Intresting Fact: ಸಾವಿರವನ್ನು ಸೂಚಿಸಲು ಇಂಗ್ಲೀಷಿನ ‘K’ ಬಳಸೋದ್ಯಾಕೆ ಗೊತ್ತಾ? ಇಲ್ಲಿದೆ ಇಂಟ್ರೆಸ್ಟಿಂಗ್ ಸ್ಟೋರಿ

Intresting Fact: ಸಾವಿರ ರೂ ಅನ್ನು ಸೂಚಿಸಲು ಇಂದು ನಾವು ಇಂಗ್ಲೀಷಿನ K ಅಕ್ಷರವನ್ನು ಬಳಸುತ್ತೇವೆ. ಇದು ಲೇಟೇಸ್ಟ್ ಆಗಿ ಬಂದಂತಹ ಬಳಕೆ. ಹಾಗಿದ್ರೆ ಯಾಕೆ ನಾವು ಈ ಸಂಕೇತವನ್ನು ಬಳಸುತ್ತೇವೆ ಗೊತ್ತಾ? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಮಾಹಿತಿ

 

ಮಿಲಿಯನ್‌(Million) ಅನ್ನು ಸೂಚಿಸುವಾಗ ಇಂಗ್ಲಿಷಿನ ಅದರ ಮೊದಲ ಅಕ್ಷರ M ಅನ್ನು ಬಳಸುತ್ತೇವೆ. ಅಂತೆಯೇ B ಅನ್ನು ಬಿಲಿಯನ್‌(Billion) ಗೆ ಬಳಸಲಾಗುತ್ತದೆ. ಹಾಗೆಯೇ 1000 ಸಂಖ್ಯೆಗೆ ತವ್ಸೆಂಡ್(Thousand) ನ ಮೊದಲ ಅಕ್ಷರ T ಅನ್ನು ಬಳಸಬೇಕು ಅಲ್ಲವೇ? ಆದರೆ ನಾವು ಅದರ ಬದಲಿಗೆ K ಬಳಸುತ್ತೇವೆ.

ನಾವು ಮಾತನಾಡುವ, ಬಳಸುವ, ಇಟ್ಟುಕೊಂಡಿರುವ ಅಥವಾ ನಮ್ಮ ನಮ್ಮ ಊರುಗಳ ಹೆಚ್ಚಿನ ಹೆಸರಿನ ಮೂಲ ಹುಡುಕುವಾಗ ಅದೆಲ್ಲವೂ ಗ್ರೀಕ್(Greek) ಭಾಷೆಯದ್ದಾಗಿರುತ್ತದೆ. ಇತಿಹಾಸ, ಸಾಹಿತ್ಯ ಓದುವವರಿಗೆ ಇದುತಿಳಿದಿರುತ್ತದೆ. ಅಂತೆಯೇ ಈ K ಗೂ ಕೂಡ ಗ್ರೀಕ್ ಭಾಷೆಯ ಲಿಂಕ್ ಇದೆ. ಗ್ರೀಕ್ ಭಾಷೆಯಲ್ಲಿ ‘ಚಿಲಿಯೊಯ್’ ಎಂದರೆ ಸಾವಿರ. ಗ್ರೀಕ್ ಪದ ಚಿಲಿಯೊಯ್ ಅನ್ನು ಫ್ರೆಂಚ್ ಕಿಲೋ ಎಂದು ಸಂಕ್ಷಿಪ್ತಗೊಳಿಸಲಾಗಿದೆ. ಅದರ ನಂತರ, ಕಿಲೋಮೀಟರ್, ಕಿಲೋಗ್ರಾಂ ಇತ್ಯಾದಿಗಳನ್ನು ಅಂದಾಜಿಸಲಾಗಿದೆ.

ಆ ‘ಕಿಲೋ’ಗೆ ‘K’ ಚಿಹ್ನೆಯನ್ನು ನೀಡಲಾಗಿದೆ. ‘M’ ಅಕ್ಷರವು ಮಿಲಿಯನ್ ಮತ್ತು ‘T’ ಎಂದರೆ ಟ್ರಿಲಿಯನ್, ಆದರೆ ‘B’ ಎಂದರೆ ಬಿಲಿಯನ್. ಆದ್ದರಿಂದ ನಾವು ಸಾವಿರಕ್ಕೆ ‘T’ ಅಕ್ಷರವನ್ನು ಬಳಸುವುದಿಲ್ಲ. ʼKʼ ಮಾತ್ರ ಬಳಸಲಾಗಿದೆ.

1 Comment
  1. nfbxdtlhwy says

    Muchas gracias. ?Como puedo iniciar sesion?

Leave A Reply

Your email address will not be published.