Flag Hoisting: ಸ್ವಾತಂತ್ರ್ಯ ದಿನ ಹಾಗೂ ಗಣರಾಜ್ಯ ದಿನ ಧ್ವಜಾರೋಹಣ ಒಂದೇ ರೀತಿ ಇರುತ್ತಾ?

Falg hoisting: ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ದಿನವನ್ನು ಸ್ವಾತಂತ್ರ್ಯ ದಿನವನ್ನಾಗಿ(Independence Day) ಆಚರಿಸಿದರೆ ದೇಶದ ಸಂವಿಧಾನ ಜಾರಿಗೆ ಬಂದ ದಿನವನ್ನು ಗಣರಾಜ್ಯೋತ್ಸವ(Republic Day) ಎಂದು ಆಚರಿಸಲಾಗುತ್ತದೆ. ಈ ಎರಡು ದಿನವನ್ನು ರಾಷ್ಟ್ರದಲ್ಲಿ ವಿಶೇಷ ದಿನವನ್ನಾಗಿ ಆಚರಿಸಲಾಗುತ್ತದೆ. ಈ ಎರಡು ದಿನಗಳಂದು ರಾಷ್ಟ್ರ ಧ್ವಜವನ್ನು ಅದರದೇ ರೀತಿಯ ಕ್ರಮಗಳಲ್ಲಿ ಧ್ವಜಾರೋಹಣ ಮಾಡಲಾಗುತ್ತದೆ. ಎರಡು ದಿನ ಒಂದೇ ರೀತಿಯಾಗಿ ಧ್ವಜಾರೋಹಣ(Flag hoisting) ಮಾಡಲಾಗುವುದಿಲ್ಲ.

ಆಗಸ್ಟ್ 15. ಸ್ವಾತಂತ್ರ್ಯ ದಿನಾಚರಣೆ. ಅಂದು ದೇಶದಾದ್ಯಂತ ಸರ್ಕಾರಿ ಕಚೇರಿ, ಖಾಸಗಿ ಕಂಪೆನಿ, ಸಂಸ್ಥೆಗಳಲ್ಲಿ ಧ್ವಜಾರೋಹಣ ಮಾಡಲಾಗುತ್ತದೆ. ಅಂದು ಧ್ವಜವನ್ನು ಕಟ್ಟಿದ ಹಗ್ಗವನ್ನು ಕೆಳಗಿನಿಂದ ಮೇಲಕ್ಕೆ ಎಳೆಯಲಾಗುತ್ತದೆ. ಅದು ಮೇಲೆ ತಲುಪಿದ ನಂತರ ಹಗ್ಗ ಎಳೆದು ಬಿಚ್ಚಲಾಗುತ್ತದೆ. ಇದನ್ನು ಧ್ವಜಾರೋಹಣ ಎನ್ನಲಾಗುತ್ತದೆ. ಕಾರಣ ಆಗಸ್ಟ್ 15, 1947 ರಂದು ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಐತಿಹಾಸಿಕ ಘಟನೆಯನ್ನು ಗೌರವಿಸಿ ಮಾನ್ಯ ಪ್ರಧಾನ ಮಂತ್ರಿ ಈ ಧ್ವಜಾರೋಹಣವನ್ನು ಮಾಡುತ್ತಾರೆ.

ಆದರೆ ಜನವರಿ 26 ಗಣರಾಜ್ಯೋತ್ಸವದಂದು ಧ್ವಜಾರೋಹಣ ಮಾಡುವ ಕ್ರಮ ಸ್ವಲ್ಪ ಬದಲಾಗುತ್ತದೆ. ಈ ದಿನ ಧ್ವಜವನ್ನು ಧ್ವಜ ಸ್ಥಂಭದ ಮೇಲ್ಭಾಗದಲ್ಲಿ ಕಟ್ಟಲಾಗುತ್ತದೆ. ನಂತರ ಅದನ್ನು ಕಟ್ಟಿದ ಹಗ್ಗವನ್ನು ಬಿಚ್ಚಲಾಗುತ್ತದೆ. ಭಾರತದ ಸಂವಿಧಾನದಲ್ಲಿ ಇದನ್ನು ಧ್ವಜ ಅನಾವರಣ ಎಂದು ಉಲ್ಲೇಖಿಸಲಾಗಿದೆ.

ಎರಡನೇ ವ್ಯತ್ಯಾಸ ಏನೆಂದರೆ ಸ್ವಾತಂತ್ರ್ಯ ದಿನದಂದು ಪ್ರಧಾನ ಮಂತ್ರಿಗಳು ಧ್ವಜಾರೋಹಣ ಮಾಡುತ್ತಾರೆ. ಯಾಕೆಂದರೆ ಸ್ವಾತಂತ್ರ್ಯ ಸಿಕ್ಕ ಸಂಧರ್ಭದಲ್ಲಿ ಆಗಿನ್ನು ಸಂವಿಧಾನ ಜಾರಿಗೆ ಬಂದಿರಲಿಲ್ಲ. ಕೇಂದ್ರದಲ್ಲಿ ಯಾವ ಸರ್ಕಾರ ಇರುತ್ತದೋ ಅದರ ಮುಖ್ಯಸ್ಥರು ಧ್ವಜಾರೋಹಣ ಮಾಡುವ ಕ್ರಮ ಜಾರಿಯಲ್ಲಿದೆ. ಆಗಸ್ಟ್‌ ೧೫ರಂದು ಸಂಜೆ, ರಾಷ್ಟ್ರಪತಿಗಳು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿ ತಮ್ಮ ಸಂದೇಶವನ್ನು ನೀಡುತ್ತಾರೆ.

ಅದೇ ಗಣರಾಜ್ಯವನ್ನು ದೇಶದಲ್ಲಿ ಸಂವಿಧಾನದ ಜಾರಿಗೆ ಬಂದಿರುವ ಸ್ಮರಣಾರ್ಥವಾಗಿ ಆಚರಣೆ ಮಾಡಲಾಗುತ್ತದೆ. ಈ ದಿನ ಅಂದರೆ ಜನವರಿ 26, ರಂದು ಸಂವಿಧಾನದ ಮುಖ್ಯಸ್ಥರಾದ ರಾಷ್ಟ್ರಪತಿ ಧ್ವಜಾರೋಹಣ ಮಾಡಿ ಸಂವಿಧಾನಕ್ಕೆ ಗೌರವ ಸೂಚಿಸುತ್ತಾರೆ.

ಇನ್ನು ಮೂರನೇ ವ್ಯತ್ಯಾಸ ಏನೆಂದರೆ ಸ್ವಾತಂತ್ರ್ಯ ದಿನಾಚರಣೆಯಂದು ದೇಶದ ಐತಿಹಾಸಿಕ ಕಟ್ಟಡ ಕೆಂಪು ಕೋಟೆಯಲ್ಲಿ ಧ್ವಜಾರೋಹಣವನ್ನು ಮಾಡಲಾಗುತ್ತದೆ. ಅದೇ ಗಣರಾಜ್ಯೋತ್ಸವದಂದು ಭಾರತದ ಪ್ರಮುಖ ರಸ್ತೆಯಾದ ದೆಹಲಿಯ ರಾಜಪಥದಲ್ಲಿ ಅಂದರೆ ಈಗಿನ ಕರ್ತವ್ಯ ಪಥದಲ್ಲಿ ಧ್ವಜಾರೋಹಣ ಮಾಡಲಾಗುತ್ತದೆ. ಅಂದು ವಿಜೃಂಭನೆಯಿಂದ ಮೆರವಣಿಗೆಗಳನ್ನು ಮಾಡಲಾಗುತ್ತದೆ.

Leave A Reply

Your email address will not be published.