Wayanad Landslide: ದುರಂತ ನಡೆದು 8 ದಿನವಾದರೂ ಮುಂದುವರೆದ ಶೋಧಕಾರ್ಯ: 40 ಕಿಮೀ ವ್ಯಾಪ್ತಿಯಲ್ಲಿ ಕಾಣೆಯಾದವರಿಗಾಗಿ ಹುಡುಕಾಟ
Wayanad Landslide: ವಯನಾಡು ಭೂಕುಸಿತ (Wayanad Landslides) ದುರಂತಕ್ಕೆ ಇಂದಿಗೆ ಎಂಟನೇ ದಿನ. ಮಳೆ ನಿಂತರೂ ಮಳೆ ಹನಿ ನಿಂತಿಲ್ಲ ಅನ್ನುವ ಹಾಗೆ ಅಲ್ಲಿಯ ಕರಾಳ ಛಾಯೆ ಇನ್ನು ಮಾಸಿಲ್ಲ. ಮೊಗೆದಷ್ಟು ಹೆಣಗಳು ಸಿಗುತ್ತಲೇ ಇವೆ. ಕಾಣೆಯಾದವರ ಸುಳೀವು ಸಿಕ್ತಿಲ್ಲ. ಈಗಾಗಲೇ ಸತ್ತವರ ಸಂಖ್ಯೆ 400ಕ್ಕೂ ಅಧಿಕ. ಇನ್ನೂ ಕಾಣೆಯಾದವರು 250ಕ್ಕೂ ಹೆಚ್ಚು ಮಂದಿಯನ್ನು ಇನ್ನು ಪತ್ತೆ ಹಚ್ಚಬೇಕಿದೆ. ಮುಂಡಕ್ಕೈ, ಚುರಲ್ಮಲದಲ್ಲಿ ಇಂದೂ ಶೋಧಕಾರ್ಯ ಮುಂದುವರಿದಿದೆ. ಚಲಿಯಾರ್ ನದಿ ವ್ಯಾಪ್ತಿಯಲ್ಲಿ ಸುಮಾರು 40 ಕಿಲೋಮೀಟರ್ ಉದ್ದಗಲಕ್ಕೂ ಶವಗಳಿಗಾಗಿ ಹುಡುಕಾಟ ನಡೆಯುತ್ತಿದೆ. ಈ ಮದ್ಯೆ ರಕ್ಷಣಾ ಕಾರ್ಯಕ್ಕೆಂದು ಬಂದ 18 ರಕ್ಷಣಾ ಸಿಬ್ಬಂದಿ ಕಾಂತನ್‌ಪಾರಾ ಬಳಿ ಅಪಾಯಕ್ಕೆ ಸಿಲುಕಿದ್ದರು. ಅವರನ್ನು ಹೆಲಿಕಾಪ್ಟರ್ ಮೂಲಕ ರಕ್ಷಿಣೆ ಮಾಡಿಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ವಯನಾಡಿನಲ್ಲಿ ಗುಡ್ಡ ಕುಸಿತ ಇನ್ನು ಸಂಭವಿಸುತ್ತಲೇ ಇದೆ. ಚುರುಲ್ಮಲದ (chooralmala) ನೀತು ಜೋಜೋ ಎಂಬ ಮಹಿಳೆ ರಾತ್ರಿಯಲ್ಲಿ ಸಹಾಯಕ್ಕಾಗಿ ಕರೆ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸೇನೆ ಈಗಲೇ ಬರುತ್ತೇವೆ ಎಂದು ಭರವಸೆ ನೋಡಿ, ಅಲ್ಲಿ ಹೊರಟಿದ್ದರು. ಆದರೆ ಜಲಸ್ಫೋಟದ ತೀವ್ರತೆಗೆ ಅವರಿಗೆ ನೀತು ಜೋಜೋ ಅವರನ್ನು ತಲುಪಲಾಗಲಿಲ್ಲ. ಆದರೆ ದುರಾದೃಷ್ಟವಶಾತ್ ನೀತು ಅವರು ಸಾವನ್ನಪ್ಪಿದ್ದಾರೆ. ಅವರ ಶವ ದಿಬ್ಬದಲ್ಲಿ ಪತ್ತೆಯಾಗಿರುವ ಬಗ್ಗೆ ರಕ್ಷಣಾ ತಂಡ ಮಾಹಿತಿ ನೀಡಿದೆ.
ಇನ್ನು, ಚುರಲ್ಮಲದಲ್ಲಿದ್ದ ಕೂಡು ಕುಟುಂಬ ಒಬ್ಬರನ್ನು ಬಿಟ್ಟು ಮಿಕ್ಕ 15 ಮಂದಿಯೂ ಸಾವನ್ನಪ್ಪಿದ್ದಾರೆ. ಅಂದು ರಾತ್ರಿ ಬೇರೆ ಊರಿಗೆ ಹೋಗಿದ್ದ ಕಾರಣ ಅವರೋಬ್ಬರು ಉಳಿದುಕೊಂಡಿದ್ದಾರೆ. ಘಟನೆ ನಡೆದ ದಿನದಿಂದ ತಮ್ಮವರಿಗಾಗಿ ಹುಡುಕಾಡುತ್ತಿದ್ದಾರೆ. ಈವರೆಗೂ ನಾಲ್ಕು ಮಂದಿಯ ಶವಗಳಷ್ಟೇ ಸಿಕ್ಕಿವೆ. ಉಳಿದವರಿಗಾಗಿ ರಸೂಲ್ ಹುಡುಕಾಟ ನಡೆಸುತ್ತಿದ್ದಾರೆ. ಮನೆ ಮಠ, ತಮ್ಮ ಕುಟುಂಬದವರನ್ನು ಕಳೆದುಕೊಂಡು ಮುಂದೆ ಏನು ಮಾಡಬೇಕು ಎಂದು ತೋಚದೆ ಸಂತ್ರಸ್ತರು ಕಣ್ಣೀರು ಇಡುತ್ತಿದ್ದಾರೆ. ಅವರಿಗೆ ಬದುಕಿಯೂ ಸತ್ತ ಹೆಣದಂತೆ ಬದುಕುವ ಪರಿಸ್ಥಿತಿ ಬಂದೊದಗಿದೆ.