Kodi Mutt Shri: ಶ್ರಾವಣ ಮಾಸದ ಬಗ್ಗೆ ಭಯಾನಕ ಭವಿಷ್ಯ ನುಡಿದ ಕೋಡಿ ಶ್ರೀ !!

Share the Article

Kodi Mutt Shri: ಕೋಡಿಮಠ ಸ್ವಾಮಿಜಿಗಳ ಭವಿಷ್ಯಕ್ಕೆ ತುಂಬಾ ಮಹತ್ವವಿದೆ. ಅವರ ಎಲ್ಲಾ ಭವಿಷ್ಯಗಳು ನಿಜವಾಗಿವೆ. ರಾಜಕೀಯವಾಗಿ, ಜಾಗತಿಕವಾಗಿ, ರಾಷ್ಟ್ರದ ವಿಚಾರವಾಗಿ ಹಾಗೂ ಮಳೆ, ಬೆಳೆ, ಪ್ರವಾಹಗಳ ಕುರಿತಾಗಿಯೂ ಅವರು ಭವಿಷ್ಯ ನುಡಿದಿದ್ದು ಅವೆಲ್ಲವೂ ಸಂಭವಿಸಿವೆ, ಸಂಭವಿಸುತ್ತಿವೆ. ಅಂತೆಯೇ ಇದೀಗ ಶ್ರೀಗಳು(Kodi Mutt Shri) ಶ್ರಾವಮ ಮಾಸದ ಬಗ್ಗೆ ಭಯಾನಕ ಭವಿಷ್ಯ ನುಡಿದಿದ್ದಾರೆ.

ಹೌದು, ಚಿಕ್ಕಬಳ್ಳಾಪುರದಲ್ಲಿ(Chikkaballapura) ಮಾತನಾಡಿದ ಕೋಡಿ ಮಠದ ಶ್ರೀಗಳು, ಶ್ರಾವಣ ಮಾಸದಲ್ಲಿ ದೇಶದಲ್ಲಿ ಅವಘಡಗಳು ಸಂಭವಿಸಲಿವೆ ಎಂದು ಆಘಾತಕಾರಿ ಭವಿಷ್ಯ ನುಡಿದಿದ್ದು ದೇಶದಲ್ಲಿ ಜಲಕಂಟಕ, ಅಗ್ನಿ ಕಂಟಕ, ವಾಯು ಕಂಟಕಗಳು ಹೆಚ್ಚಾಗಲಿವೆ. ಈ ಕುರಿತು ಎಚ್ಚರಿಕೆಯಿಂದ ಇರಬೇಕೆಂದು ಹೇಳಿದ್ದಾರೆ. ಇದು ಶ್ರಾವಣ ಮಾಸ, ಹಬ್ಬದ ಋತು ಅಗಿದ್ದು, ಎಚ್ಚರಿಕೆಯಿಂದ ಇರಬೇಕು. ಈ ಮಾಸದಲ್ಲಿ ಅವಘಡಗಳು ಸಂಭವಿಸಲಿದೆ ಎಂದು ಭಯಾನಕ ಭವಿಷ್ಯ ನುಡಿದಿದ್ದಾರೆ.

ಅಷ್ಟೇ ಅಲ್ಲದೆ ಈ ಮಾಸದಲ್ಲಿ ಗುರುಗಳು ಶಿಷ್ಯರಾಗುತ್ತಾರೆ, ಶಿಷ್ಯರು ಗುರುಗಳಾಗುತ್ತಾರೆ. ಹೆಣ್ಣುಮಕ್ಕಳ ಪ್ರಾಬಲ್ಯ ಹೆಚ್ಚಾಗಲಿದೆ. ರಾಜ್ಯದಲ್ಲಿ ಅತಿವೃಷ್ಟಿ ಆಗುವ ಸಾಧ್ಯತೆ ಹೆಚ್ಚಾಗಿ ಕಾಣುತ್ತಿದೆ. ಕ್ರೋಧಿನಾಮ ಸಂವತ್ಸರ ಇದಾಗಿರುವ ಕಾರಣ ದೇಶದಲ್ಲಿ ಜಲ, ಅಗ್ನಿ ಹಾಗೂ ವಾಯು ಕಂಟಕಗಳ ಸಂಖ್ಯೆ ಹೆಚ್ಚಾಗಹುದು ಎಂದು ಹೇಳಿದ್ದಾರೆ.

Leave A Reply

Your email address will not be published.