H D Kumaraswamy: ಸ್ಟಾಫ್ ಲಾಕ್ ಗೇಟ್‌ ಕೆಆರ್‌ಎಸ್‌ ಡ್ಯಾಂನಲ್ಲೂ ಇಲ್ಲ : ತುಂಗಭದ್ರಾದಂತೆ ಘಟನೆ ನಡೆಯೋ ಮುಂಚೆ ಎಚ್ಚೆತ್ತುಕೊಳ್ಳಿ – ಹೆಚ್‌ಡಿ ಕುಮಾರಸ್ವಾಮಿ

H D Kumaraswamy: ತುಂಗಭದ್ರಾ ಜಲಾಶಯದ 19 ನೇ ಕ್ರಸ್ಟ್ ಗೇಟ್ ಚೈನ್ ಲಿಂಕ್ ಕಟ್ ಆಗಿದೆ. ಇದೀಗ 19 ಗೇಟ್‌ ಒಂದರಿಂದಲೇ ಸರಿಸುಮಾರು 35 ಸಾವಿರ ಕ್ಯೂಸೆಕ್ ನೀರು ಹರಿದು ಹೋಗುತ್ತಿದ್ದು ಬಾರಿ ಅವಘಡ ಸಂಭವಿಸಿದೆ. ಇದೀಗ ಇದೇ ಘಟನೆ ಕೆಆರ್‌ಎಸ್ ಡ್ಯಾಂನಲ್ಲಿ (KRS Dam) ಆಗುವ ಮುಂಚೆ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ ಎಂದು ಸಂಸದ ಹೆಚ್‌ ಡಿ ಕುಮಾರ ಸ್ವಾಮಿ ಎಚ್ಚರಿಸಿದ್ದಾರೆ. ಯಾಕೆಂದರೆ ಕನ್ನಂಬಾಡಿ ಕಟ್ಟೆ ಅಣೆಕಟ್ಟಿಗೂ ಸ್ಟಾಫ್ ಲಾಕ್ ಗೇಟ್ ವ್ಯವಸ್ಥೆ ಇಲ್ಲ. ಕೆಆರ್‌ಎಸ್ ಡ್ಯಾಂ ಕಟ್ಟುವಾಗ ಈ ವ್ಯವಸ್ಥೆ ಹಾಕುವ ಸ್ಟಾಫ್ ಇಲ್ಲದ ಕಾರಣ ಆ ಕಾಲದಲ್ಲಿ ಇದನ್ನು ಹಾಕಿಲ್ಲ. ಮುಂಜಾಗೃತ ಕ್ರಮವಾಗಿ ಕೆಆರ್‌ಎಸ್‌ಗೂ ಸ್ಟಾಫ್ ಲಾಕ್ ಸಿಸ್ಟಂ ಅಳವಡಿಸಬೇಕು ಎಂದು ಹೆಚ್‌.ಡಿ ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ.

 

ತುಂಗಭದ್ರಾ ಡ್ಯಾಂ (Tungabhadra Dam) ಕ್ರಸ್ಟ್‌ ಗೇಟ್‌ 19ರ ಚೈನ್‌ಲಿಂಕ್‌ ತುಂಡಾದ ವಿಷಯದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಮಂಡ್ಯದ ಪಾಂಡವಪುರದ ಸೀತಾಪುರದಲ್ಲಿ ಉತ್ತರ ನೀಡಿದರು. ತುಂಗಭದ್ರಾ ಜಲಾಶಯದಲ್ಲಿ ನಡೆದ ಘಟನೆ ಅತಿ ದೊಡ್ಡ ಅನಾಹುತ. ಈ ಘಟನೆಯಿಂದ ಜಲಾಶಯದ 60 ಟಿಎಂಸಿ ನೀರು ಖಾಲಿಯಾಗುತ್ತೆ. ಅಲ್ಲಿನ ರೈತರ ಹಾಗೂ ನಾಗರೀಕರ ಪಾಲಿನ ನೀರು ಸುಮ್ಮನೆ ಪೋಲಾಗುವಂತೆ ಆಯ್ತು. ಈ ಜಲಾಶಯವನ್ನು 70 ವರ್ಷಗಳ ಹಿಂದೆ ಕಟ್ಟಲಾಗಿದೆ. ಈ ಹಿಂದೆ ಜಲಾಶದಲ್ಲಿ ಕೆಲವು ಸಮಸ್ಯೆಗಳು ಕಾಣಿಸಿಕೊಂಡಿತ್ತ. ನಾರಾಯಣಪುರ, ಆಲಮಟ್ಟಿ ಡ್ಯಾಂನಲ್ಲಿ ಸ್ಟಾಫ್ ಲಾಕ್ ಗೇಟ್ ಅಳವಡಿಸಲಾಗಿದೆ. ತುಂಗಭದ್ರಾ ಡ್ಯಾಂನಲ್ಲಿ ಸ್ಟಾಫ್ ಗೇಟ್ ವ್ಯವಸ್ಥೆ ಮಾಡದ ಕಾರಣ ಈಗ ನೀರು ನಿಲ್ಲಿಸಲು ಆಗಲಿಲ್ಲ ಎಂದು ಸಂಸದರು ಹೇಳಿದರು.

ತುಂಗಭದ್ರಾ ಜಲಾಶಯದಲ್ಲಿ ನಡೆದ ಈ ದುರಂತದ ಬಗ್ಗೆ ಸರ್ಕಾರವನ್ನು ದೂರಲು ಆಗಲ್ಲ. ಯಾಕೆಂದರೆ ಡ್ಯಾಂ ನೋಡಿಕೊಳ್ಳಲು ಟೆಕ್ನಿಕಲ್ ಕಮಿಟಿ ಇರುತ್ತದೆ. ಸಮಸ್ಯೆಗೆಳನ್ನ ಪರಿಶೀಲನೆ ಮಾಡುವುದು ಆ ಕಮಿಟಿ ಕೆಲಸ. ಅವರ ಕೆಲಸವನ್ನು ಸರಿಯಾಗಿ ಮಾಡದೇ ಇದ್ದರೆ ಇಂತಹ ಅನಾಹುತಗಳು ಸಂಭವಿಸುತ್ತವೆ. ಇದನ್ನು ದುರಸ್ತಿ ಮಾಡಬೇಕಾದರೆ ಟೆಕ್ನಿಕಲ್‌ನಲ್ಲಿ ಪರಿಣತಿ ಇರುವವರ ಜೊತೆ ಚರ್ಚೆ ಮಾಡಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಮಾಹಿತಿ ನೀಡಿದರು. ಈ ಅನಾಹುತದಿಂದ ರೈತರಿಗೆ ತೊಂದರೆಯಾಗಿದೆ. ಟಿಬಿ ಡ್ಯಾಂ ಬೋರ್ಡ್ ತಾಂತ್ರಿಕ ವಿಚಾರದಲ್ಲಿ ಸರಿಯಾದ ವರದಿ ಕೊಟ್ಟಿಲ್ಲ. ಕಾರಣಕ್ಕೆ ಇಂಥ ಅನಾಹುತ ಆಗಿದೆ. ಇದನ್ನು ಆದಷ್ಟು ಬೇಗ ಸರಿ ಪಡಿಸಿಕೊಳ್ಳಬೇಕಿದೆ. ಹಾಗೆ KRS Dam ವಿಷಯದಲ್ಲಿ ಆದಷ್ಟು ಬೇಗ ಎಚ್ಚರಿಕೆ ವಹಿಸಿದರೆ ಒಳ್ಳೆದು ಎಂದು ಹೆಚ್‌ ಡಿ ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

Leave A Reply

Your email address will not be published.