Elephant: ಕಾಡಿನಿಂದ ನಾಡಿಗೆ ಬಂದಿದ್ದ ಆನೆಗಳು ಮರಳಿ ಕಾಡಿಗೆ: 36 ಕಾಡಾನೆಗಳನ್ನು ಕಾಡಿಗೆ ಅಟ್ಟಿದ ಅರಣ್ಯ ಇಲಾಖೆ

Elephant: ಬರೋಬ್ಬರಿ 32 ಕಾಡಾನೆಗಳು ಅರಣ್ಯದಿಂದ ನಾಡಿನತ್ತ ನುಗ್ಗಿದ್ದವು. ಬಂದ ಕಾಡಾನೆಗಳು ಪಾಲಿಬೆಟ್ಟ, ಮಾಲ್ದಾರೆ, ಸಿದ್ದಾಪುರ, ಅಮ್ಮತ್ತಿ ಪ್ರದೇಶದಲ್ಲಿ ತಮ್ಮ ಅಟಾಟೋಪವನ್ನು ಮೆರೆಯುತ್ತಿದ್ದವು. ಅನೇಕ ದಿನಗಳಿಂದ ನಾಡಿಗೆ ನುಗ್ಗಿ ರೈತರ ಬೆಳೆಗಳನ್ನು ನಾಶ ಮಾಡುತ್ತಿದ್ದವು. ಎಲ್ಲೆಂದರಲ್ಲಿ ಕಾಫಿ ತೋಟಗಳಲ್ಲಿ ಓಡಾಡುತ್ತಿದ್ದವು. ಇದೀಗ ಕಾಡಾನೆ ಹಿಂಡನ್ನು ಅರಣ್ಯ ಇಲಾಖೆಯ ಚೆನ್ನಂಗಿ ಶಾಖಾ ಸಿಬ್ಬಂದಿಗಳು ಮರಳಿ ಮಾಲ್ದಾರೆ ಅರಣ್ಯಕ್ಕೆ ಓಡಿಸಿದ್ದಾರೆ.

 

ಅನೇಕ ದಿನಗಳಿಂದ ತಿತಿಮತಿ ಅರಣ್ಯ ವಲಯದ ಚೆನ್ನಾಂಗಿ ಶಾಖಾ ಪ್ರದೇಶದ ಕಾಫಿ ತೋಟಗಳಿಗೆ ನುಗ್ಗಿ 32 ಕಾಡಾನೆಗಳ ಹಿಂಡು ಅಲ್ಲೆ ಬೀಡುಬಿಟ್ಟಿತ್ತು. ಬಾಡಗಬಾಣಂಗಾಲ ಗ್ರಾಮದ ಬಾಣಂಗಾಲ ಎಸ್ಟೇಟ್ ನಿಂದ ಮಾರ್ಗೊಳ್ಳಿ ಎಸ್ಟೇಟ್ ಮುಖಾಂತರ ಅಲ್ಲಿಂದ 8 ಕೀ. ಮೀ ದೂರ ಇರುವ ಮಾಲ್ದಾರೆ ಅರಣ್ಯಕ್ಕೆ ಅಟ್ಟಲಾಗಿದೆ. ವಲಯ ಅರಣ್ಯಾಧಿಕಾರಿ ಗಂಗಾಧರ ಇವರ ನೇತೃತ್ವದಲ್ಲಿ ವಿರಾಜಪೇಟೆ ವಿಭಾಗದ ಡಿಸಿಎಫ್ ಜಗನ್ನಾಥ ಹಾಗೂ ಎಸಿಎಫ್ ಗೋಪಾಲ್ ನಿರ್ದೇಶನ ನೀಡಲಾಗಿತ್ತು.

ಇವರಿಗೆ ಉಪವಲಯ ಅರಣ್ಯ ಅಧಿಕಾರಿಗಳಾದ ಶಶಿ ಪಿ ಟಿ ಚೆನ್ನಂಗಿ ಶಾಖೆ, ದೇವರಾಜ್ ಡಿ ಆರ್ ಎಫ್ ಓ ಇಟಿಎಫ್ ಗಸ್ತು ಅರಣ್ಯ ಪಾಲಕ ರಾಜೇಶ್ ಹಾಗೂ ಆರ್ ಆರ್ ಟಿ ಸಿಬ್ಬಂದಿಗಳಾದ ಸಚಿನ್ ಶಂಕರ್ ಮುತ್ತ, ಸುಂದರ, ಭರತ, ಪ್ರದೀಪ್, ರಂಜೀತ್ ದನು, ದಿನು, ರೋಶನ್ ಇಟಿಎಫ್ ಸಿಬ್ಬಂದಿಗಳಾದ ಪೊನ್ನಣ್ಣ ಮತ್ತು ತಂಡದವರು ಸಾಥ್‌ ನೀಡಿದ್ದರು. ಅರಣ್ಯ ಇಲಾಖೆಯವರು ಯಶಸ್ವಿ ಕಾರ್ಯಾಚರಣೆ ಮಾಡಿದ ಕಾರಣ ಇಲ್ಲಿನ ಗ್ರಾಮಸ್ಥರು, ಕಾಫಿ ತೋಟದಲ್ಲಿ ಕೆಲಸ ಮಾಡುವವರು ಹಾಗೂ ಕೃಷಿಕರು ಜೀವ ಭಯದಿಂದ ಪಾರಾದಂತಾಗಿದೆ.

Leave A Reply

Your email address will not be published.