UPI Payment: ಯುಪಿಐನಲ್ಲಿ ತಪ್ಪಾಗಿ ಬೇರೆ ವ್ಯಕ್ತಿಗೆ ಹಣ ಕಳುಹಿಸಿಬಿಟ್ಟಿದ್ದೀರಾ? ನಿಮ್ಮ ಹಣ ಮರಳಿ ಪಡೆಯುವ ವಿಧಾನ ಇಲ್ಲಿದೆ

UPI Payment: ಯುಪಿಐನಲ್ಲಿ ಪಾವತಿ ಮೂಲಕ ಬಹುತೇಕರ ದಿನನಿತ್ಯ ವಹಿವಾಟು ನಡೆಯುತ್ತವೆ. ಹಾಗಿರುವಾಗ ಒಂದುವೇಳೆ ತಪ್ಪಾದ ಯುಪಿಐ ಐಡಿಗೆ ನೀವು ಹಣ ಕಳುಹಿಸಿದ್ದರೆ ಅದನ್ನು ಮರಳಿ ಪಡೆಯಲು ಸಾಧ್ಯವಿದೆ.

 

ಹೌದು, ನೀವು ಗೂಗಲ್ ಪೇ, ಫೋನ್ ಪೇ, ಪೇಟಿಎಂ ನಲ್ಲಿ ಯಾರಿಗೋ ಹಣ ಕಳುಹಿಸಲು ಹೋಗಿ ಇನ್ಯಾರಿಗೋ ಕಳುಹಿಸಿದಲ್ಲಿ ಕೂಡಲೇ ಆ ವ್ಯಕ್ತಿಗೆ ನೀವು ಹಣ ಮರಳಿಸಲು ಮೆಸೇಜ್ ಮೂಲಕವೇ ಕೇಳಿಕೊಳ್ಳಬಹುದು. ಒಂದುವೇಳೆ ನಿಮ್ಮ ಮನವಿಗೆ ಅದಕ್ಕೆ ಸ್ಪಂದನೆ ಸಿಗದಿದ್ದರೆ ನಿಮಗೆ ಇನ್ನೊಂದು ದಾರಿ ಇದೆ. ಅಂದರೆ ಎನ್​ಪಿಸಿಐನಲ್ಲಿ (ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್) ದೂರು ದಾಖಲಿಸುವುದು.

ನೀವು ಯಾವುದೇ ಯುಪಿಐ ಪ್ಲಾಟ್​ಫಾರ್ಮ್​ನಲ್ಲಿ (UPI Payment) ತಪ್ಪಾಗಿ ಹಣ ಪಾವತಿಸಿದ್ದರೆ, ಈ ಯುಪಿಐ ಅನ್ನು ಅಭಿವೃದ್ದಿಪಡಿಸಿದ ಎನ್​ಪಿಸಿಐ ಸಂಸ್ಥೆ ಬಳಿ ದೂರು ದಾಖಲಿಸಬಹುದು. ಈ ಮೂಲಕ ನಿಮ್ಮ ಹಣ ಮರಳಿ ಪಡೆಯುವ ಅವಕಾಶ ಇರುತ್ತದೆ.

ಅದಕ್ಕಾಗಿ ಎನ್​ಪಿಸಿಐನ ವೆಬ್​ಸೈಟ್ ವಿಳಾಸ: www.npci.org.in/ ಇಲ್ಲಿಗೆ ಭೇಟಿ ನೀಡಿ ನಂತರ ಈ ವೆಬ್​ಸೈಟ್​ನಲ್ಲಿ ಮುಖ್ಯ ಮೆನುಗಳ ಪೈಕಿ ಕೊನೆಯಲ್ಲಿರುವ ‘ಗೆಟ್ ಇನ್ ಟಚ್’ ಅಡಿಯಲ್ಲಿ ‘ಯುಪಿಐ ಕಂಪ್ಲೇಂಟ್’ ಅನ್ನು ಕ್ಲಿಕ್ ಮಾಡಿ

ಇಲ್ಲಿ ಯುಪಿಐ ಡಿಸ್ಪೂಟ್ ರೀಡ್ರೆಸಲ್ ಮೆಕ್ಯಾನಿಸಂ ಪುಟ ತೆರೆಯುತ್ತದೆ. ಈ ಪುಟಕ್ಕೆ ನೇರವಾಗಿ ಹೋಗುವ ಲಿಂಕ್ ಇಲ್ಲಿದೆ: www.npci.org.in/what-we-do/upi/dispute-redressal-mechanism ಇಲ್ಲಿ ಪುಟದ ಮಧ್ಯಭಾಗದಲ್ಲಿ ಕಂಪ್ಲೇಂಟ್ ಸೆಕ್ಷನ್ ಕಾಣಬಹುದು. ಇಲ್ಲಿ ವಿವಿಧ ರೀತಿಯ ದೂರುಗಳಿಗೆ ಆಯ್ಕೆಗಳಿವೆ. ಈ ಪೈಕಿ ನಿಮ್ಮ ಯುಪಿಐ ಹಣ ಹಿಂಪಡೆಯಲು ‘ಟ್ರಾನ್ಸಾಕ್ಷನ್’ ಮುಂದಿರುವ ಪ್ಲಸ್ ಮಾರ್ಕ್ ಅನ್ನು ಕ್ಲಿಕ್ ಮಾಡಿ.

ಇದರಲ್ಲಿ ನೇಚರ್ ಆಫ್ ಟ್ರಾನ್ಸಾಕ್ಷನ್ ಯಾವುದೆಂದು ಆಯ್ಕೆ ಮಾಡಿ

ಮುಂದಿನ ಟ್ಯಾಬ್​ನಲ್ಲಿ ಸಮಸ್ಯೆ ಯಾವುದೆಂದು ಆಯ್ಕೆ ಮಾಡಿ. ತಪ್ಪಾಗಿ ಒಂದು ಖಾತೆಗೆ ಹಣ ವರ್ಗಾವಣೆ ಆಗಿದೆ ಎಂಬುದನ್ನು ಆಯ್ಕೆ ಮಾಡಿ.

ಬಳಿಕ ಒಂದು ವೇಳೆ ಕಮೆಂಟ್ ಬರೆಯುವುದಿದ್ದರೆ ಬರೆಯಬಹುದು.

ಇನ್ನು ಟ್ರಾನ್ಸಾಕ್ಷನ್ ರೆಫರೆನ್ಸ್ ನಂಬರ್ ಹಾಕಿರಿ

ನಂತರ ಹಣ ಕಳುಹಿಸಲಾದ ನಿಮ್ಮ ಬ್ಯಾಂಕ್ ಹೆಸರು ಆಯ್ಕೆ ಮಾಡಿ

ಯುಪಿಐ ಐಡಿ ನಮೂದಿಸಿ

ಎಷ್ಟು ಹಣ ಕಳುಹಿಸಿದ್ದೀರಿ ಎಂದು ನಿಖರವಾಗಿ ನಮೂದಿಸಿ

ಹಣ ಕಳುಹಿಸಲಾದ ದಿನಾಂಕ ಆಯ್ಕೆ ಮಾಡಿ

ನಿಮ್ಮ ಇಮೇಲ್ ಐಡಿ ಮತ್ತು ನೊಂದಾಯಿತ ಮೊಬೈಲ್ ನಂಬರ್ ನಮೂದಿಸಿ.

ಇದಾದ ಬಳಿಕ ಹಣ ಕಡಿತಗೊಂಡಿದ್ದಕ್ಕೆ ಸಾಕ್ಷಿಯಾಗಿ ಬ್ಯಾಂಕ್ ಸ್ಟೇಟ್​ಮೆಂಟ್ ಅನ್ನು ಅಪ್​ಲೋಡ್ ಮಾಡಿರಿ.

ಇದಾದ ಬಳಿಕ ಅಂತಿಮವಾಗಿ ‘ಸಬ್ಮಿಟ್’ ಕ್ಲಿಕ್ ಮಾಡಿ.

Leave A Reply

Your email address will not be published.