Renuka Swamy: ರೇಣುಕಾಸ್ವಾಮಿಯ ರಕ್ತದ ಕಲೆ ಇದ್ದ ಆ ಚಪ್ಪಲಿ ಯಾರದ್ದು? ಸಿಕ್ಕಿತು ಮತ್ತೊಂದು ಸಾಕ್ಷಿ !

Share the Article

Renuka Swamy: ರೇಣುಕಾಸ್ವಾಮಿ (Renukaswamy) ಕೊಲೆ ಪ್ರಕರಣದಲ್ಲಿ ದಿನಕ್ಕೊಂದು ಟ್ವಿಸ್ಟ್‌ಗಳು, ಸಾಕ್ಷಿಗಳು ಲಭ್ಯವಾಗುತ್ತಿದೆ. ಪೊಲೀಸರು ಬೆಂಬಿಡದೆ ಈ ಕೇಸ್‌ನ ವಿಚಾರಣೆಯನ್ನು ನಡೆಸುತ್ತಿದ್ದಾರೆ. ಸದ್ಯಕ್ಕೆ ನಟ ದರ್ಶನ್‌ ಹಾಗೂ ಅವನ ಸಹಚರರಿಗೆ ರಿಲೀಫ್‌ ಸಿಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಇದೀಗ ಕೇಸ್‌ಗೆ ಮತ್ತೊಂದು ಪ್ರಬಲ ಸಾಕ್ಷಿ ಸಿಕ್ಕಿದೆ. ಆರೋಪಿ ಪವಿತ್ರಾಗೌಡನ ಚಪ್ಪಲಿಯಲ್ಲಿ (Pavithra Gowda) ರೇಣುಕಾಸ್ವಾಮಿ ರಕ್ತದ ಕಲೆ ಪತ್ತೆಯಾಗಿರುವ ಬಗ್ಗೆ ಮಾಹಿತಿ ದೊರೆತಿದೆ. ಇದು ಪವಿತ್ರಾ ಗೌಡಗೆ ಮತ್ತೊಂದು ಸಂಕಷ್ಟ ತಂದೊಡ್ಡಲಿದೆ.

ರೇಣುಕಾ ಸ್ವಾಮಿ ಕೊಲೆ ದಿನ ಪವಿತ್ರಾಗೌಡ ಧರಿಸಿದ್ದ ಚಪ್ಪಲಿಯನ್ನು ಆಕೆಯ ಮನೆಯಿಂದ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಅದನ್ನು ಎಫ್‌ಎಸ್‌ಎಲ್‌ಗೆ ಪರೀಕ್ಷೆಗೆ ಕಳುಹಿಸಿ ಕೊಡಲಾಗಿತ್ತು. ಇದೀಗ ಆ ಚಪ್ಪಲಿಯಲ್ಲಿ ರೇಣುಕಾಸ್ವಾಮಿ ರಕ್ತದ ಕಲೆ ಇರುವುದು ಪತ್ತೆಯಾಗಿದೆ ಎಂದು ವಿಧಿ ವಿಜ್ಞಾನ ಪ್ರಯೋಗಾಲಯದಿಂದ ವರಿದಿ ಸಿಕ್ಕಿದೆ.

ಇದೀಗ ಈ ವರದಿ ಪವಿತ್ರಾಗೌಡ ವಿರುದ್ಧ ಪೊಲೀಸರಿಗೆ ಒಂದು ಪ್ರಬಲ ಸಾಕ್ಷಿಯಾಗಲಿದೆ. ರೇಣುಕಾಸ್ವಾಮಿಗೆ ಪಟ್ಟಣಗೆರೆ ಶೆಡ್‌ಗೆ ಹೋಗಿ ತನ್ನ ಚಪ್ಪಲಿಯಲ್ಲಿ ನಟಿ ಹೊಡೆದಿದ್ದಳು ಎಂಬ ಆರೋಪ ಆಕೆ ಮೇಲಿದೆ. ಇದೀಗ ನಟಿಯ ಚಪ್ಪಲಿಯಲ್ಲಿ ರೇಣಿಕಾ ಸ್ವಾಮಿಯ ರಕ್ತದ ಕಲೆ ಇರುವುದು ಮತ್ತಷ್ಟು ಕೇಸ್‌ಗೆ ಬಲ ತುಂಬಿದೆ.

Leave A Reply

Your email address will not be published.