Chicken Rate: ಗಗನಕ್ಕೇರಿದ್ದ ಚಿಕನ್ ಬೆಲೆಯಲ್ಲಿ ಭಾರೀ ಇಳಿಕೆ !!

Chuken Rate: ಕೆಲವು ತಿಂಗಳಿಂದಲೂ ಗಗನಕ್ಕೇರಿದ್ದ ಚಿಕನ್ ಬೆಲೆಯಲ್ಲಿ ಭಾರಿ ಇಳಿಕೆ ಕಂಡಿದೆ. ಹೌದು, ಶ್ರಾವಣ ಮಾಸದ ಆರಂಭದಿಂದಾಗಿ ಚಿಕನ್ ಬೆಲೆಯಲ್ಲಿ(Chiken Rate) ತೀವ್ರ ಇಳಿಕೆ ಕಂಡುಬಂದಿದೆ.
ಹೌದು, ಕಳೆದ ಸೋಮವಾರದಿಂದ ಶ್ರಾವಣ ಮಾಸ(Shravana Masa) ಆರಂಭವಾಗಿದೆ. ಶ್ರಾವಣ ಮಾಸದ ಆರಂಭದೊಂದಿಗೆ ವ್ರತಗಳು ಪ್ರಾರಂಭವಾಗಿವೆ. ಹೀಗಾಗಿ, ಈ ತಿಂಗಳಲ್ಲಿ ಕೆಲವರು ಮನೆಯಲ್ಲಿಗೆ ಮಾಂಸ ತರುವುದನ್ನು ನಿಲ್ಲಿಸುತ್ತಾರೆ. ಈ ಹಿನ್ನೆಲೆಯಲ್ಲಿ ಕೋಳಿ ಮಾಂಸದ ಬೇಡಿಕೆ ತೀವ್ರವಾಗಿ ಕುಸಿದಿದ್ದು, ವ್ಯಾಪಾರಿಗಳ ಪ್ರಕಾರ, ಇದರಿಂದ ಚಿಕನ್ ಬೆಲೆಯಲ್ಲಿ ಇಳಿಕೆ ಕಾಣುತ್ತಿದೆ.
ಎಷ್ಟು ಇಳಿಕೆ?
ಪ್ರಸ್ತುತ ದಿನಮಾನದಲ್ಲಿ ಚಿಕನ್ ಬೆಲೆ (Chicken Price) ಭಾರಿ ಇಡಿಕೆಯಾಗಿದ್ದು, ಕೆಲವು ಕಡೆ ಸೋಮವಾರದಿಂದಲೇ ಕೋಳಿ ಮಾಂಸದ ಬೆಲೆ 180 ರೂಗೆ ಇಳಿದಿದೆ. ಆದರೆ ಕೆಲವು ಪ್ರದೇಶಗಳಲ್ಲಿ ಮಾತ್ರ ಒಂದು ಕೆಜಿ ಚಿಕನ್ ಬೆಲೆ ರೂ. 150 ಕ್ಕೆ ಮಾರಾಟ ಮಾಡಲಾಗುತ್ತಿದೆ. ಬೆಂಗಳೂರು (Bangalore) ಹಾಗೂ ಹಲವು ಕಡೆ ಹಲವು ಕಡೆ ಚಿಕನ್ 180-200 ರೂಗೆ ಚಿಕನ್ ಮಾರಾಟವಾಗುತ್ತಿದೆ. ಆದರೆ ಈ ಬೆಲೆ ಕೇವಲ ಸ್ವಲ್ಪ ದಿನಗಳು ಮಾತ್ರ ಅಂದರೆ ಇನ್ನ ಎರಡು ಮೂರು ದಿನಗಳಲ್ಲಿ ಚಿಕನ್ ಬೆಲೆ 180 ಕ್ಕೆ ಇಳಿಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನಲಾಗಿದೆ.
ಬೆಲೆ ಇಳಿಕೆಯಾಗಲು ಕಾರಣ ಏನು?
* ಶ್ರಾವಣ ಮಾಸದ ವ್ರತಗಳಿಂದಾಗಿ, ಜನರು ಮಾಂಸ ತಿನ್ನುವುದನ್ನು ತಪ್ಪಿಸುತ್ತಾರೆ. ಇದು ಕೋಳಿ ಮಾಂಸದ ಬೇಡಿಕೆಯನ್ನು ತೀವ್ರವಾಗಿ ಕುಗ್ಗಿಸುತ್ತದೆ.
* ಬೇಸಿಗೆ ಶ್ರಾವಣ ಮಾಸದಲ್ಲಿ, ಕೋಳಿ ಉತ್ಪಾದನೆ ಹೆಚ್ಚು ಇದ್ದು, ಆದರೆ ಬೇಡಿಕೆ ಕಡಿಮೆಯಾಗಿದೆ.
* ಕೆಲವೊಮ್ಮೆ, ಬೆಲೆ ಇಳಿಕೆಗೆ ಮಾರುಕಟ್ಟೆ ಪ್ರವೃತ್ತಿಗಳೂ ಕಾರಣವಾಗಬಹುದು. ತಾಜಾ ಕೋಳಿ ಮತ್ತು ಬೇಸಿಗೆ ಪಾಕವಿಧಾನಗಳು ಬೇಡಿಕೆಗೆ ತಾತ್ಕಾಲಿಕ ಇಳಿಕೆ ತರುತ್ತವೆ.