Coastal Karnataka: ಕರಾವಳಿ ಜನರೇ ಎಚ್ಚರ! ಮಂಗಳೂರು ಸೇರಿದಂತೆ ಹಲವು ಪ್ರದೇಶಕ್ಕೆ ಅಪಾಯದ ಮುನ್ಸೂಚನೆ ನೀಡಿದ ವಿಜ್ಞಾನಿಗಳು!

Coastal Karnataka: ಹವಾಮಾನ ಬದಲಾವಣೆಯ ಪರಿಣಾಮಗಳಿಂದ ನಾನಾ ರೀತಿಯ ಪ್ರಾಕೃತಿಕ ವಿಕೋಪಗಳು ಸಂಭವಿಸುತ್ತಿರುವ ನಡುವೆಯೇ, ಸಮುದ್ರ ನೀರಿನ ಮಟ್ಟ ಏರಿಕೆಯಾಗುತ್ತಿದೆ. ನೀರಿನ ಮಟ್ಟದ ಏರಿಕೆಯ ಪರಿಣಾಮ ಕರ್ನಾಟಕದ ಮಂಗಳೂರು (Mangaluru) , ಉಡುಪಿ ಸೇರಿದಂತೆ ದೇಶದ ಹಲವು ಕರಾವಳಿ ನಗರಗಳ ಪ್ರದೇಶ (Coastal Karnataka) ಸಮುದ್ರದ ಪಾಲಾಗಲಿದೆ.

 

ಈಗಾಗಲೇ ಪಶ್ಚಿಮ ಕರಾವಳಿಯ ಕಡಲತೀರದ ನಗರಗಳಿಗೆ ಅಪಾಯ ಇದೆ ಅಂತ ಕೆಲ ವರ್ಷಗಳ ಹಿಂದೆಯೇ ವಿಜ್ಞಾನಿಗಳು ಎಚ್ಚರಿಸಿದ್ದರು.ಇದೀಗ ಬೆಂಗಳೂರಿನ ವಿಜ್ಞಾನಿ ಗಳ ತಂಡ ಮತ್ತೊಂದು ಅಧ್ಯಯನ ಮಾಡಿದ್ದಾರೆ. 2040ರ ಹೊತ್ತಿಗೆ ಮಂಗಳೂರು, ಉಡುಪಿ ನಗರಗಳ 5 ಶೇಕಡಾದಷ್ಟು ಭೂಭಾಗ ಸಮುದ್ರ ಸೇರಲಿದೆ ಎಂಬ ಆತಂಕಕಾರಿ ವರದಿ ನೀಡಿದ್ದಾರೆ.

ಈಗಾಗಲೇ ಕಡಲತಡಿಯ ಮನೆಗಳಿಗೆ ನೀರು ನುಗ್ಗೋದು ಇತ್ತೀಚೆಗಿನ ವರ್ಷಗಳಲ್ಲಿ ಕರಾವಳಿಯ ಕಡಲತೀರದಲ್ಲಿ ನಡೆಯುತ್ತಿದೆ. ಸಮುದ್ರ ಪ್ರತಿ ಮಳೆಗಾಲದಲ್ಲೂ ತನ್ನ ವ್ಯಾಪ್ತಿಯನ್ನು ವಿಸ್ತೀರ್ಣಗೊಳಿಸುತ್ತಿದೆ. ಸಮುದ್ರದ ಈ ಅಬ್ಬರ 2040ರ ಹೊತ್ತಿಗೆ ಕರಾವಳಿ ಜಿಲ್ಲೆಗಳ ಶೇಕಡಾ 5ರಷ್ಟು ಭೂಭಾಗವನ್ನೇ ಆವರಿಸಿಕೊಳ್ಳಬಹುದು ಎಂಬ ಅಧ್ಯಯನ ವರದಿ ಈಗ ಬಯಲಾಗಿದೆ.

ಬೆಂಗಳೂರಿನ ಸೆಂಟರ್ ಫಾರ್ ಸ್ಟಡಿ ಆಫ್ ಸೈನ್ಸಸ್ ಎಂಬ ಚಿಂತಕರ ತಂಡ ಈ ಅಧ್ಯಯನ ವರದಿಯನ್ನು ಬಿಡುಗಡೆ ಮಾಡಿದ್ದು, ಹವಾಮಾನ ಬದಲಾವಣೆ ಮತ್ತು ಸಮುದ್ರ ತೀರದಲ್ಲಿ ಮಾನವನ ಹಸ್ತಕ್ಷೇಪದಿಂದ ಕಡಲು ಅಬ್ಬರಿಸುತ್ತಿದ್ದು,ಭವಿಷ್ಯದಲ್ಲಿ ಇದು ಆಪತ್ತಿನ ತರಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ನೀರಿನ ಮಟ್ಟ ಏರಿಕೆಯಿಂದ ಸಮುದ್ರದ ನೀರು ಜನವಸತಿ ಅಥವಾ ಕೃಷಿ ಭೂಮಿಗಳಿಗೆ ನುಗ್ಗಬಹುದು ಎಂಬ ಮಾಹಿತಿಯನ್ನು ವಿಜ್ಞಾನಿಗಳು ವರದಿಯಲ್ಲಿ ಉಲ್ಲೇಖ ಮಾಡಿದ್ದಾರೆ.

ಇನ್ನು ಮಂಗಳೂರಿನ ಹಿರಿಯ ವಿಜ್ಞಾನಿ ಡಾ.ಜಯಪ್ಪ ಪ್ರಕಾರ,  ಸಮುದ್ರದಲ್ಲಿ ಬ್ರೇಕ್ ವಾಟರ್, ಬೀಚ್ ಗಳಲ್ಲಿ ತಡೆ, ಕಟ್ಟಡಗಳು, ಕಡಲ್ಕೊರೆತ ನಿವಾರಣೆಗೆ ಹಾಕಿರುವ ಕಲ್ಲುಗಳ ರಾಶಿ ಎಲ್ಲವೂ ಸಮುದ್ರ ದಿಕ್ಕನ್ನು ಬದಲಿಸುವಂತೆ ಮಾಡುತ್ತಿದೆ. ಹಿಂದೆಗಿಂತ ಸಮುದ್ರ ತುಂಬಾ ಭೂ ಭಾಗವನ್ನು ಆಕ್ರಮಿಸಿಕೊಳ್ಳುತ್ತಿದೆ. ಮಂಗಳೂರು ಉಚ್ಚಿಲ, ಸೋಮೇಶ್ವರ, ಉಳ್ಳಾಲ, ಸಸಿಹಿತ್ಲು ಮುಂತಾದ ಭಾಗದಲ್ಲಿ ಅತಿ ಹೆಚ್ಚಿನ ಭೂಭಾಗ ಸಮುದ್ರ ಪಾಲಾಗಬಹುದು. ಇನ್ನು ದಕ್ಷಿಣ ಕನ್ನಡ, ಉಡುಪಿಯ ಜೊತೆಗೆ ಕೇರಳ, ಗೋವಾ, ಮಹಾರಾಷ್ಟ್ರದ ಪಶ್ಚಿಮ ಕರಾವಳಿಯಲ್ಲೂ ಹಲವು ಬದಲಾವಣೆಯಾಗಲಿದೆ ಎಂಬ ಮಾಹಿತಿಯನ್ನು ಅಧ್ಯಯನ ವರದಿದಲ್ಲಿ ನೀಡಲಾಗಿದೆ. ಮುಂಬೈ, ಪಾಂಡಿಚೇರಿ ಮತ್ತು ತೂತುಕುಡಿಯ ಭೂಭಾಗ ಹತ್ತು ಶೇಕಡಾಗಿಂತ ಅಧಿಕ ಸಮುದ್ರ ಪಾಲಾಗಬಹುದು ಎಂಬುವುದು ವರದಿಯಲ್ಲಿ ಉಲ್ಲೇಖವಾಗಿದೆ.

Leave A Reply

Your email address will not be published.