Murder News: ಸಣ್ಣ ಸುಳಿವಿನಿಂದ ವೈದ್ಯೆಯ ಅತ್ಯಾಚಾರಗೈದು ಕೊಲೆ ಮಾಡಿರುವ ಆರೋಪಿಯ ಬಂಧನ!

Rape and Murder Case: ತಪ್ಪು ಮಾಡುವವನು ಎಷ್ಟೇ ಚಾಲಾಕಿ ಆಗಿದ್ದರು ಒಂದಲ್ಲ ಒಂದು ಸುಳಿವು ಬಿಟ್ಟು ಹೋಗಿರುತ್ತಾನೆ ಎಂಬುದನ್ನು ಕೇಳಿದ್ದೇವೆ. ಅಂತೆಯೇ ಮಹಿಳಾ ಸ್ನಾತಕೋತ್ತರ ತರಬೇತಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ (Doctor Rape and Murder Case) ಆರೋಪಿ ಸಂಜಯ್ ರಾಯ್‌ನನ್ನು ಬ್ಲೂಟೂತ್ ಹೆಡ್‌ಫೋನ್‌ ಆಧಾರದ ಮೇಲೆ ಕೆಲವೇ ಗಂಟೆಗಳಲ್ಲಿ ರಾತ್ರೋರಾತ್ರಿ ಪೊಲೀಸರು ಬಂಧಿಸಿದ್ದಾರೆ.

 

ಹೌದು, ಕೋಲ್ಕತ್ತಾದಲ್ಲಿ ನಡೆದ ಮಹಿಳಾ ಸ್ನಾತಕೋತ್ತರ ತರಬೇತಿ ವೈದ್ಯೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಸಂಜಯ್ ರಾಯ್‌ ಎಂಬ ಆರೋಪಿ ತನ್ನ ಬ್ಲೂಟೂತ್‌ಅನ್ನು ಕೃತ್ಯ ಎಸಗಿದ ಸ್ಥಳದಲ್ಲೇ ಬಿಟ್ಟು ಹೋಗಿದ್ದರಿಂದ ಆತ ಪೋಲೀಸರ ಬಲೆಗೆ ಸಿಕ್ಕಿಕೊಂಡಿದ್ದಾನೆ.

ಶುಕ್ರವಾರ ಬೆಳಿಗ್ಗೆ, ಕೋಲ್ಕತ್ತಾದ ಸರ್ಕಾರಿ ಆರ್‌ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಮಹಿಳಾ ಸ್ನಾತಕೋತ್ತರ ತರಬೇತಿ (ಪಿಜಿಟಿ) ಎದೆಯ ಔಷಧ ವಿಭಾಗದಲ್ಲಿ ದ್ವಿತೀಯ ವರ್ಷದ ವಿದ್ಯಾರ್ಥಿನಿಯಾಗಿದ್ದ ಯುವ ವೈದ್ಯೆಯ ಮೃತದೇಹವು ರಕ್ತದ ಕಲೆಗಳ ಸಹಿತ ಬಿದ್ದಿರುವುದು ಪತ್ತೆಯಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಮರಣೋತ್ತರ ಪರೀಕ್ಷೆ ನಡೆಸಿದಾಗ ಮಹಿಳಾ ವೈದ್ಯೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ವರದಿಯಲ್ಲಿ ಬಹಿರಂಗವಾಗಿದೆ.

ನಂತರ ಪೊಲೀಸರು ಆಸ್ಪತ್ರೆಯಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಸ್ಕ್ಯಾನ್ ಮಾಡಲು ಪ್ರಾರಂಭಿಸಿದ್ದು, ಇದರಲ್ಲಿ ಸೆಮಿನಾರ್ ಹಾಲ್ ಬಳಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಸಂಜಯ್ ರಾಯ್ ನನ್ನು ವಿಚಾರಣೆಗಾಗಿ ಆಸ್ಪತ್ರೆಗೆ ಕರೆದಿದ್ದಾರೆ. ಹೀಗೆ ಪರಿಶೀಲನೆ ವೇಳೆ ಸಿಕ್ಕ ಬ್ಲೂಟೂತ್‌ ಹೆಡ್‌ಫೋನ್‌ ಅನ್ನು ಶಂಕಿತರ ಮೊಬೈಲ್ ಫೋನ್‌ಗಳೊಂದಿಗೆ ಲಿಂಕ್ ಮಾಡಲು ಪ್ರಯತ್ನಿಸಿದಾಗ ಆರೋಪಿ ಸಂಜಯ್ ರಾಯ್‌ನ ಮೊಬೈಲ್‌ ಫೋನ್‌ಗೆ ಕನೆಕ್ಟ್ ಆಗಿದೆ. ಇದನ್ನೇ ಸಾಕ್ಷಿಯನ್ನಾಗಿ ಪರಿಗಣಿಸಿದ ಪೊಲೀಸರು ಆತನನ್ನು ಅಲ್ಲೇ ವಶಕ್ಕೆ ಪಡೆಸಿದ್ದಾರೆ.

Leave A Reply

Your email address will not be published.