Kolkatta: ಪರೀಕ್ಷಾ ಕೇಂದ್ರಕ್ಕೆ ಗುಪ್ತಾಂಗದಲ್ಲಿ ಮೊಬೈಲ್ ಇಟ್ಟುಕೊಂಡು ಬಂದ ಹುಡುಗಿಯರು – ಸಿಕ್ಕಿಬಿದ್ದದ್ದೇ ರೋಚಕ !!
Kolkatta: ಪರೀಕ್ಷಾ ಅಕ್ರಮಗಳ ಬಗ್ಗೆ ಪ್ರತೀ ದಿನ ನಾವು ಮಾಧ್ಯಮಗಳಲ್ಲಿ ನೋಡುತ್ತಿದ್ದೇವೆ. ಅದರಲ್ಲೂ ವಿದ್ಯಾರ್ಥಿಗಳೂ ಕೂಡ ಈ ಅಕ್ರಮಗಳಲ್ಲಿ ಭಾಗಿಯಾವುದು ದೊಡ್ಡ ದುರಂತ. ಪರೀಕ್ಷಾ ಕೇಂದ್ರಗಳಲ್ಲಿ ಎಷ್ಟೇ ಕಟ್ಟುನಿಟ್ಟಾದ ನಿಯಮಗಳನ್ನು ಜಾರಿಗೊಳಿಸಿದರೂ ಅಕ್ರಮ ಎಸಗೇ ಎಸಗುತ್ತಾರೆ. ಎಷ್ಟು ಹೇಳಿದರೂ ಬದ್ಧಿ ಕಲಿಯುವುದಿಲ್ಲ. ಅಂತೆಯೇ ಇದೀಗ ಕೊಲ್ಕತ್ತಾದಲ್ಲಿ(Kolkatta) ಪರೀಕ್ಷೆ ಬರೆಯಲು ಬಂದ ಹುಡುಗಿಯರು ಎಸಗಿದ ಅಕ್ರಮ ಬಗ್ಗೆ ಕೇಳಿದ್ರೆ ನೀವೇ ದಂಗಾಗುತ್ತೀರಾ.
ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ(Exams) ನಕಲು ಮಾಡಲು ಸಾಮಾನ್ಯವಾಗಿ ಚೀಟಿ ಇಟ್ಟುಕೊಂಡು ಬಂದಿರುತ್ತಾರೆ. ಇಂದು ಬೇರೆ ಬೇರೆ ಉಪಾಯಗಳನ್ನು ಮಾಡುವುದೂ ಇದೆ. ಅಲ್ಲದೆ ಈ ಮೊಬೈಲ್ ತರುವುದು ಇಂದು ಸಾಮಾನ್ಯವಾಗಿದೆ. ಮೊಬೈಲ್ ತಂದಾಗ ಎಲ್ಲಿ ಇಟ್ಟುಕೊಂಡರೂ ಅದು ಗೊತ್ತಾಗಿಬಿಡುತ್ತದೆ. ಹೀಗಾಗಿ ಸಿಕ್ಕಿಬೀಳುವುದನ್ನು ತಪ್ಪಿಸಲು ಪಶ್ಚಿಮ ಬಂಗಾಳದ ವಿದ್ಯಾರ್ಥಿನಿಯರು ತಮ್ಮ ಗುಪ್ತಾಂಗಗಳಲ್ಲಿ ಮೊಬೈಲ್ ಇಟ್ಟುಕೊಂಡು ಬಂದಿದ್ದಾರೆ. ಆದರೂ ಅವರು ತಗಲಾಕಿಕೊಂಡಿದ್ದಾರೆ.
ಹೌದು, ಪಶ್ಚಿಮ ಬಂಗಾಲದ(West Bengal) ಮಾಲ್ಡಾ ಜಿಲ್ಲೆಯಲ್ಲಿ. ಬೀರ್ಭುಮ್ ನ ಸೂರಿಯ ಬೆನಿಮಾಧಬ್ ಇನ್ಸ್ಟಿಟ್ಯೂಷನ್ ನಲ್ಲಿ ಎಎನ್ಎಂ ಮತ್ತು ಜಿಎನ್ಎಂ ನರ್ಸಿಂಗ್ ಕೋ ರ್ಸ್ಗೆ ಪ್ರವೇಶ ಪರೀಕ್ಷೆ ಇತ್ತು. ಮಾಲ್ಡಾದ ಕೆಲವು ವಿದ್ಯಾರ್ಥಿಗಳು ಸೂರಿಯ ಬೆನಿಮಾಧಬ್ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಗೆ ಹಾಜರಾಗುತ್ತಿದ್ದರು. ಪರೀಕ್ಷಾ ಕೇಂದ್ರಗಳ ಒಳಗೆ ಮೊಬೈಲ್ ಫೋನ್ ಗಳನ್ನು ಅನುಮತಿಸಲಾಗುವುದಿಲ್ಲ ಎಂದು ತಿಳಿಸಲಾಗಿತ್ತು. ಅದರಂತೆ ಮಹಿಳಾ ಸೆಕ್ಯುರಿಟಿ ಗಾರ್ಡ್ ಗಳು ಪರೀಕ್ಷಾ ಕೇಂದ್ರದ ಪ್ರವೇಶ ದ್ವಾರದಲ್ಲಿ ಪ್ರತಿ ಅಭ್ಯರ್ಥಿಯ ದೇಹವನ್ನು ಪರಿಶೀಲಿಸಿ ಒಳಗಡೆ ಬಿಟ್ಟಿದ್ದರೂ. ಆದರೂ ಪರೀಕ್ಷಾ ಕೊಠಡಿಯಲ್ಲಿ ಮೊಬೈಲ್ ಬಳಿಕೆ ಆಗುತ್ತಿದೆ ಎಂದು ಭದ್ರತಾ ಸಿಬ್ಬಂದಿಗಳಿಗೆ ಅನುಮಾನ ಬಂದಿತು.
ಹೀಗಾಗಿ ವಿದ್ಯಾರ್ಥಿಗಳನ್ನು ಪರೀಕ್ಷೆಗಾಗಿ ಮತ್ತೊಂದು ಸಭಾಂಗಣಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಒಬ್ಬೊಬ್ಬರನ್ನೇ ವಿಚಾರಣೆಗೆ ಒಳಪಡಿಸಿ ತಪಾಸಣೆ ನಡೆಸಲಾಯಿತು. ಮೆಟಲ್ ಡಿಟೆಕ್ಟರ್ ಗಳ ಮೂಲಕ ದೇಹವನ್ನು ಹುಡುಕುತ್ತಿದ್ದಂತೆ, ದೇಹದ ವಿವಿಧ ಭಾಗಗಳಿಂದ ಮೊಬೈಲ್ ಫೋನ್ ಗಳು ಹೊರಬರಲು ಪ್ರಾರಂಭಿಸಿದವು. ಯಾರೋ ಶೂ ಶೂ ಅನ್ನು ಕತ್ತರಿಸಿ ಮೊಬೈಲ್ ಫೋನ್ ಅನ್ನು ಅದರಲ್ಲಿ ಇಟ್ಟುಕೊಂಡು ಬಂದಿದ್ದರು. ಇನ್ನು ಕೆಲ ವಿದ್ಯಾರ್ಥಿನಿಯರು ತಮ್ಮ ಗುಪ್ತಾಂಗದಲ್ಲಿ ಮೊಬೈಲ್ ಸಿಕ್ಕಿಸಿಕೊಂಡು ಬಂದಿದ್ದೂ ಪತ್ತೆಯಾಯಿತು.
ಅಲ್ಲದೆ ಕೂಡಲೇ ಹೀಗೆ ಮೊಬೈಲ್ ಇಟ್ಟುಕೊಂಡು ಬಂದಿದ್ದವರನ್ನೆಲ್ಲಾ ವಶಕ್ಕೆ ಪಡೆದ ಅಧಿಕಾರಿಗಳು ಅವರನ್ನು ಪರೀಕ್ಷೆಗಳಿಂದ ಡಿಬಾರ್ ಮಾಡುವ ಆದೇಶ ಹೊರಡಿಸಿದರು. ಮೊಬೈಲ್ಗಳನ್ನೂ ವಶಕ್ಕೆ ಪಡೆದರು. ಘಟನೆ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಲದ ಪರೀಕ್ಷಾ ನಿಯಂತ್ರಕರು ಪರೀಕ್ಷೆಗಳನ್ನು ರದ್ದುಪಡಿಸುವಂತೆ ಶಿಫಾರಸು ಮಾಡಿದ್ದು ಪರೀಕ್ಷೆ ರದ್ದುಪಡಿಸಲಾಗಿದೆ.