Ration Card: ರಾಜ್ಯದಲ್ಲಿ ಬರೋಬ್ಬರಿ 20 ಲಕ್ಷ ಬಿಪಿಎಲ್‌ ಕಾರ್ಡ್‌ ರದ್ದು: ಇನ್ನು ಮುಂದೆ ಬರಲಿದೆ ಕಠಿಣ ಕಾನೂನು

Ration Card: ಬಿಪಿಎಲ್‌ ಕಾರ್ಡ್, ಬಡತನ ರೇಖೆಗಿಂತ ಕೆಳಗಿರುವ ಬಡ ಕುಟುಂಬಗಳಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ವ್ಯವಸ್ಥೆಯನ್ನು ಜಾರಿ ಮಾಡಲಾಗಿದೆ. ಇದೇ ಬಿಪಿಎಲ್‌ ಕಾರ್ಡ್‌ಗೆ ಸರಕಾರದ ಇತರ ಯೋಜನೆಗಳಾದ ಉಚಿತ ಗ್ಯಾರಂಟಿ ಯೋಜನೆಗಳು, ಕೃಷಿ ಇಲಾಖೆಯ ರೈತರ ಯೋಜನೆಗಳು, ಆರೋಗ್ಯ ಯೋಜನೆ, ಶಿಕ್ಷಣಕ್ಕೆ ಸಂಬಧಪಟ್ಟ ಯೋಜನೆಗಳು ಸೇರಿದಂತೆ ಅನೇಕ ಯೋಜನೆಗಳಿಗೆ ರೇಷನ್‌ ಕಾರ್ಡ್‌ ಬಹಳ ಮುಖ್ಯ. ಆದರೆ ಬಡವರ ಪಾಲಿನ ಈ ಯೋಜನೆಗಳನ್ನು ಉಳ್ಳವರು ಬಳಸಿಕೊಂಡದ್ದೇ ಹೆಚ್ಚು. ನಕಲಿ ದಾಖಲೆಗಳನ್ನು ಕೊಟ್ಟು ಬರೋಬ್ಬರಿ 20 ಲಕ್ಷ ಮಂದಿ ಬಿಪಿಎಲ್‌ ಕಾರ್ಡ್‌ಗಳನ್ನು ಮಾಡಿಸಿಕೊಂಡಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಈ ಎಲ್ಲಾ ಕಾರ್ಡ್‌ಗಳನ್ನು ಸರ್ಕಾರ ಈಗ ರದ್ದು ಮಾಡಲು ಮುಂದಾಗಿದೆ.

 

ಕರ್ನಾಟಕ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ.80ರಷ್ಟು ನಾಗರೀಕರು ಬಿಪಿಎಲ್‌ ಕಾರ್ಡ್‌ ಹೊಂದಿದ್ದಾರೆ. ರಾಜ್ಯದ 4 ಕೋಟಿಗೂ ಹೆಚ್ಚು ಕುಟುಂಬಗಳು ಬಿಪಿಎಲ್‌ ಕಾರ್ಡ್‌ನಿಂದ ಪ್ರಯೋಜನ ಪಡೆಯುತ್ತಿವೆ. ಅನುಮಾನ ಮೂಡಿಸಿದ್ದೇ ಇಲ್ಲಿ. ಇಷ್ಟೊಂದು ಕುಟುಂಬಗಳು ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗೆ ಜೀವನ ಮಾಡುತ್ತಿವೆಯಾ ಎಂದು? ನಕಲಿ ದಾಖಲೆ ಕೊಟ್ಟು ಬಡವರ ಯೋಜನೆಗಳಿಗೆ ಕನ್ನ ಹಾಕಿದವರ ಹೆಡೆಮುರಿ ಕಟ್ಟಲು ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಮುಂದಾಯ್ತು. ಹೊಸ ಕಾನೂನನ್ನು ಜಾರಿಗೆ ತಂದಿತು.

ಕಳೆದ ವಿಧಾನ ಮಂಡಲ ಅಧಿವೇಶನದಲ್ಲಿ ಸಿಎಂ ಅಧಿಕಾರಿಗಳಿಗೆ ಬಿಪಿಎಲ್‌ ಪಡಿತರ ಕಾರ್ಡ್‌ಗಳನ್ನು ಪರಿಸೀಲಿಸಿ ಅನರ್ಹ ಕಾರ್ಡ್‌ಗಳನ್ನು ರದ್ದು ಮಾಡಿ. ಹಾಗೂ ಕಳೆದ 6 ತಿಂಗಳಿನಿಂದ ಯಾವ ಕುಟುಂಬಗಳು ರೇಷನ್‌ ಪಡೆದಿಲ್ಲವೋ ಅಂತಹ ಕುಟುಂಬಗಳ ಬಿಪಿಎಲ್‌ ರೇಷನ್‌ ಕಾರ್ಡ್‌ ಅನರ್ಹ ಗೊಳಿಸುವಂತೆ ಸಿಎಂ ಸೂಚನೆ ನೀಡಿದ್ದಾರೆ. ಕರ್ನಾಟಕದಲ್ಲಿ ಸುಮಾರು 1.29 ಕೋಟಿ ಮಂದಿ ಅರ್ಹ ಬಿಪಿಎಲ್‌ ಫಲಾನುಭವಿಗಳಿದ್ದಾರೆ. ಇನ್ನು ಉಳಿದಂತೆ ಅನರ್ಹರು ಈ ಯೋಜನೆಯ ಲಾಭವನ್ನು ಪಡೆದು ಕೊಳ್ಳುತ್ತಿದ್ದಾರೆ. ಇಷ್ಟು ಅಲ್ಲದೆ ಹೊಸ ಬಿಪಿಎಲ್‌ ಕಾರ್ಡಿಗಾಗಿ 2.95ಲಕ್ಷ ಜನರು ಅರ್ಜಿ ಸಲ್ಲಿಸಿದ್ದಾರೆ. ಹೊಸ ಅರ್ಜಿಗಳನ್ನು ನೀಡುವ ಮುನ್ನ ಪರಿಶೀಲನಾ ಕಾರ್ಯ ಕೈಗೊಳ್ಳಲಾಗುತ್ತಿದೆ.

ಈ ಮಧ್ಯೆ ಅನರ್ಹ ಎಂದು ಗೊತ್ತಾಗಿರುವ 20 ಲಕ್ಷ ಬಿಪಿಎಲ್‌ ಕಾರ್ಡ್‌ಗಳನ್ನು ಯಾವುದೇ ಮುಲಾಜಿಲ್ಲದೆ ರದ್ದು ಮಾಡಲು ಸರ್ಕಾರ ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಈ ಕಾರ್ಡ್‌ಗಳು ರದ್ದಾದಲ್ಲಿ ಪಡಿತರ ಸಾಮಗ್ರಿಗಳು ಮಾತ್ರವಲ್ಲದೇ ಗೃಹಲಕ್ಷ್ಮೀ, ಗೃಹಜ್ಯೋತಿ ಯೋಜನೆಗಳಿಗೂ ಬ್ರೇಕ್‌ ಬೀಳಲಿದೆ. ಯಾವುದೇ ಸರ್ಕಾರದ ಯೋಜನೆಗಳನ್ನು ಪಡೆಯುವಲ್ಲಿ ವಿಫಲರಾಗಲಿದ್ದಾರೆ. ಬಿಪಿಎಲ್‌ ಅನರ್ಹರ ಲಿಸ್ಟ್‌ನಲ್ಲಿ ನಿಮ್ಮ ಕಾರ್ಡ್ ರದ್ದು ಆಗಿದೆಯಾ ಎಂದು ನೋಡಲು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಅಧಿಕೃತ ವೆಬ್‌ಸೈಟ್‌ https://ahara.kar.nic.in/ ಗೆ ಭೇಟಿ ನೀಡಿ.

Leave A Reply

Your email address will not be published.