Bangladesh: ಬಾಂಗ್ಲಾದಲ್ಲಿ ಸೇನಾಡಳಿತ – ಭಾರತಕ್ಕೆ ಎದುರಾಗಲಿದೆ ದೊಡ್ಡ ಹೊಡೆತ !! ಯಾಕಾಗಿ?
Bangaldesh: ದೇಶಾದ್ಯಂತ ಹಿಂಸಾಚಾರ, ಘರ್ಷಣೆಗಳು (Bangladesh Protests) ಭುಗಿಲೆದ್ದ ಹಿನ್ನೆಲೆಯಲ್ಲಿ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ (Bangladesh Prime Minister Sheikh Hasina) ಅವರು ರಾಜೀನಾಮೆ ನೀಡಿ ರಾಜಧಾನಿ ಢಾಕಾವನ್ನು (Dhaka) ತೊರೆದು ಭಾರತಕ್ಕೆ ಪಲಾಯನ ಮಾಡಿದ್ದಾರೆ. ಈ ಬೆನ್ನಲ್ಲೇ ಬಾಂಗ್ಲಾದಲ್ಲಿ ಸೇನೆ ಆಡಳಿತವನ್ನು ಕೈಗೆತ್ತಿಕೊಂಡಿದೆ.
ಹೌದು, ಹಸೀನಾ ಅವರ ರಾಜೀನಾಮೆ ಬಳಿಕ ಮಾತನಾಡಿದ ಬಾಂಗ್ಲಾದೇಶ ಸೇನಾ ಮುಖ್ಯಸ್ಥ ವಾಕೆರ್- ಉಜ್ ಜಮಾನ್, ನಾವು ಮಧ್ಯಂತರ ಸರ್ಕಾರ ರಚಿಸಲಿದ್ದೇವೆ ಎಂದು ತಿಳಿಸಿದ್ದರು. ಅಲ್ಲದೆ ದೇಶದಲ್ಲಿ ಸೇನಾ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದಿರುವ ಅವರು, ಶಾಂತಿ ಕಾಪಾಡುವಂತೆ ಜನರಿಗೆ ಮನವಿ ಮಾಡಿದ್ದಾರೆ. “ಬಿಎನ್‌ಪಿ ಅವಾಮಿ ಲೀಗ್ ಮತ್ತು ನಾಗರಿಕ ಸಮಾಜದ ನಡುವಿನ ಚರ್ಚೆ ಬಹಳ ಪರಿಣಾಮಕಾರಿಯಾಗಿದೆ. ನಮಗೆ ಮಧ್ಯಂತರ ಸರ್ಕಾರ ರಚಿಸಿ ಶಾಂತಿಯನ್ನು ಮರಳಿ ಸ್ಥಾಪಿಸಲು ಸಾಧ್ಯವಾಗಲಿದೆ” ಎಂದು ಅವರು ಹೇಳಿದ್ದಾರೆ. ಇದು ಸಾಧ್ಯವಾದರೆ ಭಾರತಕ್ಕೂ ಕೂಡ ತಲೆನೋವು. ಯಾಕೆಂದು ಗೊತ್ತಾ ? ಇಲ್ಲಿದೆ ನೋಡಿ ಡೀಟೇಲ್ಸ್
• ಹತ್ತಿ, ಆಹಾರ ಪದಾರ್ಥ, ಸೆಣಬು, ಕಾಫಿ ಸೇರಿ ಹಲವು ವಸ್ತುಗಳನ್ನು ಬಾಂಗ್ಲಾಗೆ ಭಾರತ ರಫ್ತು ಮಾಡುತ್ತದೆ. ಅಲ್ಲಿನ ಸದ್ಯದ ಬೆಳವಣಿಗೆ ರಫ್ತಿಗೆ ಅಡ್ಡಿಯುಂಟಾಗಬಹುದು.
* ಈಗಾಗಲೇ ಪಾವತಿ ಬಾಕಿಯಂಥ ಸಮಸ್ಯೆಗಳು ಎದುರಾಗಿವೆ. ಈಗ ಅದು ಮತ್ತಷ್ಟು ಬಿಗಡಾಯಿಸಿ ಉಭಯ ರಾಷ್ಟ್ರಗಳ ವ್ಯಾಪಾರ ಸಂಬಂಧಕ್ಕೂ ತೊಡಕಾಗಬಹುದು.
* ದಂಗೆ ಹಿನ್ನೆಲೆಯಲ್ಲಿ ಬಾಂಗ್ಲಾದಿಂದ ಪರಾರಿಯಾದವರಿಗೆ ಆಶ್ರಯ ಒದಗಿಸಬೇಕಾದ ಸ್ಥಿತಿ ಎದುರಾಗಬಹುದು. ಗಡಿಯಲ್ಲಿನ ಸ್ಥಳೀಯರ ವಿರೋಧ ಎದುರಿಸಬೇಕಾಗಬಹುದು.
* ಬಾಂಗ್ಲಾದ ಮೂಲಕ ಪಾಕ್ ಉಗ್ರರನ್ನು ಭಾರತಕ್ಕೆ ಕಳುಹಿಸಬಹುದು.
*ಭಾರತ ವಿರೋಧಿ ಭಯೋತ್ಪಾದಕ ಸಂಘಟನೆಗಳಿಗೆ ಬಾಂಗ್ಲಾ ದೇಶದಲ್ಲಿ ನೆಲೆ ಸಿಗುವ ಅಪಾಯವೇ ಹೆಚ್ಚು.
* *ಬಾಂಗ್ಲಾ ದೇಶದಲ್ಲಿ ಪ್ರಮುಖ ಭೂ ಬಂದರು ಪೆಟ್ರಾಪೋಲ್‌ನಲ್ಲಿ ವ್ಯಾಪಾರ ಚಟುವಟಿಕೆಗಳು ಸ್ಥಗಿತಗೊಳ್ಳುವ ಸಾಧ್ಯತೆ ದಟ್ಟವಾಗಿದೆ.
*ಬಾಂಗ್ಲಾ ದೇಶದ ಸಂಭಾವ್ಯ ಸರಕಾರ ದೊಂದಿಗೆ ಚೀನ ಕೈ ಜೋಡಿಸಿ, ಭಾರತದ ವಿರುದ್ಧ ಕುತಂತ್ರ ರೂಪಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.