Tracked Aircraft : ಇಡೀ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್ ಮಾಡಲಾದ ವಿಮಾನ ಯಾವುದು ?! ಗೊತ್ತಾದ್ರೆ ಶಾಕ್ ಆಗೋದು ಪಕ್ಕಾ

Share the Article

Tracked Aircraft : ವಿಮಾನಗಳನ್ನು ಟ್ರ್ಯಾಕ್ ಮಾಡುವ ಬಗ್ಗೆ ಎಲ್ಲರಿಗೂ ತಿಳಿದಿರುತ್ತದೆ. ಆದರೆ ವಿಶ್ವದಲ್ಲೇ ಅತೀ ಹೆಚ್ಚು ಟ್ರ್ಯಾಕ್ ಮಾಡಲಾದ ವಿಮಾನದ ಬಗ್ಗೆ ನಿಮಗೆ ಗೊತ್ತಾ? ಗೊತ್ತಾದ್ರೆ ನಿಮಗೂ ಒಮ್ಮೆ ಅಚ್ಚರಿ ಆಗುತ್ತೆ. ಯಾಕೆಂದರೆ ಅದು ಬಾಂಗ್ಲಾ ದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ದೇಶದಿಂದ ಪಲಾಯನ ಮಾಡಲು ಬಳಸಿದ ವಿಮಾನ !!

ಹೌದು, ಬಾಂಗ್ಲಾ(Bangla) ದೇಶದಲ್ಲಿ ಹಿಂಸಾಚಾರ, ಪ್ರತಿಭಟನೆಗಳು ಜೋರಾದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ ಪ್ರಧಾನಿ ಶೇಖ್ ಹಸೀನಾ ಅವರು ದೇಶದಿಂದ ಭಾರತಕ್ಕೆ ಪಲಾಯನ ಮಾಡಲು ಪ್ರಯಾಣಿಸಿದ ವಿಮಾನವು ಇಡೀ ವಿಶ್ವದಲ್ಲೇ ಹೆಚ್ಚು ಟ್ರ್ಯಾಕ್ ಮಾಡಿದ ವಿಮಾನ ಆಗಿದೆ. ಸೋಮವಾರ(ಆ.8) ಮಧ್ಯಾಹ್ನ ಭಾರತಕ್ಕೆ ಈ ವಿಮಾನ ಆಗಮಿಸಿದ್ದು, ಅವರ ಈ ವಿಮಾನವು ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್ ಮಾಡಿದಂತ ವಿಮಾನ ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಿದೆ.

ಅಂದಹಾಗೆ ನೈಜ ಸಮಯದಲ್ಲಿ ವಾಯು ಸಂಚಾರವನ್ನು ಪ್ರದರ್ಶಿಸುವ ಫ್ಲೈಟ್ರಡಾರ್ 24 ವೆಬ್ಸೈಟ್ ಪ್ರಕಾರ, AJAX1431 ಬಾಂಗ್ಲಾದೇಶ ವಾಯುಪಡೆಯ ವಿಮಾನವನ್ನು 29,000 ಕ್ಕೂ ಹೆಚ್ಚು ಜನರು ಟ್ರ್ಯಾಕ್ ಮಾಡುತ್ತಿದ್ದಾರೆ. ಇದು ಈಗ ವಿಶ್ವದ ಅತಿ ಹೆಚ್ಚು ಟ್ರ್ಯಾಕ್ ಮಾಡಲಾದ ವಿಮಾನವಾಗಿದೆ.

Leave A Reply