Police Arrest : ʻಕಳ್ಳʼ ಪೊಲೀಸ್ ಆರೆಸ್ಟ್: ಪ್ರೈವೇಟ್ ಡಿಟೆಕ್ಟಿವ್ ಏಜೆನ್ಸಿಗಳಿಗೆ ಲವ್ವರ್ಸ್ ಕಾಲ್ ಡಿಟೈಲ್ಸ್ ಕೊಡುತ್ತಿದ್ದ ಪೊಲೀಸಪ್ಪ
Police Arrest: ಕಳ್ಳನನ್ನು ಹಿಡಿಯುವ ಕೆಲಸವನ್ನು ಪೊಲೀಸರು ಮಾಡುತ್ತಾರೆ. ಆದರೆ ಇಲ್ಲಿ ಪೊಲೀಸೇ ಕಳ್ಳತನ ಮಾಡಿದರೆ ಏನು ಮಾಡೋದು. ಬೇಲಿಯೇ ಎದ್ದು ಹೊಲ ಮೇಯ್ದ ಕತೆ ಇದು. ಪೊಲೀಸ್ ಸಿಬ್ಬಂದಿಯೊಬ್ಬ ಕಾಲ್ ಡಿಟೆಲ್ಸ್‌ಗಳನ್ನು ಪೊಲೀಸ್ ಇಲಾಖೆಯ ಕಣ್ಣು ತಪ್ಪಿಸಿ ಅನಧಿಕೃತವಾಗಿ ನೀಡುತ್ತಿದ್ದ. ಆತನನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿ ಕಂಬಿ ಹಿಂದೆ ಕಳಿಸಿದ್ದಾರೆ. ಆರೆಸ್ಟ್ ಆದ ಆರೋಪಿ ಸಿಐಡಿ ಪೊಲೀಸ್ ಸಿಬ್ಬಂದಿ ಮುನಿರತ್ನ ಎಂದು ಹೇಳಲಾಗುತ್ತಿದೆ.
ಸಿಐಡಿ ಟೆಕ್ನಿಕಲ್ ಸೆಲ್ ನಲ್ಲಿ ಬಂಧಿತ ಮುನಿರತ್ನ ಕೆಲವು ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದ. ಕೇಸ್ ಸಂಬಂಧ ಹಿರಿಯ ಅಧಿಕಾರಿಗಳು ಅಧಿಕೃತವಾಗಿ ಸಿಡಿಆರ್ ಪಡೆಯಲು ಸರ್ವಿಸ್ ಪ್ರೈವೇಟ್ ಗಳಿಗೆ ಪತ್ರ ನೀಡುತ್ತಿದ್ದರು. ಅದರಲ್ಲಿ ಮುನಿರಾಜು ಪ್ರೈವೆಟ್ ಏಜೆನ್ಸಿಗಳು ಕೇಳಿದ ಫೋನ್ ನಂಬರ್‌ಗಳನ್ನ ಸೇರಿಸಿ ಸಿಡಿಆರ್ ಪಡೆಯುತ್ತಿದ್ದ. ಸಿಡಿಆರ್ ಬಂದ ಮೇಲೆ ಅಧಿಕೃತವಾದ ಸಿಡಿಆರ್ ಗಳನ್ನ ಅಧಿಕಾರಿಗಳಿಗೆ ನೀಡುತ್ತಿದ್ದ. ತನಗೆ ಬೇಕಾದ ಅನಧಿಕೃತ ಸಿಡಿಆರ್ ಗಳನ್ನು ನಾಗೇಶ್ವರ ರೆಡ್ಡಿ ಎಂಬುವವನಿಗೆ ನೀಡುತ್ತಿದ್ದ ಎಂದು ಸಿಸಿಬಿ ತನಿಖೆ ನಡೆಸುವ ವೇಳೆ ತಿಳಿದು ಬಂದಿದೆ.
ಗಂಡ – ಹೆಂಡತಿ ಅಥವಾ ಪ್ರೇಮಿಗಳು ತಮ್ಮ ಸಂಗಾತಿಯರು ಬೇರೆ ಯಾರೊಂದಿಗಾದರು ಅನಧಿಕೃತ ಸಂಬಂಧದಲ್ಲಿ ಇದ್ದಾರಾ ಎಂದು ತಿಳಿಯಲು ಪ್ರೈವೆಟ್ ಡಿಟೆಕ್ಟಿವ್ ಏಜನ್ಸಿಗಳಿಗೆ ನಂಬರ್ ಕೊಟ್ಟು ಕರೆಯ ವಿವಿರ ತೆಗೆಸುತ್ತಿದ್ದರು. ಈ ಕೆಲಸಕ್ಕೆ ಮುನಿರಾಜು ಅನ್ನು ಏಜನ್ಸಿಯವರು ಬಳಸಿಕೊಳ್ಳುತ್ತಿದ್ದರು. ಕೇವಲ ಲವ್ವರ್ಸ್, ಗಂಡ ಅಥವಾ ಹೆಂಡತಿ ಮಾತ್ರ ಅಲ್ಲ. ಉದ್ಯಮಿಗಳ ಹಾಗೂ ಕೆಲ ರಾಜಕೀಯ ನಾಯಕರು ತಮ್ಮ ವಿರೋಧಿಗಳ ಸಿಡಿಆರ್ ಪಡೆದಿರುವ ಶಂಕೆಯಿದೆ. ಇಷ್ಟೆ ಅಲ್ಲದೆ ಕೆಲ ಪೊಲೀಸ್ ಅಧಿಕಾರಿಗಳ ಹೆಂಡತಿಯರೂ ತಮ್ಮ ಪತಿಯ ಕರೆಯ ಮಾಹಿತಿ ತೆಗೆಸಿದ್ದಾರೆ ಎಂಬ ಮಾಹಿತಿ ಇದೆ. ಎಲ್ಲವೂ ತನಿಖೆಯಿಂದ ಅಷ್ಟೇ ತಿಳಿದು ಬರಬೇಕಿದೆ.