Alto car gift: ಒಲಿಂಪಿಕ್ ವಿಜೇತನಿಗೆ ಸುಜುಕಿ ಆಲ್ಟೊ ಕಾರ್ ಗಿಫ್ಟ್: ಇದು ಬಹುಮಾನನಾ? ಇಲ್ಲ ಅವಮಾನನಾ?

Alto car gift: ಒಂದು ದೇಶದ ಕ್ರೀಡಾಪಟು ಒಲಿಂಪಿಕ್‌ನಲ್ಲಿ ಪದಕ ಗೆದ್ದರೆ ಇಡೀ ದೇಶಕ್ಕೆ ದೇಶವೇ ಸಂತೋಷ ಪಡುತ್ತದೆ. ಅದರಲ್ಲೂ ಚಿನ್ನದ ಪದಕ ಗೆದ್ದರೆ ಅದರ ಸಂಭ್ರಮವೇ ಬೇರೆ. ಅವರಿಗೆ ಸರ್ಕಾರದಿಂದ, ಕೆಲವು ಉದ್ಯಮಿಗಳು ವಿವಿಧ ರೀತಿಯ ಉಡುಗೊರೆಗಳನ್ನು ಘೋಷಿಸುತ್ತಾರೆ. ಬಂಗ್ಲೆ, ಐಷರಾಮಿ ಕಾರುಗಳು, ಉದ್ಯೋಗ ಹೀಗೆ. ಮೊನ್ನೆ ನಡೆದ ಒಲಿಂಪಿಕ್ಸ್‌ನಲ್ಲಿ ಭಾರತದ ನೀರಜ್ ಚೋಪ್ರಾ ಅವರನ್ನು ಜಾವೆಲಿನ್ ನಲ್ಲಿ ಹಿಂದಕ್ಕಿ ದಾಖಲೆಯ ಆಟ ಆಡಿ ಪಾಕಿಸ್ತಾನದ ಅರ್ಷದ್ ನದೀಮ್ ಚಿನ್ನ ಗೆದ್ದಿದ್ದರು.

ಇವರ ಜೀವಮಾನ ಸಾಧನೆಯನ್ನು ಮನಗಂಡ ಅಮೆರಿಕದ ಉದ್ಯಮಿಯೊಬ್ಬರು ನದೀಮ್ ಅವರಿಗೆ ಸುಜುಕಿ ಆಲ್ಟೊವನ್ನು ಉಡುಗೊರೆಯಾಗಿ ನೀಡಲು ಮುಂದಾಗಿದ್ದಾರೆ. ಬಹುಮಾನ ನೀಡುವ ಮೂಲಕ ಅವರಿಗೆ ಸನ್ಮಾನ ಮಾಡಿದ್ದಾರೋ? ಅಥವಾ ಅವಮಾನ ಮಾಡಿದ್ದಾರೋ ಎಂಬ ಚರ್ಚೆ ನಡೆಯುತ್ತಿದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಇವರ ಈ ಬಹುಮಾನಕ್ಕಾಗಿ ಅಪಹಾಸ್ಯಕ್ಕೊಳಗಾಗಿದ್ದಾರೆ.
ಅರ್ಷದ್ ನದೀಮ್ ಕಳೆದ ವಾರ ಪ್ಯಾರಿಸ್‌ನಲ್ಲಿ 92.97 ಮೀಟರ್ ಜಾವೆಲಿನ್ ಎಸೆತದಲ್ಲಿ ನೀರಜ್ ಚೋಪ್ರಾ ದಾಖಲೆ ಮುರಿದು ಅಥ್ಲೆಟಿಕ್ಸ್‌ನಲ್ಲಿ ಪಾಕಿಸ್ತಾನದ ಮೊದಲ ಒಲಿಂಪಿಕ್ ಪದಕವನ್ನು ಗೆದ್ದು ಇತಿಹಾಸ ನಿರ್ಮಿಸಿದರು. ಈ ಹಿನ್ನೆಲೆಯಲ್ಲಿ ನದೀಮ್ ಪ್ಯಾರಿಸ್‌ನಿಂದ ಪಾಕಿಸ್ತಾನಕ್ಕೆ ಹಿಂದಿರುಗಿದ ಕೂಡಲೆ ಜಾವೆಲಿನ್ ಚಾಂಪಿಯನ್‌ಗೆ “ಹೊಚ್ಚ ಹೊಸ ಆಲ್ಟೊ ಕಾರನ್ನು” ಪಾಕಿಸ್ತಾನಿ-ಅಮೆರಿಕನ್ ಉದ್ಯಮಿ ಅಲಿ ಶೇಖಾನಿ ಉಡುಗೊರೆಯಾಗಿ ನೀಡಲಿದ್ದಾರೆ ಎಂದು ಪಾಕಿಸ್ತಾನದ ಕಾರ್ಯಕರ್ತ ಸೈಯದ್ ಜಾಫರ್ ಅಬ್ಬಾಸ್ ಜಾಫ್ರಿ ವೀಡಿಯೊದಲ್ಲಿ ಹೇಳಿದ್ದಾರೆ. ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ಅರ್ಷದ್ ನದೀಮ್ ಅವರ ಅಭಿಮಾನಿಗಳು ಪಾಕಿಸ್ತಾನದ ₹ 23.31 ಲಕ್ಷ ಬೆಲೆಯ ವಿನಮ್ರ ಹ್ಯಾಚ್‌ಬ್ಯಾಕ್ ಕಾರನ್ನು ಬಹುಮಾನ ನೀಡಿದ್ದಕ್ಕೆ ಧನ್ಯವಾದಗಳು ಎಂದು ಉದ್ಯಮಿಯನ್ನು ಲೇವಡಿ ಮಾಡಿದ್ದಾರೆ. ಭಾರತೀಯ ರೂಪಾಯಿಯಲ್ಲಿ, ಈ ಕಾರಿನ ಬೆಲೆ ₹7 ಲಕ್ಷಕ್ಕಿಂತ ಸ್ವಲ್ಪ ಜಾಸ್ತಿ.
ಈ ಬಹುಮಾನದ ಕುರಿತು ಅನೇಕರು ಟ್ವೀಟ್ ಮಾಡಿ ಅಲಿ ಶೇಖಾನಿ ಅವರಿಗೆ ವ್ಯಂಗ್ಯವಾಡಿದ್ದಾರೆ. ಆತ್ಮೀಯ ಅಲಿ ಶೇಖಾನಿ, ನೀವು ಅನಗತ್ಯವಾಗಿ ಹಣ ಖರ್ಚು ಮಾಡುವ ಬದಲು, ಅರ್ಷದ್ ನದೀಮ್ ಅವರ ಪೌಷ್ಟಿಕತಜ್ಞರು, ತರಬೇತುದಾರರು ಅಥವಾ ಇತರ ಬೆಂಬಲ/ತಾಂತ್ರಿಕ ಸಿಬ್ಬಂದಿಗಳಿಗೆ ಅವರಿಗಾಗಿ ಯಾಕೆ ನೀವು ಪ್ರಾಯೋಜಕತ್ವ ನೀಡಬಾರದು ಎಂದು ಕರಾಚಿ ನಿವಾಸಿ ತೈಮೂರ್ ಎಚ್ ಎಕ್ಸ್ ನಲ್ಲಿ ಹೇಳಿದ್ದಾರೆ.
ನಿಮ್ಮ ಸೇವೆ “ಒಳ್ಳೆಯದು ಅಲಿ ಶೇಖಾನಿ …ಆದರೆ ದಯವಿಟ್ಟು ಆಲ್ಟೊವನ್ನು ಮೋಡಿಫೈ ಮಾಡಬೇಕಾಗುತ್ತದೆ. ನಾನು 6’1 ಇಂಚು ಉದ್ದ ಇದ್ದೇನೆ. ನನ್ನ ತಲೆಯು ಆಲ್ಟೊದ ಛಾವಣಿಗೆ ಬಡಿಯುತ್ತದೆ. ಹಾಗಾಗಿ ನದೀಮ್ ಭಾಯ್ ಟಾಪ್ ಲೆಸ್ ಕಾರನ್ನು ಓಡಿಸ ಬೇಕಾಗುತ್ತದೆ, ”ಎಂದು ಇನ್ನೊಬ್ಬ ಬಳಕೆದಾರರು ವ್ಯಂಗ್ಯವಾಡಿದ್ದಾರೆ. ಹಾಗೆ ಒಂದು ವಿಡೀಯೋವನ್ನು ಹರಿಬಿಟ್ಟಿದ್ದಾರೆ.
https://twitter.com/suppandiiii/status/1822924457641456070
“ಇದು ನಿಜಕ್ಕೂ ಅವಮಾನಕರ ಸಂಗತಿ. ನದೀಮ್ ಅವರು BMW ಅಥವಾ Audi ಗೆ ಯಂತ ಐಷರಾಮಿ ಕಾರ್‌ಗಳಿಗೆ ಅರ್ಹರಾಗಿದ್ದಾರೆ” ಎಂದು IT ವೃತ್ತಿಪರ ರಾಹುಲ್ ಜೈನ್ X ನಲ್ಲಿ ಪ್ರತಿಕ್ರಿಯಿಸಿದ್ದಾರೆ.