Meat Row: ಬೆಂಗಳೂರಿಗೆ ರಾಜಸ್ಥಾನದಿಂದ ತರಿಸಿದ್ದು ನಾಯಿ ಮಾಂಸ ನಾ? ಇಲ್ಲಿದೆ ಹೈದರಾಬಾದ್ ಲ್ಯಾಬ್ ವರದಿ

Meat Row: ರಾಜಸ್ಥಾನದಿಂದ ಅಬ್ದುಲ್ ರಜಾಕ್ ಎಂಬ ಮಾಂಸ ವ್ಯಾಪಾರಿ ಜುಲೈ 26ರಂದು ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ 86 ಬಾಕ್ಸ್‌ಗಳಷ್ಟು ತರಿಸಿದ ಮಾಂಸದಲ್ಲಿ ನಾಯಿ ಮಾಂಸವೂ ಮಿಶ್ರಣವಾಗಿರುತ್ತದೆ ಎಂದು ಪುನೀತ್ ಕೆರೆಹಳ್ಳಿ ಸೇರಿ ಹಲವರು ಆರೋಪಿಸಿದ್ದರು. ಹಾಗಾಗಿ ಲ್ಯಾಬ್ ರಿಪೋರ್ಟ್ ನಡೆಸಿದಾಗ ಇದು ಕುರಿ ಮಾಂಸ (Meat Row) ಎಂದು ಸಾಬೀತಾಗಿತ್ತು. ಇದರ ಬೆನ್ನಲ್ಲೇ ಇದೀಗ ಹೈದರಾಬಾದ್ ಲ್ಯಾಬ್ ವರದಿ ಕೂಡ ಬಂದಿದ್ದು, ಬಾಕ್ಸ್‌ನಲ್ಲಿದ್ದಿದ್ದು ಕುರಿ ಮಾಂಸವೇ ಎಂದು ಸ್ಪಷ್ಟಪಡಿಸಿದೆ.

ಹೌದು, ರಾಜಸ್ಥಾನದಿಂದ ತರಿಸಿದ್ದು ನಾಯಿ ಮಾಂಸ ನಾ? ಕುರಿ ಮಾಂಸ ನಾ? ಎಂಬ ಗೊಂದಲ ಇದ್ದ ಕಾರಣ ಬಾಕ್ಸ್‌ನಲ್ಲಿದ್ದ ಮಾಂಸದ ಸ್ಯಾಂಪಲ್‌ಅನ್ನು ಹೈದರಾಬಾದ್ ಲ್ಯಾಬ್‌ಗೆ ಕಳುಹಿಸಲಾಗಿತ್ತು. ಈಗ ಲ್ಯಾಬ್ ವರದಿ ಬಂದಿದ್ದು, ಅದು ಕುರಿ ಮಾಂಸವೇ ಎಂಬುದು ದೃಢವಾಗಿದೆ ಎಂದು ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆ ತಿಳಿಸಿದ್ದು, ಇದೀಗ ಈ ಆರೋಪಕ್ಕೆ ತೆರೆ ಬಿದ್ದಿದೆ.
ಮುಖ್ಯವಾಗಿ ಹೈದರಾಬಾದ್‌ನ ICAR ನ್ಯಾಷನಲ್ ಮೀಟ್ ರಿಸರ್ಚ್ ಇನ್ಸ್ಟಿಟ್ಯೂಟ್‌ನಲ್ಲಿ ಪರೀಕ್ಷೆ ಮಾಡಿದ್ದು, ಅದರಲ್ಲಿ S Ovis Aries ಎಂದು ಲ್ಯಾಬ್ ವರದಿಯಲ್ಲಿ ಬಂದಿದೆ. ಹೀಗಾಗಿ ಇದು ಕುರಿ ಮಾಂಸ ಎಂದು ಇಲಾಖೆ ಆಯುಕ್ತ ಶ್ರೀನಿವಾಸ್ ಅಧಿಕೃತವಾಗಿ ಹೇಳಿಕೆ ನೀಡಿದ್ದಾರೆ.