Olympics Athletes: ಒಲಂಪಿಕ್ಸ್‌ ನಲ್ಲಿ ಪುರುಷ ಅಥ್ಲೀಟ್ಸ್ ಬಹಳ ಚಿಕ್ಕ ಚಡ್ಡಿ ಧರಿಸೋಕೆ ಇದೇ ಕಾರಣವಂತೆ?!

Olympics Athletes: ಒಲಂಪಿಕ್ಸ್ ಆಟಗಳ ಹಲವು ವಿಚಾರ, ನಿಯಮದ ಬಗ್ಗೆ ನಮಗೆ ಮಾಹಿತಿ ಇರುವುದಿಲ್ಲ. ಅವರ ಉಡುಗೆ, ಆಹಾರ ಪದ್ಧತಿ ಮುಂತಾದ ಬಗ್ಗೆ ಕೆಲವು ಗೊಂದಲ ಇರುತ್ತದೆ. ಅಂತೆಯೇ ಒಲಂಪಿಕ್ಸ್‌ನಲ್ಲಿ ಪುರುಷ ಈಜುಗಾರರು (Olympics Athletes)  ಅತ್ಯಂತ ಚಿಕ್ಕ ಚಡ್ಡಿ ಧರಿಸೋದು ಯಾಕೆ ಎಂಬ ಪ್ರಶ್ನೆಯೊಂದು ನಿಮ್ಮಲ್ಲಿದ್ದರೆ ಅದಕ್ಕೆ ಇಲ್ಲಿದೆ ಉತ್ತರ.

 

ಹೌದು, ಪುರುಷ ಈಜುಪಟುಗಳು ಯಾಕಿಷ್ಟು ಚಿಕ್ಕ ಚಿಕ್ಕ ಚಡ್ಡಿಗಳನ್ನು ಧರಿಸುತ್ತಾರೆ ಎಂಬ ಪ್ರಶ್ನೆಗೆ ಮಾಜಿ ಅಥ್ಲೀಟ್‌ ಉತ್ತರ ನೀಡಿದ್ದಾರೆ. ಈ ಕುರಿತು ಟಾಮ್‌ ದಾಲೈ ಉತ್ತರಿಸಿದ್ದು , ಎಲ್ಲದರ ಹಿಂದೆಯೂ ಪ್ರಾಯೋಗಿಕ ಕಾರಣಗಳಿರುತ್ತವೆ ಎಂದಿದ್ದಾರೆ.

2016ರಲ್ಲಿ ನೀಡಿದ ಸಂದರ್ಶನಲ್ಲಿ ಟಾಮ್ ದಾಲೈ ಮಿನಿ ಉಡುಪು ಬಗ್ಗೆ ಮಾತನಾಡಿದ್ದು, ಸ್ವಿಮ್ಮರ್‌ಗಳು ಅತಿ ಚಿಕ್ಕ ಬಟ್ಟೆಗಳನ್ನೇ ಧರಿಸಬೇಕು. ಎಲ್ಲವೂ ಸೀಮಿತ ಸ್ಥಳದಲ್ಲಿಯೇ ಫಿಟ್ ಆಗಿರಬೇಕು. ಹಾಗಾಗಿ ಮಿನಿ ಟ್ರಂಕ್ ಅಥವಾ ಮಿನಿ ಬ್ರೀಫ್‌ ಧರಿಸಲು ಸಲಹೆ ನೀಡಲಾಗುತ್ತದೆ.

ಒಂದು ವೇಳೆ ಸಡಿಲವಾದ ಇನ್ನರ್ ವಿಯರ್ ಧರಿಸಿದ್ರೆ ಮೇಲಿನಿಂದ ಜಿಗಿದು ದೇಹ ಸ್ಪಿನ್ ಆಗುತ್ತಿರುವಾಗ ಗುಪ್ತಾಂಗ ಹೊರ ಬರುವ ಸಾಧ್ಯತೆಗಳೇ ಹೆಚ್ಚಿರುತ್ತವೆ. ಇನ್ನು ಎತ್ತರದ ಸ್ಥಾನದಿಂದ ನೀರಿಗೆ ಧುಮುಕಿದಾಗ ಸಡಿಲವಾದ ಟ್ರಂಕ್ ಆಗಿದ್ರೆ ಕಳಚುವ ಸಾಧ್ಯತೆಗಳಿರುತ್ತವೆ. ಅದಕ್ಕಾಗಿ  ಚಿಕ್ಕ ಮತ್ತು ಬಿಗಿಯಾದ ಚಡ್ಡಿಗಳನ್ನು ಧರಿಸಲಾಗುತ್ತದೆ ಎಂದು ಟಾಮ್ ದಲೈ ವಿವರಿಸಿದ್ದಾರೆ.

Leave A Reply

Your email address will not be published.