Uttar Pradesh: ಕೇಸ್ ಇತ್ಯರ್ಥಕ್ಕೆ ಲಂಚವಾಗಿ 5 ಕೆಜಿ ಆಲೂಗಡ್ಡೆ ಬೇಡಿಕೆಯಿಟ್ಟ ಇನ್‌ಸ್ಪೆಕ್ಟರ್‌ – ಆ ‘ಆಲೂಗಡ್ಡೆ’ ಹಿಂದೆ ಇದೆ ಬೇರೆಯೇ ಸ್ಟೋರಿ !!

Share the Article

Uttar Pradesh: ಲಂಚಕ್ಕಾಗಿ ಅಧಿಕಾರಿಗಳು ಹಣ ಬೇಡಿಕೆ ಇಡುವುದನ್ನು ನೋಡಿದ್ದೇವೆ. ಇದಕ್ಕೂ ಹೊರತಾಗಿ ಮನೆ, ಒಡವೆ, ಆಸ್ತಿಯನ್ನೂ ಕೇಳುವವರಿದ್ದಾರೆ. ಆದರೆ ಇಲ್ಲೊಬ್ಬ ಪೋಲೀಸ್ ಇನ್‌ಸ್ಪೆಕ್ಟರ್‌ 5 ಕೆ ಜಿ ಆಲೂಗಡ್ಡೆ ಬೇಡಿಕೆ ಇಟ್ಟು ತಗಲಾಕೊಂಡಿದ್ದಾನೆ. ಆದರೆ ಇದರ ಹಿಂದೆ ಬೇರೆಯೇ ಸ್ಟೋರಿ ಕೂಡ ಇದೆ ಅನ್ನೋದು ತಿಳಿದುಬಂದಿದೆ.

ಹೌದು, ಪ್ರಕರಣವೊಂದನ್ನು ಇತ್ಯರ್ಥಪಡಿಸಲು ಘಟನೆ ಉತ್ತರ ಪ್ರದೇಶದ (Uttar Pradesh) ಕನೌಜ್‌ನಲ್ಲಿ ಪೊಲೀಸ್ ಅಧಿಕಾರಿ ರಾಮ್ ಕೃಪಾಲ್ ಸಿಂಗ್ ಲಂಚವಾಗಿ 5 ಕೆಜಿ ಆಲುಗಡ್ಡೆಗೆ (Potatoes) ಬೇಡಿಕೆಯಿಟ್ಟಿದ್ದು, ಇದು ಬೆಳಕಿಗೆ ಬಂದಾಗ ಆತನನ್ನು ಅಮಾನತುಗೊಳಿಸಿರುವ ಘಟನೆ ನಡೆದಿದೆ.

ಅಂದಹಾಗೆ ಲಂಚ ಕೇಳಿರುವ ಆರೋಪದ ಆಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವೈರಲ್ ಆದ ನಂತರ ಘಟನೆ ಬೆಳಕಿಗೆ ಬಂದಿದೆ. ಲಂಚಕ್ಕಾಗಿ ‘ಆಲೂಗಡ್ಡೆ’ ಎಂಬ ಪದವನ್ನು ಕೋಡ್‌ ಆಗಿ ಬಳಸಲಾಗಿದೆ ಎಂಬುದು ತನಿಖೆಯಿಂದ ಗೊತ್ತಾಗಿದೆ. ಆದರೆ ಆಲೂಗಡ್ಡೆ ಏನನ್ನು ಸೂಚಿಸುವ ಕೋಡ್ ಎಂಬುದು ಇನ್ನು ತಿಳಿಯಬೇಕಿದೆ.

ವೈರಲ್ ಆಡಿಯೋದಲ್ಲಿ ಆರೋಪಿ ಪೋಲೀಸ್‌, ರೈತರೊಬ್ಬರಿಂದ 5 ಕೆಜಿ ಆಲೂಗಡ್ಡೆಗೆ ಬೇಡಿಕೆ ಇಡುತ್ತಾರೆ. ಈ ಬೇಡಿಕೆಯನ್ನು ಪೂರೈಸಲು ಕಷ್ಟ ಎಂದು ರೈತ ಹೇಳುತ್ತಾರೆ. 5 ಕೆಜಿ ಬದಲಿಗೆ 2 ಕೆಜಿ ನೀಡುತ್ತೇನೆಂದು ರೈತರ .. ಅದಕ್ಕೆ ಪೊಲೀಸ್‌ ಅಧಿಕಾರಿ ಕೋಪಗೊಂಡು, ಕೊನೆಗೆ 3 ಕೆಜಿಗೆ ಒಪ್ಪಂದ ಅಂತಿಮವಾಗುತ್ತದೆ.

Leave A Reply