Uttara Kannada: ಕೊನೆಗೂ ಕಾಳಿ ನದಿಯಿಂದ ದಡ ಸೇರಿದ ಲಾರಿ: ಕಾರ್ಯಾಚರಣೆ ಹೇಗಿತ್ತು?
Uttara Kannada: ಕಾರವಾರ (Karwar)-ಗೋವಾ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಆಗಸ್ಟ್.7ರಂದು ಕೋಡಿಬಾಗ್ನ ಕಾಳಿ ನದಿಗೆ ಕಟ್ಟಲಾಗಿದ್ದ ಹಳೇ ಬ್ರಿಡ್ಜ್ (Kali Bridge) ತುಂಡಾಗಿ ಲಾರಿ ಚಾಲಕನ ಸಮೇತ ನದಿಗೆ ಬಿದ್ದು ಲಾರಿ ನೀರು ಪಾಲಾಗಿತ್ತು. ಅಲ್ಲೆ ಮೀನು ಹಿಡಿಯುತ್ತಿದ್ದ ಮೀನುಗಾರರು ತಮಿಳುನಾಡು (Tamil Nadu) ಮೂಲದ ಲಾರಿ ಚಾಲಕನನ್ನು ಕಾಪಾಡಿದ್ದರು. ಲಾರಿಯನ್ನು ತೆಗೆಯಲು ಕಳೆದ 8 ದಿನಗಳಿಂದ ನಿರಂತರ ಕಾರ್ಯಾಚರಣೆ ನಡೆಸಿ ಇಂದು ಹೊರಗೆ ಎತ್ತಲಾಯಿತು.
ಕಾರ್ಯಾಚರಣೆಗೆ ಐಆರ್ಬಿ ಕಂಪನಿಯು 3 ಕ್ರೇನ್ ಮತ್ತು 2 ದೋಣಿ ಬಳಸಲಾಗಿತ್ತು. ಆದರೆ ಲಾರಿ ಕರೆಂಟ್ ತಂತಿಯ ಮೇಲೆ ತೋಗಾಡುತ್ತಿತ್ತು. ತಂತಿ ತುಂಡು ಮಾಡಿದ್ದಲ್ಲಿ ಲಾರಿ ಮತ್ತೆ ಕೆಳಗೆ ಇಳಿಯುತ್ತಿತ್ತು. ಹಾಗಾಗಿ ಆತಂಕದಲ್ಲಿದ್ದ ಸಿಬ್ಬಂದಿಗೆ ನಿರಾಸಾಯವಾಗಿ ಲಾರಿಯನ್ನು ತೆಗೆಯಲು ಸಹಾಯ ಮಾಡಿದವರು ಯಲ್ಲಾಪುರದ ಸನ್ನಿಸಿದ್ದಿ. ಇವರು ಯಾವುದೇ ಸಹಾಯ ಇಲ್ಲದೆ ನೀರಿನ ಒಳಗೆ ಇಳಿದು ಲಾರಿಗೆ ಹಗ್ಗ ಕಟ್ಟಿ ಬಂದರು.
ತದನಂತರ ಈಶ್ವರ್ ಮಲ್ಪೆ ತಂಡ ಮತ್ತೆ 3 ಹಗ್ಗಗಳನ್ನು ಕಟ್ಟಿ ಕರೆಂಟ್ ತಂತಿ ತುಂಡು ಮಾಡಿ ರೋಪ್ ಅನ್ನು ಟೋಯಿಂಗ್ ಮೂಲಕ ಎಳೆದು ತರಲಾಯಿತು. ಇನ್ನೇನು 100 ಮೀಟರ್ನೆಲ್ಲೇ ಲಾರಿ ದಡಕ್ಕೆ ಬರುತ್ತೆ ಅನ್ನುವಾಗ ಮತ್ತೆ ಕಲ್ಲಿನ ಸಂದಿಯಲ್ಲಿ ಸಿಕ್ಕಿ ಹಾಕಿಕೊಂಡಿತ್ತು. ಆದ್ರೂ ಬಿಡದೆ ಶತ ಪ್ರಯತ್ನ ಮಾಡಿ ಬರೋಬ್ಬರಿ 7.5 ಟನ್ಗೂ ಅಧಿಕ ತೂಕದ ಲಾರಿಯನ್ನು ದಡಕ್ಕೆ ತರಲಾಯಿತು. ಲಾರಿಯನ್ನು ದಡಕ್ಕೆ ಮುಟ್ಟಿಸುವ ಕೆಲಸದಲ್ಲಿ 50ಕ್ಕೂ ಹೆಚ್ಚು ಮಂದಿ ಕೈ ಜೋಡಿಸಿದ್ದರು.
so much fantastic information on here, : D.