Tungabhadra Reservoir: ಕೊಚ್ಚಿಕೊಂಡು ಹೋದ ತುಂಗಭದ್ರಾ ಜಲಾಶಯದ 19 ನೇ ಕ್ರಸ್ಟಗೇಟ್ : ಬೆಂಗಳೂರು, ಹೈದ್ರಾಬಾದ್, ಚೆನ್ನೈ ನಿಂದ ತಜ್ಞರ ತಂಡ
Tungabhadra Reservoir: ಈ ಬಾರೀ ಯಥ್ಥೇಚ್ಚವಾಗಿ ಮುಂಗಾರು ಮಳೆ ಆಗಿದೆ. ರಾಜ್ಯದ ಎಲ್ಲಾ ಅಣೆಕಟ್ಟುಗಳು ಬಹುತೇಕ ಭರ್ತಿಯಾಗಿದೆ. ಅದರಲ್ಲೂ ಉತ್ತರ ಕರ್ನಾಟಕದ ಜೀವನಾಡಿ ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಬಳಿ ಇರುವ ತುಂಗಾಭದ್ರಾ ಡ್ಯಾಂ ಭರ್ತಿಯಾಗಿತ್ತು. ಆದರೆ ಅದರ ಮೇಲೆ ಯಾರ ಕಣ್ಣು ಬಿತೋ ಏನೋ. ನಿನ್ನೆ ರಾತ್ರಿ ನೀರಿನ ಒತ್ತಡ ತಾಳಲಾರದೆ ತುಂಗಭದ್ರಾ ಜಲಾಶಯದ 19 ನೇ ಕ್ರಸ್ಟ್ ಗೇಟ್ ಚೈನ್ ಲಿಂಕ್ ಕಟ್ ಆಗಿದೆ. ಇದೀಗ 19 ಗೇಟ್ ಒಂದರಿಂದಲೇ ಸರಿಸುಮಾರು 35 ಸಾವಿರ ಕ್ಯೂಸೆಕ್ ನೀರು ಹರಿದು ಹೋಗುತ್ತಿದೆ. ಡ್ಯಾಂ ನಿಂದ ಹೊರಹೋಗುವ ನೀರಿನ ದೃಶ್ಯ ಭಯನಾಕವಾಗಿದೆ.
ಇದೀಗ 105 ಟಿಎಂಸಿಯಲ್ಲಿ 55 ರಿಂದ 65 ಟಿಎಂಸಿವರೆಗೂ ನೀರು ಖಾಲಿ ಮಾಡುವುದು ಅನಿವಾರ್ಯತೆ ಇದೆ. ಇದು ಖಾಲಿಯಾಗಲು ಹೆಚ್ಚು ಕಮ್ಮಿ ಒಂದುವಾರ ಬೇಕು. ಅಂದರೆ ನೀವೇ ಯೋಚಿಸಿ ಅದೆಷ್ಟು ಪ್ರಮಾಣದ ನೀರು ಸುಮ್ಮನೆ ಹರಿದು ಸಮುದ್ರ ಸೇರುತ್ತದೆ ಎಂದು. ಇದೇ ನೀರು ಮುಂದೆ ರೈತರ ಬೆಳೆಗಳಿಗೆ ನೀರುಣಿಸುತ್ತಿತ್ತು. 1633 ಅಡಿಯಲ್ಲಿ 20 ರಿಂದ 21 ಅಡಿಯಷ್ಟು ನೀರು ಖಾಲಿಯಾದ್ರೆ ಮಾತ್ರ ಗೇಟ್ ದುರಸ್ತಿ ಕಾರ್ಯ ಸಾಧ್ಯ. ಇದೀಗ ಎಲ್ಲಾ ಗೇಟ್ ಗಳಿಂದ ನೀರನ್ನು ಹೊರ ಬಿಡಲಾಗುತ್ತಿದೆ.
ಭಾರಿ ಪ್ರಮಾಣದ ನೀರನ್ನು ಹೊರಗೆ ಬಿಡಲಾಗುತ್ತಿದೆ. ಆದರೆ ಗೇಟ್ ಗಳ ಮುಂಭಾಗದ ಕೆಳ ಸೇತುವೆಯಲ್ಲಿ ಜನರ ಹುಚ್ಚಾಟ ಮಾಡುತ್ತಿದ್ದಾರೆ. ನೀರು ಹರಿಬಟ್ಟ ಹಿನ್ನೆಲೆ ನೀರಿನ ಹರಿವು ಹೆಚ್ಚಳವಾಗಿದ್ದರು ಇದನ್ನು ಲೆಕ್ಕಿಸದ ಕೆಲ ಯುವಕರು ಸೇತುವೆ ಮೇಲೆ ನಿಂತು ಬಾಲಿಶವಾಗಿ ವರ್ತಿಸುತ್ತಿದ್ದಾರೆ. ಕೆಳ ಸೇತುವೆ ಮುಳುಗಡೆಗೆ ಇನ್ನು ಕೇವಲ ಎರಡು ಅಡಿ ಮಾತ್ರ ಬಾಕಿ ಇದೆ. ಸೇತುವೆ ಬಳಿ ಕುಳಿತು ಜನರು ಸೆಲ್ಫಿ ತೆಗೆದುಕೋಮಡು ಬೇಜಾವ್ದಾರಿಯಿಂದ ಹುಚ್ಚಾಟವಾಡುತ್ತಿದ್ದಾರೆ. ಇದನ್ನು ಕಂಡ ಪೋಲೀಸರು ಜನರನ್ನು ಸೇತುವೆಯಿಂದ ಹೊರಗಡೆ ಕಳುಹಿಸಿದ್ದಾರೆ. 1 ಲಕ್ಷ ಕ್ಯುಸೆಕ್ ನೀರು ರಾತ್ರಿಯಿಂದ ಹೊರಬಿಡಲಾಗುತ್ತಿದೆ ಎಂದು ವರದಿಯಾಗಿದೆ.
ತುಂಗಭದ್ರಾ ಜಲಾಶಯದ 19 ನೇ ಕ್ರಸ್ಟ್ ಗೇಟ್ ಚೈನ್ ಲಿಂಕ್ ಕಟ್ ಆದ ಹಿನ್ನೆಲೆಯಲ್ಲಿ ಜಲಾಶಯಕ್ಕೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಭೇಟಿ ನಂತರ ಸಚಿವ ಶಿವರಾಜ್ ತಂಗಡಗಿ ಮಾತನಾಡಿ ಡ್ಯಾಂ ಗೆ ಬಂದು ವೀಕ್ಷಣೆ ಮಾಡಿದ್ದೇನೆ, ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ, ಸದ್ಯದ ಮಟ್ಟಿಗೆ 60 ರಿಂದ 65 ಟಿಎಂಸಿ ಗೂ ಹೆಚ್ಚು ನೀರು ಖಾಲಿ ಮಾಡಬೇಕಾಗುತ್ತದೆ. 20 ಪೀಟ್ ನೀರು ಖಾಲಿಯಾದ್ರೆ ಮಾತ್ರ ಸಮಸ್ಯೆ ಏನಾಗಿದೆ ಅಂತ ಗೊತ್ತಾಗಲಿದೆ. ಹೀಗಾಗಿ ಡ್ಯಾಂ ನಲ್ಲಿರೋ ನೀರನ್ನು ಖಾಲಿ ಮಾಡೋ ಅನಿವಾರ್ಯತೆ ಉಂಟಾಗಿದೆ ಎಂದು ಹೇಳಿದ್ದಾರೆ.
ಡ್ಯಾಂ ನಿರ್ಮಾಣ ಸಮಯದಲ್ಲಿನ ಡಿಸೈನ್ ತರಿಸಲಾಗುತ್ತಿದೆ. ನೀರಿನ ಪೋರ್ಸ್ ಹೆಚ್ಚಿರೋದರಿಂದ ಕೆಳಗಿಳಿದು ಕೆಲಸ ಮಾಡೋದು ಅಸಾಧ್ಯ. ಸದ್ಯ ಒಂದು ಲಕ್ಷ ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. 2.35 ಲಕ್ಷ ಕ್ಯೂಸೆಕ್ ನೀರು ಬಿಟ್ಟರು ಯಾರಿಗೂ ಯಾವುದೇ ತೊಂದರೆ ಆಗಲ್ಲಾ. ಆದರೆ 2.50 ಲಕ್ಷ ಕ್ಯೂಸೆಕ್ ದಾಟಿದ್ರೆ ತೊಂದರೆ ಆಗುವ ಸಾಧ್ಯತೆ ಇದೆ ಎಂದರು. ಹಾಗೂ ಘಟನೆ ಬಗ್ಗೆ ಸಿಎಂ ಮತ್ತು ಡಿಸಿಎಂ ಗೆ ಮಾಹಿತಿ ನೀಡಲಾಗುತ್ತಿದೆ. ಬೆಂಗಳೂರು, ಹೈದ್ರಾಬಾದ್, ಚೆನ್ನೈ ನಿಂದ ತಜ್ಞರ ತಂಡ ಬರಲಿದೆ. ನಾಳೆ ಮುಂಜಾನೆ ತಜ್ಞರ ತಂಡಗಳು ಡ್ಯಾಂ ಗೆ ಆಗಮಿಸಿ ಪರಿಶೀಲನೆ ನಡೆಸಲಿವೆ.