Viral Video: ಹಾವು-ಮುಂಗುಸಿ ರೋಚಕ ಫೈಟ್ ನೋಡಿದ್ದೀರಾ? ಇಲ್ಲಿದೆ ವಿಡಿಯೋ

Share the Article

Viral video: ಶತ್ರುಗಳು ಅಂದಾಗ ನೆನಪಾಗೋದು ಅದು ಹಾವು ಮತ್ತು ಮುಂಗುಸಿ. ಹಾವು ಮುಂಗುಸಿ ಎದುರು ಬಂದರೆ ಅಲ್ಲಿ ನಡೆಯೋದು ಯುದ್ಧವೇ ಸರಿ. ಅಂತೆಯೇ ಹಾವು ಮುಂಗುಸಿಯ ಕಾಳಗದ ವಿಡಿಯೋ ಒಂದು ವೈರಲ್ (Viral video) ಆಗಿದೆ. ಈ ಯುದ್ಧ ನೀವು ನೋಡಬಹುದು.

ಪಾಟ್ನಾ ಏರ್‌ಪೋರ್ಟ್‌ನಲ್ಲಿ ಈ ಘಟನೆ ನಡೆದಿದ್ದು, ಹಾವು ಮತ್ತು ಮುಂಗುಸಿ ಏರ್‌ಪೋರ್ಟ್‌ನ ರನ್‌ವೇಯಲ್ಲಿಯೇ ಕಾದಾಟಕ್ಕೆ ಇಳಿದಿವೆ. ಒಬ್ಬಂಟಿ ಹಾವನ್ನು ಒಂದಲ್ಲ ಎರಡಲ್ಲ ಸುತ್ತುವರಿದ ಮೂರು ಮುಂಗುಸಿಗಳು ಏರ್‌ಪೋರ್ಟ್‌ನ ರನ್‌ವೇಯಲ್ಲೇ ಯುದ್ಧ ನಡೆಸಿದೆ.

ಪಾಟ್ನಾ ಏರ್‌ಪೋರ್ಟ್‌ ರನ್‌ವೇಯಲ್ಲಿ ತನ್ನ ಪಾಡಿಗೆ ಹೋಗುತ್ತಿದ್ದ ಹಾವಿನ ಮೇಲೆ ಮೂರು ಮುಂಗುಸಿಗಳು ಒಟ್ಟಾಗಿ ಅಟ್ಯಾಕ್‌ ಮಾಡೋದು ಬಹಳ ರೋಚಕವಾಗಿದೆ. ಹಾವು ಒಬ್ಬಂಟಿಯಾಗಿ ಮೂರು ಮುಂಗುಸಿಗಳನ್ನು ಎದುರಿಸೋದು ಅಷ್ಟು ಸುಲಭವಂತೂ ಅಲ್ಲ. ಸದ್ಯ  ಈ ವಿಡಿಯೋ ಸಕತ್ ವೈರಲ್ ಆಗಿದ್ದು ಹಲವರು ಕಾಮೆಂಟ್ ಸುರಿಮಳೆ ಸುರಿಸಿದ್ದಾರೆ. ಅದರಲ್ಲೂ ಗೆಲ್ಲೋದು ಯಾರು ಅಂತ ಕಾಮೆಂಟ್ ಸೆಕ್ಷನ್ ನಲ್ಲಿ ಪ್ರಶ್ನೆ ಮಾತ್ರ ಎಲ್ಲರದ್ದಾಗಿತ್ತು.

 

Leave A Reply