Sheikh Hasina: ಬಾಂಗ್ಲಾದಲ್ಲಿ ಭುಗಿಲೆದ್ದ ಆಕ್ರೋಶ – ಪ್ರಧಾನಿ ಸ್ಥಾನಕ್ಕೆ ಶೇಖ್ ಹಸೀನಾ ರಾಜಿನಾಮೆ, ಭಾರತಕ್ಕೆ ಬಂದು ಅಜ್ಞಾತ ಸ್ಥಳಕ್ಕೆ ಪಲಾಯನ !!
Sheikh Hasina: ಬಾಂಗ್ಲಾ(Bangla) ದೇಶದಲ್ಲಿ ವಿಶೇಷ ಉದ್ಯೋಗ ಕೋಟಾ ಕುರಿತು ಮಾರಣಾಂತಿಕ ಪ್ರತಿಭಟನೆಗಳ ಹಿಂಸಾಚಾರ ಭುಗಿಲೆದ್ದಿದ್ದು, ಈ ಮಧ್ಯೆ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ( Sheikh Hasina)ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ, ದೇಶದಿಂದ ಭಾರತಕ್ಕೆ ಪಲಾಯನ ಮಾಡಿದ್ದಾರೆ . ಇನ್ನು ಭಾರತದ ತ್ರಿಪುರಾದಲ್ಲಿ ಅವ್ರ ಹೆಲಿಕಾಪ್ಟರ್ ಲ್ಯಾಂಡ್ ಆಗಿದ್ದು, ಅಜ್ಞಾತ ಸ್ಥಳಕ್ಕೆ ಅವ್ರನ್ನ ಬಿಎಸ್‍ಎಫ್(BSF) ಶಿಫ್ಟ್ ಮಾಡಲಾಗಿದೆ ಎನ್ನಲಾಗಿದೆ.
ಸುಮಾರು 300 ಜನರ ಸಾವಿಗೆ ಕಾರಣವಾದ ಮೀಸಲಾತಿ ಪ್ರತಿಭಟನೆಯ ಮಧ್ಯೆ ಪ್ರತಿಭಟನಾಕಾರರು ಹಸೀನಾ ಅವರ ರಾಜೀನಾಮೆಗೆ ಒತ್ತಾಯಿಸಿದ ನಂತ್ರ ಈ ಬೆಳವಣಿಗೆ ನಡೆದಿದೆ. ಹೀಗಾಗಿ ಭದ್ರತಾ ಪಡೆ (BSF) ಭಾರತ-ಬಾಂಗ್ಲಾದೇಶ ಗಡಿಯ 4,096 ಕಿ.ಮೀ ಉದ್ದಕ್ಕೂ ಎಲ್ಲಾ ಘಟಕಗಳಿಗೆ ‘ಹೈ ಅಲರ್ಟ್’ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಸೇನಾ ಮುಖ್ಯಸ್ಥ ವೇಕರ್ ಉಝ್ ಝಮಾನ್ ಈ ವಿಚಾರವನ್ನು ದೃಢಪಡಿಸಿದ್ದು, ಶೇಖ್ ಹಸೀನಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ತಾನು ಆಡಳಿತ ಸೂತ್ರ ಹಿಡಿದಿದ್ದು, ಮಧ್ಯಂತರ ಸರ್ಕಾರ ಅಧಿಕಾರ ವಹಿಸಿಕೊಳ್ಳುತ್ತಿದೆ ಎಂದು ಹೇಳಿದ್ದಾರೆ. ಸೋಮವಾರ ಮಧ್ಯಾಹ್ನ ಶೇಖ್ ಹಸೀನಾ ಅವರ ಅಧಿಕೃತ ನಿವಾಸಕ್ಕೆ ಪ್ರತಿಭಟನಾಕಾರರು ನುಗ್ಗಿದ್ದರು. ನೂರಾರು ಜನ ಅಲ್ಲಿ ನುಗ್ಗಿ ದಾಂಧಲೆ ಉಂಟುಮಾಡಲಾರಂಭಿಸಿದ ಕಾರಣ ಪರಿಸ್ಥಿತಿ ಕೈ ಮೀರಿ ಹೋಗಿದೆ ಎಂದು ಅಲ್ಲಿನ ಟಿವಿ ಸುದ್ದಿವಾಹಿನಿ ಚಾನೆಲ್ 24 ವರದಿ ಮಾಡಿದೆ.