Beauty Tips: ಮಾಡೆಲ್‌ ಒಬ್ಬಳು ತನ್ನ ಮಲವನ್ನು ಈ ರೀತಿ ಬಳಸುತ್ತಾಳಂತೆ? ವಿಡಿಯೋ ವೈರಲ್

Share the Article

Beauty Tips: ಮುಖದ ಅಂದ ಹೆಚ್ಚಿಸಲು ಸಾಮಾನ್ಯವಾಗಿ ಉತ್ತಮ ಸೋಪು, ಕ್ರೀಮ್, ಫೇಸ್ ಪ್ಯಾಕ್ ಮುಂತಾದವುಗಳಿಗೆ ಅಡಿಕ್ಟ್ ಆಗೋದು ಇದೆ. ಆದ್ರೆ ಇಲ್ಲೊಬ್ಬಳು ಮಾಡೆಲ್ ನಿಮಗೆ ಮುಖದ ಹೊಳಪು ಹೆಚ್ಚಿಸಲು ಹೊಸ ಬ್ಯೂಟಿ ಟಿಪ್ಸ್ (Beauty Tips)  ಹೇಳಿದ್ದಾಳೆ. ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ. ಹೌದು, ಇಲ್ಲೊಬ್ಬಳು ಮಾಡೆಲ್‌ ಬ್ಯೂಟಿ ಐಟಂಗಳಿಗೆ ಗುಡ್ ಬೈ ಹೇಳಿ ತನ್ನ ತ್ವಚೆಯ ಅಂದವನ್ನು ಹೆಚ್ಚಿಸಲು ಮುಖಕ್ಕೆ ತನ್ನ ಮಲವನ್ನೇ ಹಚ್ಚುತ್ತಾಳಂತೆ.

ಮಾಹಿತಿ ಪ್ರಕಾರ, ವೃತ್ತಿಯಲ್ಲಿ ಮಾಡೆಲ್‌ ಆಗಿರುವ ಬ್ರೆಜಿಲ್‌ನ ಡೆಬೊರಾ ಪೀಕ್ಸೊಟೊ ಮುಖದ ತ್ವಚೆಯ ಅಂದವನ್ನು ಹೆಚ್ಚಿಸಲು ಈಕೆ ಮಲವನ್ನು ಮುಖಕ್ಕೆ ಹಚ್ಚಿಕೊಳ್ಳುತ್ತಾಳಂತೆ. ಈ ಕುರಿತ ವಿಡಿಯೋವನ್ನು ಆಕೆ ತನ್ನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ (deborapeixoto.ofc) ಶೇರ್ ಮಾಡಿದ್ದು, ವಿಡಿಯೋದಲ್ಲಿ ಆಕೆ ಫೇಸ್‌ ಪ್ಯಾಕ್‌ ತರಹ ಮುಖಕ್ಕೆ ಮಲವನ್ನು ಹಚ್ಚಿಕೊಳ್ಳುವ ದೃಶ್ಯವನ್ನು ಕಾಣಬಹುದು. ಆದ್ರೆ ಈ ಬಗ್ಗೆ ವೈದ್ಯರು ವಿರೋಧ ವ್ಯಕ್ತಪಡಿಸಿದ್ದಾರೆ.

ಲಂಡನ್‌ನ ಕ್ಯಾಡೋಗನ್‌ ಕ್ಲಿನಿಕ್‌ನ ಕನ್ಸಲ್ಟೆಂಟ್‌ ಡರ್ಮಟಾಲಜಿಸ್ಟ್‌ ಡಾ. ಸೋಫಿ ಮೊಮೆನ್‌  ಅವರು “ಇದು ಅತ್ಯಂತ ಕೆಟ್ಟದಾದ ಸ್ಕಿನ್‌ ಕೇರ್‌ ಆಗಿದ್ದು ಇದರಿಂದ ಮುಖಕ್ಕೆ ಯಾವುದೇ ರೀತಿಯ ಪ್ರಯೋಜನವೂ ಇಲ್ಲ. ಬದಲಾಗಿ   ಬ್ಯಾಕ್ಟೀರಿಯಾಗಳು ಮತ್ತು ವೈರಸ್‌ಗಳ ಪರಿಣಾಮ ಗಂಭೀರವಾದ ಆರೋಗ್ಯ ಸಮಸ್ಯೆ cಉಂಟಾಗುವ ಸಾಧ್ಯತೆ ಇದೆ ಎಂದಿದ್ದಾರೆ.

Leave A Reply