B Y Vijayendra: ವಿಜಯೇಂದ್ರ ವಿರುದ್ಧ ಬೆಳಗಾವಿಯಲ್ಲಿ ಗೌಪ್ಯ ಸಭೆ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಏನಂತಾರೆ?

B Y Vijayendra: ಬಿಜೆಪಿಯ ಕೆಲ ರೆಬಲ್‌ ನಾಯಕರು ಸಭೆ ನಡೆಸಿ ಬೇರೆಯೇ ಪಾದಯಾತ್ರೆ ಮಾಡುವ ಯೋಜನೆ ಮಾಡಿದ್ದಾರೆ ಈ ಬಗ್ಗೆ ಪ್ರಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಪಾದಯಾತ್ರೆಯಿಂದ ಪಾರ್ಟಿಗೆ ಶಕ್ತಿ ಬರ್ತದೆ ಎಂದಾದರೆ ಅದಕ್ಕೆ ನನ್ನ ವಿರೋಧ ಇಲ್ಲ. ರಾಜ್ಯಾಧ್ಯಕ್ಷ ಆಗಿ ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವುದು ನನ್ನ ಕರ್ತವ್ಯ. ಅದಕ್ಕಾಗಿ ಕೆಲಸವನ್ನು ಸತತವಾಗಿ ಮಾಡ್ತಾ ಬಂದಿದ್ದೇನೆ. ಕೆಲವರು ಪ್ರತ್ಯೇಕ ಪಾದಯಾತ್ರೆ ನಡೆಸುವ ಅಪೇಕ್ಷೆ ವ್ಯಕ್ತಪಡಿಸಿದ್ದಾರೆ. ಅದರಿಂದ ಪಕ್ಷಕ್ಕೆ ಶಕ್ತಿ ಸಿಗುತ್ತೆ ಅಂದ್ರೆ ವರಿಷ್ಠರು ಅದಕ್ಕೆ ಅನುಮತಿ ಕೊಡ್ತಾರೆ. ಇದಕ್ಕೆ ನನ್ನ ತಕರಾರು ಇಲ್ಲ. ಈ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡಲಿದೆ. ಅವರು ಹೈಕಮಾಂಡ್ ಭೇಟಿ ಮಾಡ್ತೇನೆ ಎಂದಿದ್ದಾರೆ. ಭೇಟಿ ಮಾಡಲಿ. ಏನೇ ಮಾಡಿದರೂ ಅದು ಪಕ್ಷಕ್ಕೆ ಪೂರಕವಾಗಿರಬೇಕು, ಸದುದ್ದೇಶದಿಂದ ಇರಬೇಕು. ಹೈಕಮಾಂಡ್‌ ಏನು ಹೇಳುತ್ತದೆ ನೋದುವ ಎಂದು ಹೇಳಿದರು.

 

ಇದೇ ವೇಳೆ ಸಿಪಿ ಯೋಗಿಶ್ವರ್ ಬಂಡಾಯ ಸ್ಪರ್ಧೆ ವಿಚಾರವಾಗಿ ಮಾತನಾಡಿದ ಅವರು ಸಿಪಿ ಯೋಗಿಶ್ವರ್ ಗೆ ಅವರ ಕ್ಷೇತ್ರದಲ್ಲಿ ಅವರದ್ದೆ ಆದ ಶಕ್ತಿ ಇದೆ. ಅವರು ಟಿಕೆಟ್ ಅಪೇಕ್ಷೆ ಪಡೋದ್ರಲ್ಲಿ ಯಾವುದೇ ತಪ್ಪಲ್ಲ. ಆದರೆ ಈ ಕ್ಷೇತ್ರದಲ್ಲಿ ಕುಮಾರಸ್ವಾಮಿ ಕೂಡ ಗೆದ್ದಿದ್ರು. ಅವರಿಗೆ ತನ್ನದೇ ಆದ ಹಿಡಿತ ಇದೆ ಈ ಕ್ಷೇತ್ರದಲ್ಲಿ. ಅದು ಜೆಡಿಎಸ್ನ ಭದ್ರ ಕೋಟೆ. ಹಾಗಾಗಿ ಎರಡು ಪಾರ್ಟಿಯ ವರಿಷ್ಠ ರು ಕುಳಿತು ಚರ್ಚೆ ಮಾಡುತ್ತಾರೆ ಎಂದು ಪ್ರತಿಕ್ರಿಯಿಸಿದ್ದಾರೆ. ಇದೇ ವೇಳೆ ಸಿಪಿ ಯೋಗಿಶ್ವರ್ ಗೆ ಟಿಕೆಟ್ ನೀಡಬೇಕು ಎಂದು ಡಾ. ಅಶ್ವತ್ ನಾರಾಯಣ್ ಸಮಿತಿ ವರದಿ ನೀಡಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ನಾನು ಅಶ್ವತ್ ನಾರಾಯಣ್ ಜೊತೆ ಈ ಬಗ್ಗೆ ಮಾತನಾಡುತ್ತೇನೆ. ಡಾ. ಅಶ್ವತ್ ನಾರಾಯಣ್ ಆಗಲಿ ವಿಜಯೇಂದ್ರ ಆಗಲಿ ಹೇಳಿದ ಮಾತ್ರಕ್ಕೆ ಶಿಪಾರಸು ಮಾಡಿದ್ರೆ ಆಗಲ್ಲ‌. ಆನಿದ್ದರು ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದು ವಿಜಯೇಂದ್ರ ಹೇಳಿದರು.

ಇದೇ ವೇಳೆ ವಿಜಯೇಂದ್ರ ಗೆಲುವು ಕಾಂಗ್ರೆಸ್ ನೀಡಿದ ಭಿಕ್ಷೆ ಎಂದು ಹರಿಹರ ಶಾಸಕ ಬಿಪಿ ಹರೀಶ್ ಹೇಳಿದ ಹೇಳಿಕೆ ಬಗ್ಗೆ ಕೇಳಿದಾಗ, ಕೆಲವರು ಹಾದಿ ಬೀದಿಲಿ ಮಾತಾಡ್ತಾರೆ. ಅವರಂತೆ ನಾನು ಹಾಗೆ ಮಾತಾಡೋಕೆ ಆಗಲ್ಲ‌. ನಾನು ಬಜೆಪಿ ರಾಜ್ಯಾಧ್ಯಕ್ಷ ಇದ್ದೇನೆ. ನನ್ನನ್ನು ಕ್ಷೇತ್ರದ ಜನರು, ಕಾರ್ಯಕರ್ತರು ಗೆಲ್ಲಿಸಿದ್ದಾರೆ ಎಂದು ಹರೀಶ್ ಹೇಳಿಕೆಗೆ ಟಾಂಗ್ ವಿಜಯೇಂದ್ರ ನೀಡಿದರು. ಹಾಗೆ ಸರ್ಕಾರದಿಂದ ಜನೌಷಧ ಕೇಂದ್ರಗಳಿಗೆ ಬ್ರೇಕ್ ಹಾಕುವ ವಿಚಾರದ ಬಗ್ಗೆ ವಿಜಯೇಂದ್ರ ಖಂಡಿಸಿದರು. ರಾಜ್ಯ ಸರ್ಕಾರ ಪ್ರತಿಯೊಂದು ವಿಚಾರದಲ್ಲೂ ಸಂಘರ್ಷದ ಹಾದಿ ತುಳಿಯುತ್ತಿದೆ, ಇದು ದುರಂತ. ಬಡವರಿಗೆ ಕಡಿಮೆ ದರದಲ್ಲಿ ಕೇಂದ್ರದಿಂದ ಔಷಧಗಳು ಸಿಗ್ತಿವೆ. ಇದು ಪ್ರಧಾನಮಂತ್ರಿಗಳ ಕನಸಿನ ಯೋಜನೆ. ಇವುಗಳ ಸ್ಥಗಿತ ಬಗ್ಗೆ ಹೇಳಿಕೆ ಕೊಡ್ತಿರೋದು ಖಂಡಿತ ಸರಿಯಲ್ಲ ಎಂದರು.

Leave A Reply

Your email address will not be published.