Degree Students: ಪದವಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್; ಇನ್ಮುಂದೆ ಖಾಸಗಿ ಕಾಲೇಜುಗಳಲ್ಲಿ ಪದವಿ ಕೋರ್ಸ್​ಗಳಿಗೂ ಸೀಟ್ ಹಂಚಿಕೆ!

Degree Students: ಇನ್ಮುಂದೆ ಪದವಿ ವಿದ್ಯಾಭ್ಯಾಸ ಮಾಡಲು ಬಯಸಿದ್ದಲ್ಲಿ, ವಿದ್ಯಾರ್ಥಿಗಳು ಕಾಲೇಜು ಸುತ್ತಬೇಕಾಗಿಲ್ಲ. ಅದಕ್ಕಾಗಿ ಉನ್ನತ್ತ ಶಿಕ್ಷಣ ಇಲಾಖೆ ಪದವಿ ಶಿಕ್ಷಣದ ಕನಸ್ಸು ಕಾಣುತ್ತೀರೊ ವಿದ್ಯಾರ್ಥಿಗಳಿಗೆ ಹೊಸ ಅವಕಾಶ ನೀಡಿದೆ.

ಹೌದು, ಇನ್ಮುಂದೆ ಎಂಜಿನಿಯರಿಂಗ್ ಹಾಗೂ ವೈದ್ಯಕೀಯ ಸೀಟ್ ಹಂಚಿಕೆ ಮಾದರಿಯಂತೆ ಪದವಿ ಕೋರ್ಸ್​ಗಳಿಗೂ ಸೀಟ್ ಹಂಚಿಕೆಗೆ ಉನ್ನತ್ತ ಶಿಕ್ಷಣ ಇಲಾಖೆ ಮುಂದಾಗಿದೆ. ಈ ಹಿನ್ನೆಲೆ ಪಿಯುಸಿ ಬಳಿಕ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇನ್ಮುಂದೆ ಪ್ರತಿಷ್ಠಿತ ಖಾಸಗಿ ಕಾಲೇಜುಗಳಲ್ಲಿಯೂ (Private Colleges) ಸರ್ಕಾರಿ ಕೋಟಾದ ಪದವಿ ಸೀಟ್​ಗಳು ಸಿಗಲಿವೆ (Government Quota Seats). ಅಂದರೆ ರಾಜ್ಯದ ಖಾಸಗಿ ಕಾಲೇಜುಗಳಲ್ಲಿ ಇನ್ಮುಂದೆ 40% ಸರ್ಕಾರಿ ಕೋಟಾದಡಿಯಲ್ಲಿ ಪದವಿ ಸೀಟ್​ಗಳನ್ನ ಸರ್ಕಾರಕ್ಕೆ ಪಡೆಯಲು ಉನ್ನತ್ತ ಶಿಕ್ಷಣ ಇಲಾಖೆ ಮುಂದಾಗಿದೆ.

ಈ ಹಿಂದೆ ಖಾಸಗಿ ಪದವಿ ಕಾಲೇಜುಗಳು 100ಕ್ಕೆ 100 ಮ್ಯಾನೇಜಮೆಂಟ್ ಕೋಟಾದಡಿ ಸೀಟ್ ನೀಡಿ ಪದವಿ ದಾಖಲಾತಿ ಪಡೆಯುತ್ತಿದ್ದರು. ಇದರಿಂದ ಪ್ರತಿಷ್ಠಿತ ಖಾಸಗಿ ಕಾಲೇಜುಗಳಲ್ಲಿ ಓದಲು ಪ್ರತಿಭಾವಂತ ಬಡ ವಿದ್ಯಾರ್ಥಿಗಳು ಶುಲ್ಕ ಕಟ್ಟಲು ಕಷ್ಟವಾಗುತ್ತಿತ್ತು. ಹೀಗಾಗಿ ಸರ್ಕಾರ ಪದವಿ ಖಾಸಗಿ ಕಾಲೇಜುಗಳಲ್ಲಿ ಕಾನೂನಾತ್ಮಕವಾಗಿ ಬರಬೇಕಾದ 40% ಸರ್ಕಾರಿ ಕೋಟಾದ ಸೀಟ್ ಗಳನ್ನ ಈ ವರ್ಷದಿಂದ ಪಡೆಯಲು ಮುಂದಾಗಿದೆ.

ಈ ಸೀಟ್​ಗಳನ್ನ ಕೆಇಎ ಅಥವಾ ಕಾಮೆಡಕೆ ಮಾದರಿಯಲ್ಲಿ ಪರೀಕ್ಷೆ ಅಥವಾ ಆಯ್ಕೆ ನಡೆಸಿ ವಿದ್ಯಾರ್ಥಿಗಳಿಗೆ (Degree Students) ಖಾಸಗಿ ಕಾಲೇಜುಗಳಲ್ಲಿ ಪದವಿ ಕೋರ್ಸ್ ಸೀಟ್​ಗಳನ್ನ ಹಂಚಿಕೆ ಮಾಡಲು ಮುಂದಾಗಿದೆ. ಅಂದರೆ ಈಗಾಗಲೇ ಎಂಜಿನಿಯರಿಂಗ್, ವೈದ್ಯಕೀಯ ಶಿಕ್ಷಣ ಪಡೆಯಲು ಸಿಇಟಿ ಪರೀಕ್ಷೆ ಬರೆಯಬೇಕಿದೆ. ನಂತರ ರ್ಯಾಂಕ್ ಆಧಾರದ ಮೇಲೆ ಸೀಟ್ ಜೊತೆಗೆ ಇಚ್ಛೆಯ ಕಾಲೇಜು ನೀಡುವ ವ್ಯವಸ್ಥೆ ಇದೆ. ಸದ್ಯ ಇದೇ ವ್ಯವಸ್ಥೆಯನ್ನ ಪದವಿ ಕೋರ್ಸ್​ಗಳಿಗೂ ತರುವ ಯೋಜನೆ ಇದೆ. ಈ ಯೋಜನೆಯನ್ನು ಈ ವರ್ಷದಿಂದಲೇ ಖಾಸಗಿ ಕಾಲೇಜುಗಳಲ್ಲಿ ಕಾನೂನಾತ್ಮಕವಾಗಿ ಬರಬೇಕಿರುವ ಪದವಿ ಸೀಟ್ ಪಡೆಯಲು ಸರ್ಕಾರ ಮುಂದಾಗಿದೆ.

Leave A Reply

Your email address will not be published.