Hotel Room: ಆನ್ಲೈನ್ ನಲ್ಲಿ ಬೀಚ್‌ ವ್ಯೂವ್ ಕಿಟಕಿ ನೋಡಿ ರೂಮ್ ಬುಕ್ ಮಾಡಿದ ಯುವತಿ! ರಿಯಲ್ ಸೀನ್ ನೋಡಿ ಫುಲ್ ಶಾಕ್!

Hotel Room: ಈಗಿನ ಕಾಲ ಹೇಗಂದ್ರೆ ದುಃಖ ಆದ್ರು ಖುಷಿ ಆದ್ರು ಬ್ಯಾಗ್ ಪ್ಯಾಕ್ ಮಾಡ್ಕೊಂಡು ಟ್ರಿಪ್ ಹೋಗೋದು ಒಂದು ಟ್ರೆಂಡ್ ಆಗಿದೆ. ಇನ್ನು ಕೆಲಸಕ್ಕೆ ಎರಡು ದಿವಸ ರಜೆ ಇದ್ರೆ ಹೇಳೋದೇ ಬೇಡ ಟ್ರಿಪ್ ನ್ನು ಸಡನ್ ಆಗಿ ಡಿಸೈಡ್ ಮಾಡ್ತಾರೆ. ಹಾಗೆಯೇ ಆನ್‌ಲೈನ್‌ನಲ್ಲಿ ಯುವತಿಯೊಬ್ಬಳು ಹೋಟೆಲ್‌ವೊಂದರ ಕೋಣೆ ಬುಕ್ (Hotel Room) ಮಾಡಿ ಬಂದಾಗ ಯುವತಿ ಫುಲ್ ಶಾಕ್ ಆಗಿದ್ದಾಳೆ.

ಇಂಟರ್ನೆಟ್ ನಲ್ಲಿ ಟ್ರಿಪ್ ಪ್ಯಾಕೆಜ್ ಆಯೋಜನೆ ಮಾಡುವ ಹಲವು ವೆಬ್‌ಸೈಟ್‌ಗಳು ಸಿಗುತ್ತವೆ. ಹೆಚ್ಚಾಗಿ ಈ ವೆಬ್‌ಸೈಟ್‌ಗಳ ಮೂಲಕವೇ ಜನರು ಪ್ರವಾಸದ ಪ್ಲಾನ್ ಮಾಡುತ್ತಾರೆ. ಇದೇ ರೀತಿ ಆನ್‌ಲೈನ್‌ನಲ್ಲಿ ಯುವತಿಯೊಬ್ಬಳು ಹೋಟೆಲ್‌ವೊಂದರ ಬೀಚ್ ವೈಬ್ ಇರುವ ಕೋಣೆ ಬುಕ್ ಮಾಡಿದ್ದರು. ಆದ್ರೆ ಹೋಟೆಲ್‌ಗೆ ಬಂದಾಗ ಯುವತಿ ಫುಲ್ ಶಾಕ್ ಆಗಿದ್ದಾಳೆ.

ವರದಿಯ ಪ್ರಕಾರ, 28 ವರ್ಷದ ಸೋಂಜಾ ಡೆನಿಗ್ ಎಂಬವರು ತಮ್ಮ ಪ್ರವಾಸದ ವೇಳೆ ಕಿಟಕಿ ನೋಡಿ ರೂಮ್ ಬುಕ್ ಮಾಡಿದ್ದರು. ಸೋಂಜಾ ಡೆನಿಗ್ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಸಹ ಆಗಿದ್ದು, ಇವರ ಪ್ರವಾಸದ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಇದೀಗ ಈ ಪೋಸ್ಟ್ ಸಹ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.

ತಾವು ತೆರಳುತ್ತಿರುವ ಸ್ಥಳದಲ್ಲಿ ಸಮುದ್ರವಿದ್ದ ಕಾರಣ ಬೀಚ್‌ ವ್ಯೂವ್ ಇರೋ ಕೋಣೆ ಬುಕ್ ಮಾಡಲು ಯೋಚಿಸಿದ್ದರು. ಬುಕ್ ಮಾಡುವ ಮುನ್ನ ತಾವು ಉಳಿದುಕೊಳ್ಳುವ ಕೋಣೆಯ ಫೋಟೋಗಳನ್ನು ನೋಡಿದ್ದರು. ಅಂದುಕೊಂಡಂತೆ ಹೋಟೆಲ್‌ನಲ್ಲಿ ದೊಡ್ಡದಾದ ಕಿಟಕಿ ಇತ್ತು. ಹೊರಗೆ ಸಮುದ್ರದ ಕಿನಾರೆ ಸಹ ಕಾಣಿಸುತ್ತಿತ್ತು. ಹಾಗಾಗಿ ಅದೇ ಕೋಣೆಯನ್ನು ಬುಕ್ ಮಾಡಿದ್ದರು. ಆದ್ರೆ ಹೋಟೆಲ್‌ಗೆ ಬಂದಾಗ ಯುವತಿ ಫುಲ್ ಶಾಕ್ ಆಗಿದ್ದಳು. ಕಾರಣ ಯಾಕೆ ಬುಕ್ ಮಾಡಿದ್ದ ಹೋಟೆಲ್ ಫೋಟೋದಲ್ಲಿದ್ದಂತೆ ಇರಲಿಲ್ಲ.

ಕೋಣೆಯಲ್ಲಿ ಕಿಟಕಿ ಇತ್ತು, ಆದ್ರೆ ಒಳಗಿನಿಂದ ನೋಡಿದ್ರೆ ಸಮುದ್ರ ಕಾಣಿಸುತ್ತಿರಲಿಲ್ಲ. ಯಾಕಂದ್ರೆ  ಕಿಟಕಿ ಮಧ್ಯೆ ಬೀಚ್ ಇರೋ ಫೋಟೋವನ್ನು ಹಾಕಲಾಗಿತ್ತು. ಆ ಫೋಟೋವನ್ನೇ ಬೀಚ್ ವ್ಯೂವ್ ಎಂದು ತಿಳಿದು ಸೋಂಜಾ ರೂಮ್ ಬುಕ್ ಮಾಡಿದ್ದಳು. ಅದು ಸಹ ಗ್ರೌಂಡ್ ಫ್ಲೋರ್‌ನಲ್ಲಿತ್ತು ಎಂದು ಸೋಂಜಾ ಡೆನಿಗ್ ಹೇಳಿಕೊಂಡಿದ್ದಾರೆ.

ಹೌದು, ಈ ಬಗ್ಗೆ ಯುವತಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಈ ಪೋಸ್ಟ್ ನೋಡಿದ ನೆಟ್ಟಿಗರು, ವಿಷಯ ಹಂಚಿಕೊಂಡಿದ್ದು, ಒಳ್ಳೆದಾಯ್ತು. ಕೆಲವೊಮ್ಮೆ ಎಷ್ಟೇ ಮುಂಜಾಗ್ರತ ಕ್ರಮ ತೆಗೆದುಕೊಂಡರೂ ನಾವು ಮೋಸ ಹೋಗುತ್ತವೆ. ಆದರೆ ಇದು ಮೋಸವಲ್ಲ, ನೀವು ಮಾಡಿಕೊಂಡ ಎಡವಟ್ಟು ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಈ ಪೋಸ್ಟ್ ನೋಡಿ, ಪೋಟೋ ತುಂಬಾ ನೈಜವಾಗಿ ಕಾಣಿಸಿದ್ರಿಂದ ಈ ರೀತಿ ಗೊಂದಲ ಆಗಿರಬಹುದು ಎಂದು ಸೋಂಜಾಗೆ ಸಮಾಧಾನ ಮಾಡಿದ್ದಾರೆ. ಸದ್ಯ ಇನ್ನಾದರೂ ಹುಷಾರಾಗಿರಿ ಅಂದಿದ್ದಾರೆ.

1 Comment
  1. ousyenfbea says

    Muchas gracias. ?Como puedo iniciar sesion?

Leave A Reply

Your email address will not be published.