Cleaning Tips: ಬಾತ್ರೂಮ್ ಬಕೆಟ್, ಮಗ್ ಪಾಚಿಕಲೆ ಕಟ್ಟಿ ಹಳೆಯದರಂತೆ ಕಾಣುತ್ತಿದೆಯೇ? ಹೀಗೆ ಮಾಡಿ ನಿಮಿಷದಲ್ಲೇ ಹೊಳೆಯುತ್ತೆ!

Cleaning Tips: ಮನೆಯಲ್ಲಿ ನಾವು ದಿನನಿತ್ಯ ಉಪಯೋಗಕ್ಕಾಗಿ ಬಳಸುವ ಪ್ಲಾಸ್ಟಿಕ್ ಬಕೆಟ್ ಮತ್ತು ಮಗ್ ಗಳು ದಿನ ಕಳೆದಂತೆ ಪಾಚಿ ಕಟ್ಟಿ ಬೇರೆ ಬಣ್ಣಕ್ಕೆ ತಿರುಗುತ್ತವೆ. ಇದು ಎಷ್ಟೇ ತಿಕ್ಕಿದರೂ ಸ್ವಚ್ಛವಾಗುವುದಿಲ್ಲ. ಮತ್ತು ಬಕೆಟ್ ಗಳು ತೀರಾ ಹಳೆಯದರಂತೆ ಕಾಣುತ್ತದೆ. ಇದನ್ನು ಕ್ಲೀನಿಂಗ್ ಮಾಡೋದು ದೊಡ್ಡ ಸಮಸ್ಯೆ ಅಂದುಕೊಂಡವರು ಈ ಟಿಪ್ಸ್ (Cleaning Tips) ಫಾಲೋ ಮಾಡಿ.

 

ಹೌದು, ನೀರಿನಲ್ಲಿ ಪಾಚಿ ಮತ್ತು ಕೊಳಕು ಸಂಗ್ರಹವಾಗುವುದರಿಂದ ನಂತರ ಇದನ್ನು ಮುಟ್ಟಲು ಸಹ ಅಹಿತಕರವೆನಿಸುತ್ತದೆ. ಅದರಲ್ಲಿಯೂ ಹಬ್ಬ ಹರಿದಿನಗಳಲ್ಲಿ ನಮ್ಮ ಮನೆಗೆ ಅತಿಥಿ ಬಂದರೆ ಇವುಗಳನ್ನು ಮುಟ್ಟಲು ಮುಜುಗರ ಉಂಟಾಗುತ್ತದೆ. ಇಂತಹ ಪ್ಲಾಸ್ಟಿಕ್ ಬಕೆಟ್ಗಳು ಮತ್ತು ಇತರ ವಸ್ತುಗಳನ್ನು ಸುಲಭವಾಗಿ ಹೊಳೆಯುವಂತೆ ಮಾಡಬಹುದು.

ಮುಖ್ಯವಾಗಿ ಬಾತ್ರೂಮ್ನಲ್ಲಿ ಪ್ಲಾಸ್ಟಿಕ್ ಬಕೆಟ್ಗಳು, ಮಗ್ಗಳು ಅಥವಾ ಇತರ ವಸ್ತುಗಳ ಮೇಲಿನ ಕಪ್ಪು ಗುರುತುಗಳು ಮತ್ತು ಕಲೆಗಳನ್ನು ತೆಗೆದುಹಾಕಲು ನೀವು ಬ್ಲೀಚ್ ಅನ್ನು ಸಹ ಬಳಸಬಹುದು. ಇದಕ್ಕಾಗಿ ಒಂದು ಲೋಟ ನೀರಿಗೆ ಬ್ಲೀಚ್ ಪೌಡರ್ ಮಿಶ್ರಣ ಮಾಡಿ. ನಂತರ ಶುದ್ಧವಾದ ಬಟ್ಟೆಯನ್ನು ಲಿಕ್ವೆಡ್ನಲ್ಲಿ ಅದ್ದಿ ನಂತರ ಅದರಿಂದ ಬಕೆಟ್ ಅಥವಾ ಮಗ್ ಸ್ಕ್ರಬ್ ಮಾಡಿ. ಸ್ಕ್ರಬ್ ಮಾಡಿದ ನಂತರ ಬಕೆಟ್ ಹಾಗೂ ಮಗ್ ಅನ್ನು ಶುದ್ಧ ನೀರಿನಿಂದ ತೊಳೆಯಿರಿ. ಹೀಗೆ ಮಾಡುವುದರಿಂದ ನಿಮ್ಮ ಪ್ಲಾಸ್ಟಿಕ್ ವಸ್ತುಗಳು ಹೊಸದರಂತೆ ಹೊಳೆಯುತ್ತವೆ.

ನಿಂಬೆ ಬಳಕೆಯಿಂದ ಪ್ಲಾಸ್ಟಿಕ್ ಡಬ್ಬಗಳ ಮೇಲಿನ ನೀರಿನ ಕಲೆಗಳನ್ನು ಸುಲಭವಾಗಿ ತೆಗೆದು ಹಾಕಬಹುದು. ನಿಮ್ಮ ಪ್ಲಾಸ್ಟಿಕ್ ಬಕೆಟ್ ಅಥವಾ ಮಗ್ ಅನ್ನು ಸ್ವಚ್ಛಗೊಳಿಸಲು ಇದರ ಮೇಲೆ ನಿಂಬೆ ರಸವನ್ನು ಅನ್ವಯಿಸಿ ಮತ್ತು ಅರ್ಧ ಗಂಟೆಯವರೆಗೆ ಬಿಡಿ. ಅದಾದ ನಂತರ ಡಿಟರ್ಜೆಂಟ್ನೊಂದಿಗೆ ಸ್ವಚ್ಛಗೊಳಿಸಿ. ಇದರಿಂದ ನಿಮ್ಮ ಬಕೆಟ್ಗಳು ಮತ್ತು ಮಗ್ಗಳು ಹೊಸದಾಗಿ ಕಾಣುತ್ತವೆ.

ಅಥವಾ ಪ್ಲಾಸ್ಟಿಕ್ ಬಕೆಟ್ ಮತ್ತು ಮಗ್ಗಳನ್ನು ಸ್ವಚ್ಛಗೊಳಿಸಲು ನೀವು ಅಡಿಗೆ ಸೋಡಾ ಮತ್ತು ವಿನೆಗರ್ ಅನ್ನು ಸಹ ಬಳಸಬಹುದು. ಸೋಡಾ ಮತ್ತು ವಿನೆಗರ್ ಎರಡೂ ಪದಾರ್ಥಗಳನ್ನು ಸಮಾನ ಪ್ರಮಾಣದಲ್ಲಿ ಮಿಶ್ರಣ ಮಾಡಿ. ನಂತರ, ಕೊಳಕು ಬಕೆಟ್ ಮತ್ತು ಮಗ್ ಮೇಲೆ ಪೇಸ್ಟ್ ಅನ್ನು ಉಜ್ಜಿ ಮತ್ತು ಶುದ್ಧ ನೀರಿನಿಂದ ತೊಳೆಯಿರಿ. ಹೀಗೆ ಮಾಡಿದಲ್ಲಿ ಬಕೆಟ್ ಗಳು ಮತ್ತೆ ಹೊಸದರಂತೆ ಕಾಣುತ್ತದೆ.

ಆದರೆ ನೆನಪಿರಲಿ ಈ ಕೆಲಸವನ್ನು ಕೈಗವಸುಗಳನ್ನು ಧರಿಸಿ ಮಾತ್ರ ಮಾಡಬೇಕು ಇಲ್ಲದಿದ್ದರೆ ಚರ್ಮದ ಸಮಸ್ಯೆಗಳು ಉಂಟಾಗಬಹುದು.

Leave A Reply

Your email address will not be published.