Road Hypnosis: ರೋಡ್ ಹಿಪ್ನಾಸಿಸ್ ಎಂದರೇನು? ರಸ್ತೆ ಅಪಘಾತಕ್ಕೆ ಇದು ಒಂದು ಕಾರಣ..

Road Hypnosis: ರೋಡ್ ಹಿಪ್ನಾಸಿಸ್ ಎನ್ನುವುದು ಹೆಚ್ಚಿನ ಚಾಲಕರಿಗೆ ತಿಳಿದಿರದ ದೈಹಿಕ ಸ್ಥಿತಿಯಾಗಿದೆ. ರಸ್ತೆಯಲ್ಲಿ 2.5 ಗಂಟೆಗಳ ಕಾಲ ಚಾಲನೆ ಮಾಡಿದ ನಂತರ ಇದು ಪ್ರಾರಂಭವಾಗುತ್ತದೆ. ಹೈವೇ ಹಿಪ್ನೋಸಿಸ್‌ನ್ನು ಮನಸ್ಸಿನ ಕನಸಿನ ಗೆರೆ ಅಥವಾ ಡ್ರೀಮ್ ಲೈನ್ ಸ್ಥಿತಿ ಅಂತ ಹೇಳ್ತಾರೆ. ಒಂದೇ ರೀತಿಯ ರಸ್ತೆಯಲ್ಲಿ ಒಂದು ಹಂತದ ಚಾಲನೆಯ ನಂತರ ಮೆದುಳಿನ ಒಂದು ಭಾಗ ಕಾರ್ಯಪ್ರವೃತ್ತವಾಗಿರುತ್ತದೆ. ಆಗ ಕೈ ಸ್ಟೇರಿಂಗ್‌ನಲ್ಲೇ ಇರುತ್ತೆ, ಕಣ್ಣು ನೇರ ರಸ್ತೆಯ ಮೇಲೆ ಇರುತ್ತೆ. ಆದರೆ ಮೆದುಳಿನ ಉಳಿದ ಅರ್ಧ ಭಾಗ ಮಾತ್ರ ನಿದ್ದೆ ಹೋಗಿರುತ್ತೆ.

ಹೆದ್ದಾರಿ ಸಂಮೋಹನಕ್ಕೆ ಕಾರಣವೇನು?

ರಸ್ತೆ ಸಂಮೋಹನವು ನಿಮ್ಮ ಮುಂದೆ ನಿಲ್ಲಿಸಿದ ವಾಹನ ಅಥವಾ ಟ್ರಕ್‌ಗೆ ಡಿಕ್ಕಿ ಹೊಡೆಯಲು ಮೊದಲ ಕಾರಣವಾಗಿದೆ. ರಸ್ತೆ ಸಂಮೋಹನದೊಂದಿಗಿನ ಚಾಲಕನಿಗೆ ಅಪಘಾತದ ಕ್ಷಣದವರೆಗೆ ಕೊನೆಯ 15 ನಿಮಿಷಗಳು ನೆನಪಿರುವುದಿಲ್ಲ. ಅವರು ತಮ್ಮದೇ ಆದ ವೇಗವನ್ನು ಅಥವಾ ಅವರ ಮುಂದೆ ಇರುವ ವಾಹನದ ವೇಗವನ್ನು ವಿಶ್ಲೇಷಿಸಲು ಸಾಧ್ಯವಿಲ್ಲ; ಸಾಮಾನ್ಯವಾಗಿ, ಅಪಘಾತವು ಗಂಟೆಗೆ 140 ಕಿಮೀ ವೇಗದಲ್ಲಿ ಸಂಭವಿಸುತ್ತದೆ.

ರಸ್ತೆ ಖಾಲಿಯಾಗಿದ್ದಾಗ ಅಥವಾ ನೋಡಲು ಏನೂ ಎದುರಿಗೆ ಇಲ್ಲದಿದ್ದಾಗ, ಹೆದ್ದಾರಿ ಸಂಮೋಹನ ಉಂಟಾಗುತ್ತದೆ. ಇದರಿಂದ ಮನಸ್ಸು ಬಹುಬೇಗ ಸುಸ್ತಾಗಲು ಆರಂಭವಾಗುತ್ತದೆ. ಇದಲ್ಲದೆ ಮೆದುಳು ಕೆಲವು ಊಹೆಗಳನ್ನು ಮಾಡಲು ಆರಂಭಿಸಿದಾಗ ಹೈವೇ ಹಿಪ್ನಾಸಿಸ್ ಸಂಭವಿಸುವ ಸಾಧ್ಯೆತೆ ಇದೆ. ಮುಂದಿರುವ ಹೆದ್ದಾರಿ ಸಂಪೂರ್ಣ ಖಾಲಿಯಾಗಿದೆ ಎಂದು ಚಾಲಕನ ಕಣ್ಣುಗಳಿಂದ ಕಂಡಾಗ , ಮೆದುಳು ನಿಧಾನವಾಗಿ ರೆಟಿನಾದ ಪ್ರತಿಕ್ರಿಯೆಗಳನ್ನು ಅವಲಂಬಿಸುವುದನ್ನು ನಿಲ್ಲಿಸುತ್ತದೆ. ಇದು ಮಾನಸಿಕವಾಗಿ ಬರುವ ಮುನ್ಸೂಚನೆಗಳನ್ನು ನಂಬಲು ಆರಂಭಿಸುತ್ತದೆ. ಈ ವೇಳೆ ಮೆದುಳು ಕಡಿಮೆ ಜಾಗರೂಕತೆಯನ್ನು ಉಂಟುಮಾಡುತ್ತದೆ.

ಹಿಪ್ನಾಸಿಸ್ ಅನ್ನು ಹೇಗೆ ನಿಯಂತ್ರಿಸುವುದು?
ಈಗ, “ಹೈವೇ ಹಿಪ್ನಾಸಿಸ್ ಅನ್ನು ನಿಯಂತ್ರಿಸುವುದು ಹೇಗೆ?” ಎಂಬ ಪ್ರಶ್ನೆ ಉಂಟಾಗುತ್ತದೆ. ಸರಳವಾದ ಉತ್ತರ ಅಂದ್ರೆ ಮನಸ್ಸನ್ನು ಚಟುವಟಿಕೆಯಿಂದ ಇಡೋದು. ಅದಕ್ಕಾಗಿ, ನೀವು ಕಾರಿನಲ್ಲಿ ಚಾಲನೆ ಮಾಡ್ತಾ ಮ್ಯೂಸಿಕ್‌ ಕೇಳೋದು, ಅಥವಾ ನಿಮ್ಮ ಜೊತೆಗೆ ಇರುವವರೊಂದಿಗೆ ಮಾತನಾಡೋದು. ಹೆದ್ದಾರಿಯಲ್ಲಿ ಕಾರಿನ ಗಾಜನ್ನು ಕೆಳಗಿಳಿಸಿ ತಾಜಾ ಗಾಳಿ ನಿಮ್ಮ ಮುಖಕ್ಕೆ ಹೊಡೆಯುವಂತೆ ಮಾಡೋದು. ಇದರೊಂದಿಗೆ ಕಾಫಿ ಕುಡಿಯಲು ಗಾಡಿ ನಿಲ್ಲಿಸುವುದು. ನಿಮ್ಮ ಸೀಟಿನಲ್ಲಿ ನೇರವಾಗಿ ಕುಳಿತು ಕಾರನ್ನು ಡ್ರೈವ್‌ ಮಾಡೋದು, ಲಘು ಆಹಾರ ತೆಗೆದುಕೊಂಡು ಚಾಲನೆ ಮಾಡೋದು ಹಾಗೂ ಕೆಲವು ಕಿಲೋಮೀಟರ್‌ ಸಾಗುತ್ತಿದ್ದಂತೆ ವಿರಾಮ ತೆಗೆದುಕೊಂಡು ಮುಂದಕ್ಕೆ ಸಾಗೋದನ್ನು ಮಾಡಿ.

ರಸ್ತೆ ಸಂಮೋಹನದಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು, ಪ್ರತಿ 2.5 ಗಂಟೆಗಳಿಗೊಮ್ಮೆ ನಿಲ್ಲಿಸುವುದು, ಚಾಲನೆ ಮಾಡುವಾಗ ನಿರ್ದಿಷ್ಟ ಸ್ಥಳಗಳು ಮತ್ತು ವಾಹನಗಳನ್ನು ಗಮನಿಸುವುದು ಮತ್ತು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ. ಕಳೆದ 15 ನಿಮಿಷಗಳು ನಿಮಗೆ ನೆನಪಿಲ್ಲದಿದ್ದರೆ, ನೀವು ನಿಮ್ಮನ್ನು ಮತ್ತು ನಿಮ್ಮ ಪ್ರಯಾಣಿಕರನ್ನು ಸಾವಿನ ಕಡೆಗೆ ಕರೆದೊಯ್ಯುತ್ತಿದ್ದೀರಿ ಎಂದರ್ಥ. ರಸ್ತೆ ಸಂಮೋಹನವು ರಾತ್ರಿಯಲ್ಲಿ ಹೆಚ್ಚಾಗಿ ಸಂಭವಿಸುತ್ತದೆ ಮತ್ತು ಪ್ರಯಾಣಿಕರು ಸಹ ನಿದ್ರಿಸುತ್ತಿದ್ದರೆ, ಪರಿಸ್ಥಿತಿಯು ಅತ್ಯಂತ ಗಂಭೀರವಾಗಿದೆ. 5-6 ನಿಮಿಷಗಳ ಕಾಲ ವಿಶ್ರಾಂತಿ ಪಡೆಯಬೇಕು, ನಡೆಯಬೇಕು ಮತ್ತು ಅವರ ಮನಸ್ಸನ್ನು ತೆರೆದಿರಬೇಕು. ಕಣ್ಣು ತೆರೆದಿದ್ದರೂ ಮನಸ್ಸು ಮುಚ್ಚಿದ್ದರೆ ಅಪಘಾತ ಅನಿವಾರ್ಯ. ಸುರಕ್ಷಿತವಾಗಿರಿ ಮತ್ತು ಸುರಕ್ಷಿತವಾಗಿ ಚಾಲನೆ ಮಾಡಿ.

1 Comment
  1. lrhgzggrex says

    Muchas gracias. ?Como puedo iniciar sesion?

Leave A Reply

Your email address will not be published.