Yuvanidhi Plus: ಸರ್ಕಾರದಿಂದ ನಿರುದ್ಯೋಗಿಗಳಿಗೆ ಗುಡ್ ನ್ಯೂಸ್: ಯುವನಿಧಿ ಭತ್ಯೆ ಜೊತೆ ಯುವನಿಧಿ ಪ್ಲಸ್ ​ಉದ್ಯೋಗ!

Yuvanidhi Plus: ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶವನ್ನು ಕರ್ನಾಟಕ ಕಾಂಗ್ರೆಸ್ ಸರ್ಕಾರ ನೀಡಲಿದೆ. ಹೌದು, ಈಗಾಗಲೇ ಕರ್ನಾಟಕದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ (Guarantee Schemes) ಜೊತೆಗೆ ಕಾಂಗ್ರೆಸ್​ ಸರ್ಕಾರ ಈಗ ಮತ್ತೊಂದು ಭಾಗ್ಯ ನೀಡಲು ಮುಂದಾಗಿದೆ. ಅಂದರೆ ನಿರುದ್ಯೋಗ ಯುವಕರಿಗೆ ಕೌಶಲ್ಯ ಹಾಗೂ ಉದ್ಯೋಗ ನೀಡುವ ನಿಟ್ಟಿನಲ್ಲಿ ಪಂಚ ಯೋಜನೆಗಳ ಪೈಕಿ ಯುವನಿಧಿ ಪ್ಲಸ್ (Yuvanidhi Plus) ಯೋಜನೆಯೊಂದನ್ನು ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಆ ಮೂಲಕ ನಿರುದ್ಯೋಗಳಿಗೆ ಭತ್ಯೆ ಜೊತೆ ಉದ್ಯೋಗ ನೀಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ.

 

ಹೌದು, ಯುವನಿಧಿ ಯೋಜನೆಯನ್ನ ಪರಿಷ್ಕರಣೆ ಮಾಡಿ ಯುವನಿಧಿ ಪ್ಲಸ್ ಮಾಡಲು ಸರ್ಕಾರ ಮುಂದಾಗಿದೆ. ನಿರುದ್ಯೋಗ ಯುವಕರಿಗೆ ಕೈಗಾರಿಕಾ ಕಂಪನಿ, ಐಟಿಬಿಟಿ , ಕಾರ್ಪೋರೇಟ್ ಕಂಪನಿಗಳ ಅನುಸಾರ ನಿರದ್ಯೋಗ ಯುವಕರಿಗೆ ತರಬೇತಿ ನೀಡಿ ಉದ್ಯೋಗ ದೊರಕುವಂತೆ ಮಾಡಲು ಸರ್ಕಾರ ಯುವನಿಧಿ ಪ್ಲಸ್​ ಯೋಜನೆ ಜಾರಿಗೆ ಮುಂದಾಗಿದೆ.

ಈಗಾಗಲೇ ಸರ್ಕಾರದಿಂದ ಯುವನಿಧಿ ಯೋಜನೆಯಡಿ ಪದವೀಧರರಿಗೆ ಮಾಸಿಕ 3 ಸಾವಿರ ರೂ. ಮತ್ತು ಡಿಪ್ಲೊಮಾ ಪದವೀಧರರಿಗೆ 1500 ರೂ. ನೀಡಲಾಗುತ್ತಿದೆ. ಇದರ ಮುಂದುವರೆದ ಭಾಗವಾಗಿ ಯುವನಿಧಿ ಪ್ಲಸ್​ ಜಾರಿ ಮಾಡಲಾಗುತ್ತಿದೆ. ಇದರಿಂದ ಯುವನಿಧಿ ಫಲಾನುಭವಿಗಳಿಗೆ ಉದ್ಯೋಗ ದೊರಕಿಸುವ ಉದ್ದೇಶವಾಗಿದೆ.

Leave A Reply

Your email address will not be published.