Kitchen Tips: ಹಾಲಿನಿಂದ ದಪ್ಪ ಕೆನೆ ತೆಗೆಯಲು ಸರಿಯಾದ ವಿಧಾನ ಇಲ್ಲಿದೆ!

Share the Article

Kitchen Tips: ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಹಾಲಿನ ಉಪಯೋಗ ಇದ್ದೇ ಇದೆ. ಈ ಹಾಲಿನಿಂದ ಕೆನೆ ತೆಗೆದು ಅದನ್ನು ನಾನಾ ರೀತಿಯಲ್ಲಿ ಬಳಸುತ್ತಾರೆ. ಸಾಮಾನ್ಯವಾಗಿ ಉತ್ತಮ ಗುಣಮಟ್ಟದ ಹಾಲಿನಿಂದ ಉತ್ತಮ ಕೆನೆ ಬರುತ್ತದೆ. ಆದರೆ ಕೆಲವೊಮ್ಮೆ ಎಷ್ಟೇ ಉತ್ತಮ ಗುಣಮಟ್ಟದ ಹಾಲಿದ್ದರೂ ಕೆನೆ ಚೆನ್ನಾಗಿ ಬರುವುದಿಲ್ಲ. ಕೆಲವು ಮಹಿಳೆಯರಿಗೆ ಹಾಲಿನ ಕೆನೆ ಯಾವ ರೀತಿಯ ತೆಗೆಯಬೇಕು ಎಂಬ ಸರಿಯಾದ ಮಾಹಿತಿ ಇರುವುದಿಲ್ಲ. ಅದಕ್ಕಾಗಿ ಹಾಲಿನಿಂದ ದಪ್ಪನೆಯ ಕೆನೆ ತೆಗೆಯಲು ಇಲ್ಲಿ ಟಿಪ್ಸ್ (Kitchen Tips)  ನೀಡಲಾಗಿದೆ.

ನೀವು ಹಾಲು ಕುದಿ ಬಂದ ನಂತರ ಸಣ್ಣ ಉರಿಯಲ್ಲಿ ಸುಮಾರು 15 ರಿಂದ 20 ನಿಮಿಷಗಳ ವರೆಗೆ ಕುದಿಸಿ ಆದರೆ ಹಾಲು ಚೆನ್ನಾಗಿ ಕುದಿಯುವಾಗ ಅದಕ್ಕೆ ಮುಚ್ಚಳ ಮುಚ್ಚುವ ಬದಲು ಸ್ಟೈನರ್‌ನಿಂದ ಮುಚ್ಚಿ. ಇನ್ನು ಹಾಲು ಕುದಿಯಲು ಆರಂಭಿಸಿದಾಗ ಕನಿಷ್ಠ ಎರಡು ಬಾರಿ ಚಮಚದಿಂದ ತಿರುಗಿಸಿ, ಗುಳ್ಳೆಗಳನ್ನು ಬದಿಗೆ ಸರಿಸಿ. ನಂತರ ಒಲೆಯಿಂದ ತೆಗೆದು ಹಾಲು ಬಿಸಿ ಆರಿದ ನಂತರ ಫ್ರಿಜ್‌ನಲ್ಲಿಡಿ. ಇನ್ನು ಕಾಯಿಸಿದ ಹಾಲನ್ನು ಮಣ್ಣಿನ ಪಾತ್ರೆಯಲ್ಲಿ ಸಂಗ್ರಹಿಸಿದರೆ ಕೆನೆ ದಪ್ಪವಾಗಿ ಮೊಸರು ಕೂಡ ಚೆನ್ನಾಗಿ ಬರುತ್ತದೆ. ನೆನಪಿರಲಿ ಯಾವಾಗಲು ಫ್ರಿಜ್‌ನಲ್ಲಿ ಇಟ್ಟ ಹಾಲನ್ನು ಕೂಡಲೇ ಕಾಯಿಸುವ ಅಭ್ಯಾಸ ಒಳ್ಳೆಯದಲ್ಲ.

Leave A Reply