Survive from dog bite: ನಾಯಿ ಕಚ್ಚಲು ನಿಮ್ಮನ್ನು ಬೆನ್ನಟ್ಟಿದಾಗ ಜಸ್ಟ್ ಹೀಗ್ ಮಾಡಿ, ಬಾಲ ಮುದುಡಿ ಸುಮ್ಮನಾಗುತ್ತೆ !!

Survive from dog bite: ನಾಯಿಯನ್ನು ನಿಯತ್ತಿನ ಪ್ರತೀಕ ಎಂದು ಕರೆಯುತ್ತಾರೆ. ಇದಕ್ಕೆ ಕಾರಣ ಅದು ತನಗೆ ರೊಟ್ಟಿ ಹಾಕಿದ ಮಾಲೀಕನ ಬಳಿ ನಡೆದುಕೊಳ್ಳುವ ರೀತಿ ಮತ್ತು ತನ್ನ ಋಣವನ್ನು ತೀರಿಸಿ ಋಣಮುಕ್ತವಾಗುವ ಬಗೆ. ನಾಯಿಯ ಈ ಒಂದು ಗುಣ ಎಲ್ಲರಿಗೂ ಇಷ್ಟ ಆಗುತ್ತದೆ. ಆದರೆ ಇದರ ಜೊತೆಜೊತೆಗೆ ನಾಯಿಗಳು ಕೆಲವೊಮ್ಮೆ ಮನುಷ್ಯರ ಮೇಲೆ ಅಟ್ಯಾಕ್ ಮಾಡುವ, ಕಚ್ಚಿ ಗಾಯಗೊಳಿಸುವಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ದಿನನಿತ್ಯವೂ ಇಂತಹ ಕೆಲವೊಂದು ಘಟನೆಗಳನ್ನು ನಾವು ನೋಡುತ್ತಿದ್ದೇವೆ. ಹೀಗೆ ನಾಯಿ ನಿಮಗೆ ಕಚ್ಚಲು ಬಂದಾಗ ಅದರಿಂದ ತಪ್ಪಿಸಿಕೊಳ್ಳಬೇಕಾ?(Survive from dog bite) ಹಾಗಿದ್ರೆ ಜಸ್ಟ್ ಹೀಗೆ ಮಾಡಿ, ಬಂದ ದಾರಿಗೆ ಸುಂಕವಿಲ್ಲವೆನ್ನುವಂತೆ ನಾಯಿ ಬಾಲ ಮುದುರಿಕೊಂಡು ಹೋಗುತ್ತದೆ.

ಹೌದು, ಈ ಪೈಕಿ ನೀವು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಯಾವುದಾದರೂ ಬೀದಿ ನಾಯಿ ನಮ್ಮನ್ನು ಕಚ್ಚಲು ಹಿಂಬಾಲಿಸಿದಾಗ ನೀವು ನಾವು ಕೆಳಗೆ ನೀಡಿರುವ ಸಿಂಪಲ್ ಟ್ರಿಕ್ಸ್ ಯೂಸ್ ಮಾಡಿ ಸಾಕು. ಬಾಲ ಮುದುಡಿಕೊಂಡು ನಾಯಿ ಸುಮ್ಮನಾಗುತ್ತದೆ.

* ಹೆದರಿ ಓಡಬೇಡಿ :
ನಾಯಿ ನಮ್ಮನ್ನು ಹಿಂಬಾಲಿಸಿದಾಗ ನಮಗೆ ಭಯವಾಗುತ್ತದೆ. ಆಗ ಹೆದರಿ ಓಡಲು ಶುರುಮಾಡುತ್ತೇವೆ. ಆದರೆ, ಈ ಪರಿಸ್ಥಿತಿಯಲ್ಲಿ ನಾವೇ ಸಮಾಧಾನ ಮಾಡಿಕೊಳ್ಳಬೇಕು. ಏಕೆಂದರೆ ನಾಯಿಗಳು ನಮ್ಮ ಭಯವನ್ನು ಮಾತ್ರವಲ್ಲದೆ ನಮ್ಮ ಭಾವನೆಯನ್ನೂ ಗ್ರಹಿಸುವ ಸಾಮರ್ಥ್ಯವನ್ನು ಹೊಂದಿವೆ. ಈ ಭಯವು ನಮ್ಮ ಮೇಲೆ ಎರಗಲು ಇನ್ನೂ ಹೆಚ್ಚಿನ ಕಾರಣವನ್ನು ಒದಗಿಸಬಹುದು. ಆದ್ದರಿಂದ ನಾಯಿ ಬೆನ್ನಟ್ಟಿದಾಗ ವೇಗವಾಗಿ ನಡೆಯಬೇಡಿ. ಓಡಲೂ ಬೇಡಿ.

* ನಿಂತಲ್ಲೇ ನಿಲ್ಲಿ :
ನಾಯಿಯು ನಿಮ್ಮ ಕಡೆಗೆ ಬಂದರೆ, ನೀವು ಹೆದರಿ ಓಡಬೇಡಿ. ಬದಲಿಗೆ ನಿಂತಲ್ಲೇ ಇರಿ. ನಾಯಿಯು ನಿಮ್ಮನ್ನು ಕಚ್ಚಲು ಬರುತ್ತಿದೆ ಎಂದು ಸರಿಯಾಗಿ ತಿಳಿಯದೆ, ಇತರರನ್ನು ಕೂಗುವುದನ್ನು ನಿಲ್ಲಿಸಿ. ಅಥವಾ ಶಬ್ದ ಮಾಡುವುದನ್ನು ತಪ್ಪಿಸಿ. ಹೆಚ್ಚು ಬೆನ್ನು ತೋರಬೇಡಿ. ನೀವು ಬೆನ್ನು ತಿರುಗಿಸಿದಷ್ಟೂ ಅವು ನಿಮ್ಮ ಮೇಲೆ ದಾಳಿ ಮಾಡುವ ಸಾಧ್ಯತೆ ಹೆಚ್ಚು.

* ಕಣ್ಣಿನ ಸಂಪರ್ಕ ಮಾಡಬೇಡಿ:
ನಮ್ಮನ್ನು ಹಿಂಬಾಲಿಸುವ ಯಾವುದೇ ಪ್ರಾಣಿಯೊಂದಿಗೆ ನೇರ ಕಣ್ಣಿನ ಸಂಪರ್ಕವನ್ನು ಇಟ್ಟುಕೊಳ್ಳಬಾರದು. ಏಕೆಂದರೆ ಕಣ್ಣಲ್ಲಿ ಕಣ್ಣಿಟ್ಟು ನೋಡಿದಾಗ ಅವು ನಿಮ್ಮಿಂದ ಬೆದರಿಕೆಗೆ ಒಳಗಾಗುತ್ತವೆ. ಆಗ ಹೆದರಿ ನಿಮ್ಮ ಮೇಲೆ ದಾಳಿ ಮಾಡಲು ಮುಂದಾಗುತ್ತವೆ. ಅವುಗಳನ್ನು ನೋಡಿದರೂ ನೋಡದಂತೆ ಇರುವುದು ಉತ್ತಮ.* ತಕ್ಷಣ

ಮರೆಯಲಾಗಿ:
ನಾಯಿಯು ನಿಮ್ಮ ಮೇಲೆ ದಾಳಿ ಮಾಡಲು ಬಂದಾಗ, ಹಿಂತಿರುಗಿ ನೋಡದೆ ನಿಧಾನವಾಗಿ ನಡೆದು. ಸಮೀಪದಲ್ಲಿರುವ ಯಾವುದೇ ಕಟ್ಟಡ ಅಥವಾ ಕಾರಿನ ಬಳಿ ಅವುಗಳ ಕಣ್ಣಿಗೆ ಕಾಣದಂತೆ ನಿಂತುಕೊಳ್ಳಿ. ಆದಷ್ಟು ಬೇಗ ಅವುಗಳ ಕಣ್ಣಿನಿಂದ ಮರೆಯಾಗಿ.

 

Leave A Reply

Your email address will not be published.