Eshwar Khandre: ಒತ್ತುವರಿ ತೆರವು ವಿಚಾರ- ಮಲೆನಾಡು, ಕರಾವಳಿ ಜನತೆಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಅರಣ್ಯ ಸಚಿವ ಖಂಡ್ರೆ !!

Eshwar Khandre: ಮಲೆನಾಡು ಹಾಗೂ ಕರಾವಳಿ ಭಾಗಗಳಲ್ಲಿ ಅರಣ್ಯ ಇಲಾಖೆಯ ನಿರ್ಧಾರ ಭಾರೀ ಆತಂಕ ಸೃಷ್ಟಿಸಿದೆ. ಒತ್ತುವರಿ ತೆರವುಗೊಳಿಸುವಂತೆ ಸಚಿವರು ನೀಡಿದ ಸೂಚನೆಯಿಂದಾಗಿ ಮಲೆನಾಡಿಗರಿಗೆ ದಿಕ್ಕು ತೋಚದಾಗಿದೆ. ಇದರಿಂದ ಸಣ್ಣ ಮತ್ತು ಅತಿ ಸಣ್ಣ ರೈತರು ಹಾಗೂ ಮನೆ ಕಟ್ಟಿಕೊಂಡವರೆಲ್ಲ ಭಯಭೀತ ರಾಗಿದ್ದಾರೆ. ಇಲಾಖೆಯ ನಿಲುವು ಹಳ್ಳಿಗಳಲ್ಲಿನ ಸಣ್ಣ ಪುಟ್ಟ ರೈತರ ಧೈರ್ಯವನ್ನೇ, ಬದುಕನ್ನೇ ಕಸಿದುಕೊಳ್ಳುತ್ತಿದೆ. ಇದರ ನಡುವೆ ಅಧಿಕಾರಿಗಳ ದಬ್ಬಾಳಿಕೆ ಬೇರೆ. ಹೀಗಾಗಿ ಮಲೆನಾಡು ಜನರ ನಿಯೋಗವೊಂದು ಅರಣ್ಯ ಸಚಿವರಾದ(Forest Minister) ಈಶ್ವರ ಖಂಡ್ರೆ(Eshwar Khandre) ಅವರನ್ನು ಭೇಟಿಯಾಗಿ ಒತ್ತುವರಿ ಮಾಡದಂತೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ‘ಅರಣ್ಯಭೂಮಿ ಒತ್ತುವರಿ ಪ್ರಕರಣಗಳಲ್ಲಿ ನ್ಯಾಯಾಲಯದಲ್ಲಿ ಇತ್ಯರ್ಥವಾಗಿದ್ದರೂ ತೆರವಾಗಿರದ ಒತ್ತು- ವರಿಗಳನ್ನು ಮಾತ್ರ ತೆರವು ಮಾಡಲು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ಮಲೆನಾಡು ಮತ್ತು ಕರಾವಳಿ ಜನಪರ ಒಕ್ಕೂಟದ ಪ್ರತಿನಿಧಿಗಳ ನಿಯೋಗಕ್ಕೆ ಸಚಿವರು ಈ ಭರವಸೆ ನೀಡಿದರು.

ಅಲ್ಲದೆ ‘ಒತ್ತುವರಿ ತೆರವುಗೊಳಿಸುವ ಕುರಿತು ಈಗಾಗಲೇ ಸ್ಪಷ್ಟವಾಗಿ ಆದೇಶ ಕೊಟ್ಟಿದ್ದೇನೆ. ಒತ್ತುವರಿ ಪ್ರಕರಣ ನ್ಯಾಯಾಲಯದಲ್ಲಿ ಇತ್ಯರ್ಥವಾಗಿ- ದ್ದರೂ ತೆರವಾಗದೇ ಇರುವ ಬಗ್ಗೆ ನ್ಯಾಯಾಲಯವು ಸರ್ಕಾರಕ್ಕೆ ನೋಟಿಸ್‌ ನೀಡುತ್ತಿದೆ. ಆದ್ದರಿಂದ ಇಂತಹ ಒತ್ತು ವರಿಗಳನ್ನು ಹಾಗೂ 2015ರ ನಂತರ ಅತಿಕ್ರಮಣವಾಗಿರುವುದನ್ನು ಮಾತ್ರ ತೆರವಿಗೆ ಸೂಚನೆ ನೀಡಲಾಗಿದೆ. ಉಳಿದಂತೆ ಮೂರು ಎಕರೆ ಒಳಗಿನ ಒತ್ತುವರಿ ಹಾಗೂ ಅರ್ಜಿಗಳು ವಿಲೇವಾರಿ ಆಗದೆ ಇರುವ ಒತ್ತುವರಿಗಳನ್ನು ಮುಟ್ಟಬಾರದು’ ಎಂದು ಸೂಚಿಸಿರು ವುದಾಗಿ ನಿಯೋಗಕ್ಕೆ ತಿಳಿಸಿದರು.

ಇಷ್ಟೇ ಅಲ್ಲದೆ ‘ಯಾವುದನ್ನು ತೆರವು ಮಾಡಬೇಕು ಮತ್ತು ಯಾವುದನ್ನು ತೆರವು ಮಾಡಬಾರದು ಹಾಗೂ ಯಾವ ಕಾರಣಕ್ಕಾಗಿ ಒತ್ತುವರಿ ತೆರವು ಮಾಡುತ್ತೇವೆ ಎಂಬ ಸ್ಪಷ್ಟ ಮಾಹಿತಿಯನ್ನು ಅಧಿಕಾರಿಗಳು ಮತ್ತು ಜನಸಾಮಾನ್ಯರಿಗೆ ತಲುಪುವಂತೆ ವ್ಯವಸ್ಥೆ ಮಾಡುತ್ತೇನೆ. ಈ ಕುರಿತು ಇನ್ನೊಂದು ಸ್ಪಷ್ಟವಾದ ಸೂಚನೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳಿಗೆ ನೀಡುತ್ತೇನೆ’ ಆಶ್ವಾಸನೆಯನ್ನು ನೀಡಿದರು.

Leave A Reply

Your email address will not be published.