Jio Recharge Plan: ಜಿಯೋ ಗ್ರಾಹಕರಿಗೆ ಬಿಗ್ ಶಾಕ್! ಇನ್ಮೇಲೆ ದುಬಾರಿಯಾಗಲಿದೆ ಜಿಯೋ ಸೇವೆ !

Jio Recharge Plan: ಜಿಯೋ ಗ್ರಾಹಕರಿಗೆ ಶಾಕಿಂಗ್ ವಿಚಾರ ಒಂದು ಇಲ್ಲಿದೆ. ಹೌದು, ಮುಂದಿನ ದಿನಗಳಲ್ಲಿ ರಿಲಾಯನ್ಸ್ ಜಿಯೋದ ಪ್ರಮುಖ ಪ್ಲಾನ್​ಗಳಲ್ಲಿ ದೊಡ್ಡ ಬದಲಾವಣೆ ಆಗಲಿದ್ದು, ಜನಪ್ರಿಯವಾಗಿದ್ದ 395 ರೂ ಮತ್ತು 1,559 ರೂ ರೀಚಾರ್ಜ್ ಪ್ಲಾನ್ ನಿಲ್ಲಿಸಲಾಗಿದೆ. ಎಆರ್​ಪಿಯು ಅಥವಾ ಸರಾಸರಿ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಜಿಯೋ ಈ ಎರಡು ಜನಪ್ರಿಯ ಪ್ಲಾನ್​ಗಳನ್ನು ಕೈಬಿಟ್ಟಿದೆ ಎಂದು ಎನ್ನಲಾಗುತ್ತಿದೆ.

ರಿಲಾಯನ್ಸ್ ಜಿಯೋ ಕೈಬಿಟ್ಟಿರುವ 395 ರೂ ಪ್ಲಾನ್ 84 ದಿನಗಳ ವ್ಯಾಲಿಡಿಟಿ ಹೊಂದಿತ್ತು. 1,559 ರೂ ಪ್ಲಾನ್ 336 ದಿನದ ವ್ಯಾಲಿಡಿಟಿ ಹೊದಿತ್ತು. ಈ ಎರಡೂ ಪ್ಲಾನ್​ಗಳು ಅನ್​ಲಿಮಿಟೆಡ್ 5ಜಿ ಡಾಟಾ ಆಫರ್ ಮಾಡುತ್ತಿದ್ದವು. ಬಹಳಷ್ಟು ಗ್ರಾಹಕರು ಈ ಪ್ಲಾನ್​ಗಳನ್ನು ಸಬ್​ಸ್ಕ್ರೈಬ್ ಮಾಡಿದ್ದರು. ಇದು ಜಿಯೋದ ಎಆರ್​ಪಿಯುಗೆ (ಪ್ರತೀ ಬಳಕೆದಾರನಿಂದ ಸಿಗುವ ಸರಾಸರಿ ಆದಾಯ) ಹೊಡೆತ ಬಿದ್ದಿದೆ. ಈ ಕಾರಣಕ್ಕೆ ಪ್ಲಾನ್​ಗಳನ್ನು ಜಿಯೋ ಕೈಬಿಟ್ಟಿರಬಹುದು.

ಜುಲೈನಲ್ಲಿ ಜಿಯೋ ಕೈಗೊಂಡ ದರ ಹೆಚ್ಚಳ ಇಂತಿವೆ :

2ಜಿಬಿ ಡಾಟಾ ಮತ್ತು 28 ದಿನ ವ್ಯಾಲಿಡಿಟಿಯ ಪ್ಲಾನ್ ದರ 155 ರೂನಿಂದ 189 ರೂಗೆ ಹೆಚ್ಚಳ

ದಿನಕ್ಕೆ 1ಜಿಬಿ ಡಾಟಾ, 28 ದಿನ ವ್ಯಾಲಿಡಿಯ ಪ್ಲಾನ್ ದರ 209ರೂನಿಂದ 249 ರೂಗೆ ಏರಿಕೆ.

ದಿನಕ್ಕೆ 1.5ಜಿಬಿ ಡಾಟಾ, 28 ದಿನ ವ್ಯಾಲಿಡಿಟಿಯ ಪ್ಲಾನ್ ದರ 239 ರೂನಿಂದ 299 ರೂಗೆ ಏರಿಕೆ.

ದಿನಕ್ಕೆ 2ಜಿಬಿ ಡಾಟಾ, 28 ದಿನ ವ್ಯಾಲಿಡಿಟಿಯ ಪ್ಲಾನ್​ನ ದರ 299 ರೂನಿಂದ 349 ರೂಗೆ ಹೆಚ್ಚಳ.

ರಿಲಾಯನ್ಸ್ ಜಿಯೋದ ಈ ಬೇಸ್ ಪ್ಲಾನ್​ಗಳಷ್ಟೇ ಅಲ್ಲ, 84 ದಿನಗಳದ್ದು, 56 ದಿನಗಳದ್ದು, ಒಂದು ವರ್ಷದ್ದು ಹೀಗೆ ದೀರ್ಘಾವಧಿ ಪ್ಲಾನ್​ಗಳ ದರಗಳಲ್ಲಿ ಸಾಕಷ್ಟು ಹೆಚ್ಚಳ ಮಾಡಲಾಗಿದೆ. 365 ದಿನಗಳ ವ್ಯಾಲಿಡಿಟಿ ಮತ್ತು ದಿನಕ್ಕೆ 2.5 ಜಿಬಿ ಡಾಟಾ ಕೊಡುತ್ತಿದ್ದ 2,999 ರೂ ಪ್ಲಾನ್​ನ ದರವನ್ನು 600 ರೂನಷ್ಟು ಹೆಚ್ಚಿಸಲಾಗಿದೆ.

5ಜಿ ನೆಟ್ವರ್ಕ್​ಗೆ ಬಹಳಷ್ಟು ಹೂಡಿಕೆ ಮಾಡಿರುವ ಜಿಯೋ, ಬೆಲೆ ಏರಿಕೆ ಮಾಡುವುದು ಅನಿವಾರ್ಯ ಪರಿಸ್ಥಿತಿ ಆಗಿದೆ. ಇನ್ನು ಬಿಎಸ್ಸೆನ್ನೆಲ್ ಮಾತ್ರವೇ ಇನ್ನೂ 5ಜಿ ಅಖಾಡಕ್ಕೆ ಇಳಿಯದೇ ಇರುವುದು. ಹೀಗಾಗಿ, ಬಿಎಸ್ಸೆನ್ನೆಲ್ ಅಗ್ಗದ ದರದಲ್ಲಿ 3ಜಿ ಮತ್ತು 4ಜಿ ಸೇವೆ ನೀಡಿ, ಸಾಕಷ್ಟು ಗ್ರಾಹಕರನ್ನು ಸೆಳೆಯುವ ಕೆಲಸ ಮಾಡುತ್ತಿದೆ. ಆದರೆ, 5ಜಿ ಸರ್ವಿಸ್ ಬಯಸುವವರಿಗೆ ಜಿಯೋ, ಏರ್ಟೆಲ್, ವೊಡಾಫೋನ್ ಐಡಿಯಾ ಮಾತ್ರವೇ ಸದ್ಯಕ್ಕೆ ಇರುವ ಆಯ್ಕೆ ಆಗಿದೆ ಇದನ್ನು ಗಮನದಲ್ಲಿ ಇಟ್ಟುಕೊಂಡು ಬೆಲೆ ಏರಿಕೆ ಮುಂದಾಗಿರುವುದು ಕೂಡಾ ಒಂದು ಕಾರಣ ಎಂದರೆ ತಪ್ಪಾಗಲಾರದು.

Leave A Reply

Your email address will not be published.