Bengaluru: ಸಿಲಿಕಾನ್ ಸಿಟಿ ಜನರಿಗೆ ಸಿಹಿಸುದ್ದಿ : ರಾತ್ರಿ 1 ಗಂಟೆಗೂ ತೆರೆದಿರುತ್ತೆ ಬೆಂಗಳೂರಿನ ಬಾರ್, ಹೋಟೆಲ್‌ಗಳು
Bengaluru: ಉದ್ಯಾನ ನಗರಿ ಬೆಂಗಳೂರು ಜನ ಮಲಗೋದೇ ರಾತ್ರಿ ಒಂದು ಗಂಟೆ ಮೇಲೆ. ಅಷ್ಟರವರೆಗೆ ಜನ ಓಡಾಡುತ್ತಲೇ ಇರುತ್ತಾರೆ. ರಾಜಧಾನಿ ಅಂದ ಮೇಲೆ ವ್ಯವಹಾರ, ಓಡಾಟ, ಕೆಲಸ ಎಲ್ಲವೂ ಜಾಸ್ತಿ. ಅದರಲ್ಲೂ ಬೆಂಗಳೂರು ನಗರದಲ್ಲಿ ಕೇಳಬೇಕೇ.. ರಾತ್ರಿ ಹತ್ತಕ್ಕೆ ಬಾರ್, ಹೊಟೇಲ್‌ಗಳು ಬಂದ್ ಆದರೆ ಜನ ಆಹಾರಕ್ಕಾಗಿ, ಎಣ್ಣೆಗಾಗಿ ಪರದಾಡಬೇಕಾಗುತ್ತದೆ. ಮೊದಲು ರಾತ್ರಿ ೧೧ ಗಂಟೆವರೆಗೆ ಮಾತ್ರ ಬಾರ್, ಹೊಟೇಲ್ ತೆರೆಯಲು ಅವಕಾಶ ಇತ್ತು.
ಆದರೆ ಇನ್ನು ಬೆಂಗಳೂರಿನಲ್ಲಿ ಮಧ್ಯರಾತ್ರಿವರೆಗೂ ಬಾರ್, ಹೋಟೆಲ್ ತೆರೆದಿಡಲು ಅವಕಾಶ ಸಿಕ್ಕಿದೆ. ಹೌದು ರಾಜ್ಯ ಸರ್ಕಾರ ಈ ಬಗ್ಗೆ ಆದೇಶ ಹೊರಡಿಸಿದೆ. ಬಾರ್, ಹೋಟೆಲ್ ಮಾಲೀಕರು ಸುಮಾರು ವರ್ಷಗಳಿಂದ ಸರ್ಕಾರದ ಮುಂದೆ ಈ ಬೇಡಿಕೆ ಇಟ್ಟಿದ್ದರು. ಆದರೆ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಇದಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿರಲಿಲ್ಲ. ಇದೀಗ ಕೊನೆಗೂ ಓಕೆ ಎಂದಿದೆ. ಹೊಟೇಲ್, ಬಾರ್ ಓಪನ್ ಇಡುವ ಸಮಯದ ಅವಧಿ ವಿಸ್ತರಿಸಿ ಸರ್ಕಾರದ ಅಧೀನ ಕಾರ್ಯದರ್ಶಿ ಲಕ್ಷ್ಮಿ ಸಾಗರ್ ಆದೇಶ ಹೊರಡಿಸಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
ಎಷ್ಟು ಗಂಟೆ ತೆರೆಯಲು ಅವಕಾಶ?
ಸಿಎಲ್ 4: ಬೆಳಗ್ಗೆ 9 ರಿಂದ ಮಧ್ಯರಾತ್ರಿ 1 ಗಂಟೆ
ಸಿಎಲ್ 6(ಎ): ಬೆಳಗ್ಗೆ 9 ರಿಂದ ಮಧ್ಯರಾತ್ರಿ 1 ಗಂಟೆ
ಸಿಎಲ್ 7: ಬೆಳಗ್ಗೆ 9 ರಿಂದ ಮಧ್ಯರಾತ್ರಿ 1 ಗಂಟೆ
ಸಿಎಲ್ 7ಡಿ – ಬೆಳಗ್ಗೆ 9 ರಿಂದ ಮಧ್ಯರಾತ್ರಿ 1 ಗಂಟೆ
ಸಿಎಲ್ 9 – ಬೆಳಗ್ಗೆ 10 ರಿಂದ ಮಧ್ಯರಾತ್ರಿ 1 ಗಂಟೆ