಸರ್ಕಾರದ ಇತ್ತೀಚಿನ ಒತ್ತುವರಿ ತೆರವು ಪ್ರಕ್ರಿಯೆ ಬಗ್ಗೆ ಒಂದಿಷ್ಟು ಗೊಂದಲಗಳು ಇದೆ. ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಯಲ್ಲೇ ಬಗೆಹರಿಯದ ಗೊಂದಲಗಳು ಇವೆ. ಅಂದರೆ ಕಂದಾಯಭೂಮಿಯನ್ನ ಅರಣ್ಯ ಇಲಾಖೆಗೆ ಹಸ್ತಾಂತರ ಮಾಡುವ ಪ್ರಕ್ರಿಯೆಯ ವಿಳಂಬಗಳು ಮತ್ತು ಸಾರ್ವಜನಿಕರ ಉಪಯೋಗಕ್ಕೆ ಇದ್ದ ಜಾಗಗಳನ್ನೆಲ್ಲಾ ಅರಣ್ಯಇಲಾಖೆ ತನ್ನದು ಅಂತ ಕಲ್ಲೂರಿದ್ದು.
ಇನ್ನು ಕೆಲವು ಬಲಾಡ್ಯರು ಆ ಜಾಗ ಮತ್ತು ಗುಡ್ಡಗಳನ್ನ ಒಂದೂ ಬಿಡದಂತೆ ಹೊಳೆ ಅಥವಾ ರೋಡು ಬರುವವರೆಗೂ ಒತ್ತುವರಿ ಮಾಡಿ ತೋಟ ಮಾಡಿದ್ದು, ಇವೆಲ್ಲವೂ ಸಮಸ್ಯೆಯನ್ನ ಮತ್ತಷ್ಟೂ ಬಿಗಡಾಯಿಸಿವೆ. ಈ ನಡುವೆ ಚೂರುಪಾರು ತೋಟ ಮಾಡಿರುವವರು ಇತ್ತಲಾಗಿ ಸಾಗುವಳಿ ಭೂಮಿಗೆ ಹಕ್ಕುಪತ್ರವೂ ಇಲ್ಲದೆ ಸದಾ ಸರ್ಕಾರಗಳ ಕ್ಷಣ ಕ್ಷಣದ ತೀರ್ಮಾನಗಳ ತೂಗುಕತ್ತಿಯಡಿ ಬದುಕು ಕಟ್ಟಿಕೊಳ್ಳಲು ಹೆಣಗುತ್ತಿದ್ದಾರೆ. ದೊಡ್ಡಒತ್ತುವರಿದಾರರು ರಾಜಕಾರಣಗಳು ಆಡಳಿತದಲ್ಲಿ ಇರುವವದ್ದು ಒಂದೇ ದೋಣಿ.
ಬಡ ಸಣ್ಣಸಾಗುವಾಳಿದಾರರು(ಒತ್ತುವರಿದಾರರು ಬೇರೆ ಜೀವನಾವಷ್ಯಕ್ಕೆ ಸಾಗುವಳಿ ಮಾಡಿದವರು ಸಾಗುವಳಿದಾರರು)ಒಂದು ಟೀಮು. ಸರ್ಕಾರಗಳು ಒತ್ತಡ ಬಂದಾಗ ಆಗಾಗ ಈ ರೀತಿ ಹೇಳಿಕೆ ಕೊಡ್ತಾರೆ. ಒತ್ತವರಿದಾರರು ಬಡ ಸಾಗುವಳಿದಾರರನ್ನ ಮುಂದಿಟ್ಟುಕೊಂಡು ಹೋರಾಟಕ್ಕೆ ಮುಂದಾಗ್ತಾರೆ. ಸಣ್ಣವ್ರು ಯಾವತ್ತೂ ಒಟ್ಟಾಗಿ ನಮ್ಮ ಭೂಮಿ ಮತ್ತು ಮನೆಗಳಿಗೆ ಹಕ್ಕುಪತ್ರ ಕೊಡಿ ಅಂತ ಸರ್ಕಾರವನ್ನ ಒತ್ತಾಯಿಸುವ ಹೋರಾಟ ಮಾಡುವ ಮನಸ್ಸು ಮಾಡೋದಿಲ್ಲಾ.ದೊಡ್ಡವ್ರು ಅವರಿಗೆ ಬೆಂಬಲಿಸೋದು ಇಲ್ಲ. ಯಾಕೆ ಅಂದ್ರೆ ಒಂದು ಸಾರಿ ಈ ಸಮಸ್ಯೆಗಳು ಬಗೆ ಹರಿದ್ರೆ ಮತ್ತೆ ತಮ್ಮ ಅನಧೀಕೃತ ಒತ್ತುವರಿಗಳಿಗೆ ಸಮಸ್ಯೆ ಆಗುತ್ತೆ ಮತ್ತು ಆಗ ಹೋರಾಟ ಮಾಡುವ ಜನವೂ ಸಿಕ್ಕುವುದಿಲ್ಲ ಅಂತ ಆ ಸಮಸ್ಯೆ ಹಾಗೇ ಇರಲಿ ಅಂತ ಯೋಚನೆ ಮಾಡ್ತಾರೆ. ಅವರು ಯಾವತ್ತೂ ಹೋರಾಟ ಮಾಡೋದೆ ಇಲ್ಲಾ.
ಒಟ್ಟಾರೆ ಈಗ ಎದ್ದಿರುವ ಸಮಸ್ಯೆಗೆ ಪರಿಸರದಲ್ಲಿ ಆಗ್ತಿರೋ ಅನಾಹುತಕ್ಕೆ ಕೃಷಿ ಮಾತ್ರ ಕಾರಣ ಅಲ್ಲಾ.ಅವೈಜ್ಞಾನಿಕ ಅಭಿವೃದ್ಧಿ ಮಾದರಿಗಳು ಉಳ್ಳವರ ಅನುಭೋಗಕ್ಕಾಗಿ ನಡೆಯುತ್ತೆ, ಯಾವ ಅಭಿವೃದ್ಧಿಗಳು ಬಡಜನರ ಹಿತದೃಷ್ಟಿಯಿಂದ ನಡೆಯೋದೆ ಇಲ್ಲಾ. ಹಾಗಾಗಿ ವರ್ಷ ದಿಂದ ವರ್ಷಕ್ಕೆ ಪರಿಸರ ಬಿಕ್ಕಟ್ಟುಗಳು ಬಿಗಡಾಯಿಸಿದ ತಕ್ಷಣ ಸರ್ಕಾರಗಳು ಎಚ್ಚೆತ್ತುಕೊಂಡು ಛಾಟಿ ಬೀಸುತ್ತವೆ. ಅದರ ಪೆಟ್ಟು ಬಡವರಿಗೆ ಬೀಳುತ್ತೇ ಹೊರತು ದೊಡ್ಡವರಿಗೆ ಬೀಳಲ್ಲ.
ಭೂಕುಸಿತ, ಪ್ರವಾಹ, ವಿಪರೀತ ಮಳೆ ಎಲ್ಲವೂ.. ಹವಾಗುಣ ಬದಲಾವಣೆಯಿಂದ ಆಗ್ತಿರುತ್ತೆ. ಅದಕ್ಕೆ ಕಾರಣ ಹೆಚ್ಚುತ್ತಿರುವ ಭೂತಾಪಮಾನ. ದೊಡ್ಡವರ ಐಷಾರಾಮಿ ಜೀವನ ಇದಕ್ಕೆಲ್ಲಾ ಕಾರಣ. ಸರ್ಕಾರಗಳು ಅದರ ಬಗ್ಗೆ ಕ್ರಮಕೈಗೊಳ್ಳುವ ಬದಲು ಬಡಜನರ ಬದುಕಿನ ಜೊತೆ ಚೆಲ್ಲಾಟವಾಡಯತ್ತಿದೆ. ಹಾಗಾಗಿ ಬಡಕೃಷಿಕರು ಒಟ್ಟಾಗಿ ನಮ್ಮ ಬದುಕನ್ನ ಕಟ್ಟಿಕೊಳ್ಳುವ ನಿಟ್ಟಿನಲ್ಲಿ ನಮ್ಮ ಪ್ರಯತ್ನವಿರಬೇಕೆ ಹೊರತು ಉಳ್ಳವರ ಊರುಗೋಲಾಗೋದು ಬೇಡ.