Mangaluru Bengaluru Trains: ಶೀಘ್ರದಲ್ಲೇ ಮತ್ತೆ ಮಂಗಳೂರು-ಬೆಂಗಳೂರು ರೈಲು ಆರಂಭ : ಮಂಗಳೂರು-ಯಶವಂತಪುರ ರೈಲಿನ ಸಮಯದಲ್ಲಿ ಬದಲಾವಣೆ – ಇಲ್ಲಿದೆ ಹೊಸ ವೇಳಾಪಟ್ಟಿ
Mangaluru Bengaluru Trains: ಸಕಲೇಶಪುರ-ಸುಬ್ರಹ್ಮಣ್ಯ ನಡುವೆ ಉಂಟಾದ ಭೂಕುಸಿತ ಪರಿಣಾಮ ಮಂಗಳೂರು ಬೆಂಗಳೂರು ರೈಲು ಸ್ಥಗಿತಗೊಂಡು ೧೦ ದಿನಗಳ ಮೇಲಾಯ್ತು. ಇದೀಗ ಆಗಸ್ಟ್ ೮ರಿಂದ ಮತ್ತೆ ರೈಲು ಪ್ರಾರಂಭವಾಗಲಿದೆ ಎಂದು ವರದಿಯಾಗಿದೆ. ಈ ಮಧ್ಯೆ ನೈರುತ್ಯ ರೈಲ್ವೆ ವ್ಯಾಪ್ತಿಯಲ್ಲಿ ಕೆಲವೊಂದು ರೈಲುಗಳ (Mangaluru Bengaluru Trains) ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಿ ಆದೇಶ ಹೊರಡಿಸಲಾಗಿದೆ. ಮಂಗಳೂರು ಜಂಕ್ಷನ್ – ಯಶವಂತಪುರ ಎಕ್ಸ್ ಪ್ರೆಸ್ ರೈಲಿನ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಲಾಗಿದೆ.
ವಾರಕ್ಕೆ ಮೂರು ಬಾರಿ ಮಂಗಳೂರು ಜಂಕ್ಷನ್‌ನಿಂದ ಬೆಂಗಳೂರಿನ ಯಶವಂತಪುರದವರೆಗೆ ಸಂಚರಿಸುವ ಎಕ್ಸ್ ಪ್ರೆಸ್ (ರೈಲು ಸಂಖ್ಯೆ 16576) ರೈಲಿನ ವೇಳಾಪಟ್ಟಿಯನ್ನು ಬದಲಾವಣೆ ಮಾಡಲಾಗಿದೆ. ನವೆಂಬರ್ 1 ರಿಂದ ಇದು ಜಾರಿಗೆ ಬರಲಿದೆ ಎಂದು ರೈಲ್ವೇ ಇಲಾಖೆ ಮಾಹಿತಿ ನೀಡಿದೆ. ಈ ಹಿಂದೆ ರೈಲು (16576) ಮಂಗಳೂರು ಜಂಕ್ಷನ್‌ನಿಂದ ಬೆಳಿಗ್ಗೆ 11:30 ಗಂಟೆ ಗೆ ಬೆಂಗಳೂರಿಗೆ ಹೊರಡುತ್ತಿತ್ತು. ಇದೀಗ ಪರಿಷ್ಕೃತ ಸಮಯ ನಿಗಧಿಪಡಿಸಿದ ಪ್ರಕಾರ 11.30 ಬದಲು ಬೆಳಿಗ್ಗೆ 7 ಗಂಟೆಗೆ ಹೊರಡಲಿದೆ. ಯಾವಾಲೂ ರಾತ್ರಿ 8:45ಕ್ಕೆ ತಲುಪುತಿದ್ದ ರೈಲು ಇನ್ನು ಮುಂದೆ ಸಂಜೆ 4:30ಕ್ಕೆ ಯಶವಂತಪುರ ನಿಲ್ದಾಣವನ್ನು ಮುಟ್ಟಲಿದೆ.
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ರೈಲ್ವೇ ಇಲಾಖೆ ಸಹಾಯವಾಣಿ ಸಂಖ್ಯೆ 139 ಅನ್ನು ಸಂಪರ್ಕಿಸಿ ಅಥವಾ ಇಲಾಖೆ ವೆಬ್ಸೈಟ್‌ಗೆ ಭೇಟಿ ಮಾಡಬಹುದು. ಪ್ರಯಾಣಿಕರು ಮೇಲೆ ತಿಳಿಸಿದ ರೈಲುಗಳ ಪರಿಷ್ಕೃತ ಸಮಯವನ್ನು ಗಮನಿಸಿ ತಮ್ಮ ಮುಂದಿನ ಪ್ರಯಾಣವನ್ನು ಮಾಡಬೇಕಾಗಿ ನೈರುತ್ಯ ರೈಲ್ವೆ ಇಲಾಖೆ ಕೇಳಿಕೊಂಡಿದೆ.