Holalkere: ಹಿಂದೂ ಧರ್ಮ ಎಂಬುದು ಅನೈತಿಕ, ಅನಾಚಾರಗಳಿಂದ ಕೂಡಿರುವುದು – ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳಿಂದ ವಿವಾದಾತ್ಮಕ ಹೇಳಿಕೆ

Holalkere: ಹಿಂದೂ(Hindu) ಎನ್ನುವುದು ಅನೈತಿಕ ಅನಾಚಾರಗಳಿಂದ ಕೂಡಿದೆ. ಆದರೆ ಲಿಂಗಾಯತ(Lingayata) ಧರ್ಮ ಹಾಗಲ್ಲ. ಹಿಂದೂ ಧರ್ಮದಲ್ಲಿರುವ ವೇದ ಪುರಾಣಗಳು, ಶಾಸ್ತ್ರಗಳು, ಲಿಂಗಾಯತ ಧರ್ಮದ ಮೂಲ ಅಲ್ಲ. ಹಾಗಾಗಿ ಲಿಂಗಾಯತ ಧರ್ಮ ಹಿಂದೂ ಧರ್ಮದ ಭಾಗವಲ್ಲ ಎಂದು ಸಾಣೇಹಳ್ಳಿ ತರಳಬಾಳು ಮಠದ ಡಾ ಪಂಡಿತಾರಾಧ್ಯ ಶಿವಾಚರ್ಯ ಸ್ವಾಮೀಜಿ(Panditaradya Shivacharya Swamiji) ಹೇಳಿಕೆ ನೀಡಿ ವಿವಾದದ ಕಿಡಿ ಹೊತ್ತಿಸಿದ್ದಾರೆ.

ಹೌದು, ಹೊಳಲ್ಕೆರೆಯ(Holalkere) ಮುರುಘಾ ಮಠದಲ್ಲಿ ಆಯೋಜಿಸಿದ್ದ ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಸ್ಮಾಮಿಗಳ ಸ್ಮರಣೋತ್ಸವದಲ್ಲಿ ಮಾತನಾಡಿದ ಸಾಣೇಹಳ್ಳಿ ತರಳಬಾಳು ಮಠದ ಡಾ ಪಂಡಿತಾರಾಧ್ಯ ಶಿವಾಚರ್ಯ ಸ್ವಾಮೀಜಿ ಅವರು ‘ಹಿಂದೂ ಧರ್ಮದಲ್ಲಿರುವ ವೇದ, ಪುರಾಣಗಳು, ಶಾಸ್ತ್ರಗಳು, ಲಿಂಗಾಯತ ಧರ್ಮದ ಮೂಲಗಳಲ್ಲ. ಹಾಗಾಗಿ ಹಿಂದೂ ಧರ್ಮದ ಭಾಗ ಲಿಂಗಾಯತ ಧರ್ಮ ಎನ್ನುವುದು ಸರಿಯಲ್ಲ. ಹಿಂದೂ ಎನ್ನುವುದು ಅನೈತಿಕ, ಅನಾಚಾರಗಳನ್ನು ಒಳಗೊಂಡಿದೆ. ಇಂಥ ಧರ್ಮವನ್ನು ಶರಣರು ನಿರಾಕರಿಸಿ ಜಾತ್ಯತೀತ ತತ್ವಗಳನ್ನು ಒಳಗೊಂಡ ಲಿಂಗಾಯತ ಧರ್ಮವನ್ನು ಒಪ್ಪಿಕೊಂಡಿದ್ದಾರೆ. ವಚನಗಳಲ್ಲಿ ಲಿಂಗಾಯತ ಧರ್ಮದ ಸಾರವನ್ನು ನಾಡಿಗೆ ಬಿತ್ತರಿಸಿ ಸಾಕ್ಷಾತ್ಕರಿಸಿದ್ದಾರೆ. ಹಾಗಾಗಿ ಯಾವತ್ತೂ ಲಿಂಗಾಯತ ಧರ್ಮ ಸ್ವತಂತ್ರ ಧರ್ಮವೇ ಹೊರತು ಹಿಂದೂ ಧರ್ಮಕ್ಕೆ ಸಂಬಂಧಿಸಿಲ್ಲ’ ಎಂದರು.

ಈ ಬೆನ್ನಲ್ಲೇ ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಶ್ರೀವಚನಾನಂದ ಸ್ವಾಮೀಜಿ ಮಾತನಾಡಿ, ‘ಹಿಂದೂ ಧರ್ಮ ಎಲ್ಲ ಧರ್ಮಗಳ ಮೂಲ ಪರಂಪರೆ. ವೀರಶೈವ, ಲಿಂಗಾಯತ, ಜೈನ, ಬುದ್ಧ ಧರ್ಮದ ಮೂಲ ಬೇರು ಹಿಂದೂ ಧರ್ಮವೇ. ಹಾಗಾಗಿ ನಾವೆಲ್ಲರೂ ಹಿಂದೂ ಧರ್ಮದ ಮೂಲವನ್ನು ಒಪ್ಪಿಕೊಳ್ಳಬೇಕಾಗುತ್ತದೆ. ವೀರಶೈವ ಹಾಗೂ ಲಿಂಗಾಯತ ತತ್ವ ಸಿದ್ಧಾಂತಗಳಲ್ಲಿ ನಾವೆಲ್ಲ ಒಂದಾಗಬೇಕಾಗಿದೆ’ ಎಂದು ಅಭಿಪ್ರಾಯಪಟ್ಟರು.

Leave A Reply

Your email address will not be published.