Triangle love story: ಒಬ್ಬಳು ನರ್ಸ್ ಇಬ್ಬರು ವೈದ್ಯರ ತ್ರಿಕೋನ ಪ್ರೀತಿ! ವಿಷಯ ಗೊತ್ತಾದಾಗ ಮೂವರ ಸ್ಥಿತಿ ಐಸಿಯುನಲ್ಲಿ !

Share the Article

Triangle love story: ಇಲ್ಲೊಂದು ತ್ರಿಕೋನ ಪ್ರೀತಿ (Triangle love story) ಬಗ್ಗೆ ನೀವು ಕೇಳಲೇ ಬೇಕು. ಹೌದು, ಒಂದೇ ಆಸ್ಪತ್ರೆಯಲ್ಲಿ ನರ್ಸ್ ಒಬ್ಬಳ ಮೇಲೆ ಒಂದೇ ಸಮಯದಲ್ಲಿ ಇಬ್ಬರು ವೈದ್ಯರಿಗೆ ಪ್ರೀತಿ ಆಗಿದೆ. ಅಷ್ಟೇ ಅಲ್ಲ ಇಬ್ಬರು ವೈದ್ಯರು ದುಬಾರಿ ಗಿಫ್ಟ್ ಗಳನ್ನು ನರ್ಸ್ ಗೆ ನೀಡಿದ್ದಾರೆ. ಆದರೆ  ಕೊನೆಯ ಹಂತದಲ್ಲಿ ವೈದ್ಯರಿಗೆ ತಾವು ಪ್ರೀತಿಸಿದ ಹುಡುಗಿ ಒಬ್ಬಳೇ ಎಂದು ಗೊತ್ತಾಗಿದೆ. ಇದೀಗ ಇದೇ ಮೂವರು ಅದೇ ಆಸ್ಪತ್ರೆಯ ಐಸಿಯುನಲ್ಲಿದ್ದಾರೆ.

ಹೌದು, ಖಾಸಗಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಇಬ್ಬರು ವೈದ್ಯರಿಗೆ ಅದೇ ಅಸ್ಪತ್ರೆಯ ನರ್ಸ್ ಮೇಲೆ ಪ್ರೀತಿ ಶುರುವಾಗಿದೆ. ಎಲ್ಲಿವರೆಗೆ ಅಂದರೆ ನರ್ಸ್ ಒಬ್ಬ ವೈದ್ಯರಿಂದ ಐಷಾರಾಮಿ ಮನೆ ಗಿಫ್ಟ್ ಪಡೆದುಕೊಂಡರೆ, ಮತ್ತೊಬ್ಬ ವೈದ್ಯರಿಂದ ಲಕ್ಷುರಿ ಕಾರು ಉಡುಗೊರೆಯಾಗಿ ಪಡೆದುಕೊಂಡಿದ್ದಾರೆ. ಆದರೆ ಅಚಾನಕ್ಕಾಗಿ ನಾವಿಬ್ಬರು ಪ್ರೀತಿಸುತ್ತಿರುವುದುದು ಒಬ್ಬಾಕೆಯನ್ನೇ ಅನ್ನೋದು ಗೊತ್ತಾಗಿದೆ. ಆಮೇಲೆ ನಡೆಯಿತು ಹೆಣ್ಣಿಗಾಗಿ ಯುದ್ಧ. ಕೊನೆಗೆ ವೈದ್ಯರಿಬ್ಬರ ನಡುವಿನ ಹೊಡೆದಾಟ ಐಸಿಯುನಲ್ಲೂ ಹೋಗಿ ನಿಂತಿದೆ.

ಮೂಲತಃ ಚೀನಾದ ವುಕ್ಸಿ ಪೀಪಲ್ಸ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ವೈದ್ಯರು ತಮ್ಮ ಬರುವ ವೇತನದಲ್ಲಿ ಮುಕ್ಕಾಲು ಭಾಗ ಹಣವನ್ನು ಈ ನರ್ಸ್‌ಗಾಗಿ ಇಬ್ಬರು ಖರ್ಚು ಮಾಡಿದ್ದಾರೆ. ಒಬ್ಬ ವೈದ್ಯ ಕೋಟಿ ರೂಪಾಯಿ ಬೆಲೆಬಾಳುವ ಕಾರು ಉಡುಗೊರೆಯಾಗಿ ನೀಡಿದ್ದರೆ, ಮತ್ತೊಬ್ಬ ವೈದ್ಯ ಐಷಾರಾಮಿ ಮನೆ ಉಡುಗೊರೆ ನೀಡಿದ್ದಾರೆ. ಈ ತ್ರಿಕೋನ ಪ್ರೇಮ ಕೊನೆಗೂ ವೈದ್ಯರಿಬ್ಬರಿಗೆ ತಿಳಿದಿದೆ.

ಆಕೆ ನನ್ನ ಹುಡುಗಿ ಎಂದು ಒಬ್ಬ ವೈದ್ಯ ಜಗಳ ಶುರುಮಾಡಿದರೆ, ಆಕೆ ನನ್ನಾಕೆ ಮತ್ತೊಬ್ಬ ಯುದ್ಧ ಆರಂಭಿಸಿದ್ದಾನೆ. ಇವರಿಬ್ಬರ ಜಗಳದಲ್ಲಿ ಒರ್ವ  ವೈದ್ಯ ಗಂಭೀರವಾಗಿ ಗಾಯಗೊಂಡಿದ್ದಾನೆ. ತಲೆಗೆ ಗಾಯವಾದ ಕಾರಣ ಅದೇ ಆಸ್ಪತ್ರೆಯ ಐಸಿಯುಗೆ ವೈದ್ಯನ ದಾಖಲಿಸಿದ್ದಾರೆ. ಐಸಿಯುನಲ್ಲಿ ಹೊಡೆದಾಡಿಕೊಂಡ ಒಬ್ಬ ವೈದ್ಯ ರೋಗಿಯಾಗಿದ್ದರೆ, ಮತ್ತೊಬ್ಬ ಚಿಕಿತ್ಸೆ ನೀಡುವ ವೈದ್ಯನಾಗಿದ್ದಾರೆ. ಮತ್ತೊಂದು ವಿಶೇಷ ಅಂದರೆ, ಇವರಿಬ್ಬರನ್ನು ಏಕಕಾಲಕ್ಕೆ ಪ್ರೀತಿಸಿದ ಇದೇ ನರ್ಸ್‌ನ್ನು ಡ್ಯೂಟಿಗೆ ಹಾಕಿದ್ದಾರೆ.

ಇದೀಗ ಗಾಯಗೊಂಡ ವೈದ್ಯನ ಪರಿಸ್ಥಿತಿ ಗಂಭೀರವಾಗಿದೆ. ಈ ವೈದ್ಯನ ಉಳಿಸಿಕೊಳ್ಳಬೇಕಾದ ಅನಿವಾರ್ಯ ಮತ್ತೊಬ್ಬ ವೈದ್ಯನಿಗೆ ಎದುರಾಗಿದೆ. ವೈದ್ಯ ಮೃತಪಟ್ಟರೆ ಜೈಲು ಸೇರುವುಧು ಖಚಿತ.

Leave A Reply

Your email address will not be published.