Marriage: ಹೊಸದಾಗಿ ಮದುವೆಯಾಗುವವರಿಗೆ ಕೇಂದ್ರದಿಂದ ಗುಡ್‌ ನ್ಯೂಸ್!‌ ದಂಪತಿಗಳಿಗೆ ಸಿಗಲಿದೆ 2.50 ಲಕ್ಷ ರೂ!

Marriage: ಹೊಸದಾಗಿ ಮದುವೆಯಾಗುವವರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಹೌದು, ಹೊಸ ದಂಪತಿಗೆ 2.50 ಲಕ್ಷ ರೂ. ವಿವಾಹ ಪ್ರೋತ್ಸಾಹ ಧನವನ್ನು ನೀಡಲಾಗುತ್ತಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಹೌದು, ಹೊಸದಾಗಿ ಮದುವೆ (Marriage) ಮಾಡಿಕೊಳ್ಳುವವರಿಗೆ ಇದೊಂದು ಸುವರ್ಣ ಅವಕಾಶ ಆಗಿದೆ. ಮುಖ್ಯವಾಗಿ ದಲಿತರನ್ನು ಒಳಗೊಂಡ ಜೋಡಿಗಳ ಅಂತರ್ಜಾತಿ ವಿವಾಹಗಳನ್ನು ಪ್ರೋತ್ಸಾಹಿಸಲು ಡಾ.ಅಂಬೇಡ್ಕರ್ ಫೌಂಡೇಶನ್ ವಿವಾಹ ಕೇಂದ್ರ ಸರ್ಕಾರವು ʼಯೋಜನೆಯನ್ನು 2024ʼ ರಲ್ಲಿ ಪರಿಚಯಿಸಿದ್ದು, ಈ ಯೋಜನೆಯಡಿ ಹೊಸದಾಗಿ ಅಂತರ್ಜಾತೀಯ ವಿವಾಹವಾಗುವ ಜೋಡಿಗೆ 2.50 ಲಕ್ಷ ರೂ. ಪ್ರೋತ್ಸಾಹ ಧನವನ್ನು ಕೇಂದ್ರದಿಂದ ನೀಡಲಾಗುತ್ತದೆ.

ಈ 2.50 ಲಕ್ಷ ರೂ. ಪ್ರೋತ್ಸಾಹ ಧನವನ್ನು ಪಡೆಯಲು ಮದುವೆಯಾಗುವ ಜೋಡಿಯಲ್ಲಿ ಗಂಡ ಅಥವಾ ಹೆಂಡತಿ ಇಬ್ಬರಲ್ಲಿ ಒಬ್ಬರು ದಲಿತರಾಗಿರಬೇಕು. ಅಂದರೆ ಮಾತ್ರ ಈ ಯೋಜನೆಯ ಲಾಭ ಪಡೆಯಬಹುದಾಗಿದೆ. ಇದರ ಜೊತೆಗೆ ದಂಪತಿಗಳು 5 ಲಕ್ಷ ರೂ.ಕ್ಕಿಂತಲೂ ಕಡಿಮೆ ವಾರ್ಷಿಕ ಆದಾಯ ಹೊಂದಿರಬೇಕು. ಇದರಲ್ಲಿ ಅರ್ಹ ದಂಪತಿಗಳು ತಮ್ಮ ಇಬ್ಬರ ಹೆಸರಿಗೂ ಮೊದಲು 1.25 ಲಕ್ಷ ರೂ. ಟಿಟಿಯಾಗಿ ಪಡೆಯುತ್ತಾರೆ. ಬಾಕಿ ಉಳಿದ 1.25 ಲಕ್ಷ ರೂ. ಮೊತ್ತ 5 ವರ್ಷಗಳ ನಂತರ ಸಿಗುತ್ತದೆ.

ಒಂದು ವೇಳೆ ನೀವು ಸಹ ಹೊಸದಾಗಿ ಮದುವೆಯಾಗಿ ಈ ಅರ್ಹತೆಗಳನ್ನು ಹೊಂದಿದ್ದರೆ ಕೇಂದ್ರ ಸರ್ಕಾರದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಿ ಈ ಯೋಜನೆಯ ಲಾಭ ಪಡೆದುಕೊಳ್ಳಬಹುದಾಗಿದೆ.

Leave A Reply

Your email address will not be published.